ನಾವು ತೆರಿಗೆ ಕಳ್ಳರಲ್ಲ.. ಟ್ಯಾಕ್ಸ್ ಕಟ್ಟಲು ಹಿಂದೇಟು ಹಾಕುವುದಕ್ಕೆ ಕಾರಣಗಳೂ ಇವೆ ..?

ಈ ಸುದ್ದಿಯನ್ನು ಶೇರ್ ಮಾಡಿ

Income-Tax

ನವದೆಹಲಿ/ಬೆಂಗಳೂರು, ಡಿ.20-ಭಾರತೀಯರು ತೆರಿಗೆ ಪಾವತಿಸಲು ಏಕೆ ಹಿಂದೇಟು ಹಾಕುತ್ತಿದ್ದಾರೆ ಎಂಬ ಬಗ್ಗೆ ಕುತೂಹಲ ಮೂಡಿಸುವ ಕೆಲವೊಂದು ಸಂಗತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ವೃತ್ತಿಪರರು ಮತ್ತು ಉದ್ಯಮಿಗಳ ಪರವಾಗಿ ಕೆಲವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಹಿರಂಗ ಪತ್ರ ಬರೆದು ಕೆಲವು ಮಹತ್ವದ ಅಂಶಗಳನ್ನು ಅವರ ಗಮನಕ್ಕೆ ತಂದಿದ್ದಾರೆ.
ನಾವು ತೆರಿಗೆ ಕಳ್ಳರಲ್ಲ. ಆದರೆ ನಮ್ಮ ಕುಟುಂಬ, ನಮ್ಮನ್ನೇ ಅವಲಂಬಿಸಿರುವ ವಯಸ್ಸಾದ ತಂದೆ-ತಾಯಿ, ಹೆಂಡತಿ-ಮಕ್ಕಳು ಹಾಗೂ ಎಲ್ಲರ ಭವಿಷ್ಯಕ್ಕಾಗಿ ನಾವು ಚಿಂತಿಸಬೇಕಿದೆ. ನಾವು ತೆರಿಗೆ ಪಾವತಿಸದಿರಲು ಹಿಂದೇಟು ಹಾಕುವುದಕ್ಕೆ ಕಾರಣಗಳೂ ಇವೆ :
ನಾವು ಜನರೇಟರ್/ಇನ್‍ವರ್ಟರ್‍ಗಳನ್ನು ನಮ್ಮ ಮನೆಗೆ ಖರೀದಿಸುತ್ತೇವೆ, ಏಕೆಂದರೆ ಸರ್ಕಾರ ನಿರಂತರ ವಿದ್ಯುತ್ ಪೂರೈಸುವಲ್ಲಿ ವಿಫಲವಾಗಿದೆ.
* ನಾವು ಸಬ್‍ಮರ್ಸಿಬಲ್ ಪಂಪ್‍ಗಳನ್ನು ಅಳವಡಿಸುತ್ತೇವೆ. ಏಕೆಂದರೆ ಸರ್ಕಾರ ನೀರು ಪೂರೈಸುವಲ್ಲಿ ವಿಫಲವಾಗಿದೆ.
* ನಾವು ಸೆಕ್ಯೂರಿಟಿ ಗಾರ್ಡ್‍ನನ್ನು ನೇಮಕ ಮಾಡಿಕೊಳ್ಳುತ್ತೇವೆ, ಏಕೆಂದರೆ ನಮಗೆ ರಕ್ಷಣೆ ನೀಡಲು ವಿಫಲವಾಗಿದೆ.
* ನಾನು ನಮ್ಮ ಮಕ್ಕಳನ್ನು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಕಳುಹಿಸುತ್ತೇವೆ, ಏಕೆಂದರೆ ಸಾರ್ವಜನಿಕ ಶಾಲೆಗಳಲ್ಲಿ ಉತ್ತಮ ಶಿಕ್ಷಣ ನೀಡಲು ಸರ್ಕಾರ ವಿಫಲವಾಗಿದೆ.
* ನಮ್ಮ ಸೂಕ್ತ ಆರೈಕೆ ಮತ್ತು ಚಿಕಿತ್ಸೆಗಾಗಿ ನಾನು ಖಾಸಗಿ ಆಸ್ಪತ್ರೆಗಳ ಮೊರೆ ಹೋಗುತ್ತೇವೆ. ಏಕೆಂದರೆ ಸರ್ಕಾರ ಉತ್ತಮ ಸರ್ಕಾರಿ ಆಸ್ಪತ್ರೆಗಳನ್ನು ಒದಗಿಸುವಲ್ಲಿ ವಿಫಲವಾಗಿದೆ.
* ನಾವು ಕಾರುಗಳನ್ನು ಖರೀದಿಸುತ್ತೇವೆ, ಏಕೆಂದರೆ ಸರ್ಕಾರವು ಉತ್ತಮ ಸಾರಿಗೆ ವ್ಯವಸ್ಥೆ ಒದಗಿಸುವಲ್ಲಿ ವಿಫಲವಾಗಿದೆ.
ಅಂತಿಮವಾಗಿ, ತೆರಿಗೆ ಪಾವತಿದಾರರಿಗೆ ನಿವೃತ್ತಿಯಾದ ನಂತರ ಅವರು ಬದುಕಲು ಅಗತ್ಯವಾದ ಯಾವ ಪ್ರಯೋಜನಗಳು ಲಭಿಸುತ್ತದೆ?  ಏನೂ ಇಲ್ಲ. ಅವರಿಗೆ ಜೀವನಾಧಾರಕ್ಕೆ ಯಾವುದೇ ಭದ್ರತೆ ಇರುವುದಿಲ್ಲ.
ಬದಲಿಗೆ, ಒಬ್ಬ ವ್ಯಕ್ತಿ ಬೆವರು ಹರಿಸಿ ಗಳಿಸಿದ ಆದಾಯ ಸಂಪನ್ಮೂಲವನ್ನು ಸರ್ಕಾರವು ಯಾವುದೇ ತೆರಿಗೆ ಪಾವತಿಸದ ತೆರಿಗೆ ವಂಚಕರಿಂದ ಮುಕ್ತ ಮತಗಳನ್ನು ಗಳಿಸಲು ಕಲ್ಯಾಣ ಕಾರ್ಯಕ್ರಮಗಳ ಯೋಜನೆಯಲ್ಲಿ ಅಂಥ ಮಂದಿಗೆ ಸರ್ಕಾರದಿಂದ ಸಹಾಯಧನಗಳು, ಸಬ್ಸಿಡಿಗಳೂ ಮತ್ತು ಅನೇಕ ಸೌಲಭ್ಯ-ಸವಲತ್ತುಗಳನ್ನು ನೀಡುತ್ತಿದೆ.
ಎಲ್ಲಕ್ಕಿಂತ ಮಿಗಿಲಾಗಿ ಸರ್ಕಾರವು ನಮ್ಮ ಹಣವನ್ನು (ತೆರಿಗೆ) ಏನು ಮಾಡುತ್ತದೆ..?
* ನ್ಯಾಯಾಲಯಗಳನ್ನು ಆರಂಭಿಸುತ್ತವೆ-ಆದರೆ ಅಲ್ಲಿ ನಮಗೆ ನ್ಯಾಯ ಲಭಿಸುವುದಿಲ್ಲ.
* ಪೊ ಲೀಸ್ ಠಾಣೆಗಳನ್ನು ತೆರೆಯುತ್ತವೆ-ಆದರೆ ಅವು ಕಾರ್ಯನಿರ್ವಹಿಸುವುದು ರಾಜಕಾರಣಿಗಳು ಮತ್ತು ಪ್ರಭಾವಿಗಳಿಗೆ ಮಾತ್ರ. ಅವು ಸಾರ್ವಜನಿಕರಿಗೆ ರಕ್ಷಣೆ ನೀಡುವುದಿಲ್ಲ.
* ಸರ್ಕಾರಿ ಆಸ್ಪತ್ರೆಗಳನ್ನು ಸ್ಥಾಪಿಸುತ್ತವೆ-ಅಲ್ಲಿ ನಮಗೆ ಸೂಕ್ತ ಚಿಕಿತ್ಸೆ ಲಭಿಸುವುದಿಲ್ಲ.
* ಇನ್ನು ರಸ್ತೆಗಳನ್ನು ನಿರ್ಮಿಸುತ್ತವೆ-ಅದಕ್ಕೆ ವೆಚ್ಚ ಮಾಡುವ ಶೇ.40-100ರಷ್ಟು ಹಣ ಭ್ರಷ್ಟಾಚಾರದಿಂದಾಗಿ ನಿರರ್ಥಕವಾಗುತ್ತದೆ.
ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತವೆ… !
ಪಾಶ್ಚಿಮಾತ್ಯ ದೇಶಗಳಂತೆ, ಭಾರತ ಸರ್ಕಾರವೂ ಈ ಮೇಲಿನ ಎಲ್ಲ ಮೂಲಸೌಕರ್ಯಗಳನ್ನು ಸಮರ್ಪಕವಾಗಿ ಒದಗಿಸಿದರೆ ಯಾರೂ ತೆರಿಗೆ ವಂಚಕರಾಗುವುದಿಲ್ಲ, ಅಲ್ಲವೆ..???
ನಮ್ಮಿಂದ ಸಂಗ್ರಹಿಸಲಾಗುವ ಪ್ರಮುಖ ತೆರಿಗೆ ಆದಾಯಗಳನ್ನು ಸರ್ಕಾರಿ ಅಧಿಕಾರಿಗಳು ಮತ್ತು ರಾಜಕಾರಣಿಗಳು ಗುಳುಂ ಮಾಡುತ್ತಾರೆ (ವಿದೇಶಿ ಬ್ಯಾಂಕ್‍ಗಳಲ್ಲಿ ಶತಕೋಟ್ಯಂತರ ಡಾಲರ್ ಬೆಚ್ಚಗೆ ಸೇಫ್ ಲಾಕರ್‍ನಲ್ಲಿದೆ) ಎಂಬುದು ನಮಗೆಲ್ಲ ಗೊತ್ತು
ಈ ಎಲ್ಲ ಕಾರಣಗಳಿಂದ ತೆರಿಗೆ ಪಾವತಿಸಲು ಅನೇಕರು ಹಿಂದೇಟು ಹಾಕುತ್ತಾರೆ.
ನಾವು ತೆರಿಗೆ ಕಳ್ಳರಲ್ಲ. ಆದರೆ ಅನ್ಯ ಮಾರ್ಗವಿಲ್ಲದೇ ನಮ್ಮ ಅಗತ್ಯಗಳು, ನಮ್ಮ ಕುಟುಂಬಗಳ ಅನಿವಾರ್ಯತೆಗಳ ಪೂರೈಕೆ, ವೃದ್ದಾಪ್ಯದಲ್ಲಿ ಭದ್ರತೆ, ನಮ್ಮ ಸುರಕ್ಷತೆಗಾಗಿ ನಾನು ತೆರಿಗೆಯನ್ನು ಉಳಿಸುತ್ತಿದ್ದೇವೆ ಹೊರತು ಸರ್ಕಾರಕ್ಕೆ ವಂಚಿಸಬೇಕು ಎಂಬುದು ನಮ್ಮ ಉದ್ದೇಶ ಅಲ್ಲವೇ ಅಲ್ಲ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin