ಬೆಲೆ ಇಳಿಸಿದರೂ ವಿಜಯ್ ಮಲ್ಯನ ಮುಂಬೈನ ಕಿಂಗ್‍ಫಿಶರ್ ಹೌಸ್ ಖರೀದಿಸುವವರಿಲ್ಲ..!

ಈ ಸುದ್ದಿಯನ್ನು ಶೇರ್ ಮಾಡಿ

Vijay-Malya-01

ಮುಂಬೈ, ಡಿ.20-ಉದ್ದೇಶಪೂರ್ವಕ ಸುಸ್ತಿದಾರರಾಗಿ ದೇಶದಿಂದ ಪಲಾಯನ ಮಾಡಿರುವ ಕಳಂಕಿತ ಉದ್ಯಮಿ ವಿಜಯ್ ಮಲ್ಯರಿಗೆ ಸೇರಿದ ಮುಂಬೈನ ಕಿಂಗ್‍ಫಿಶರ್ ಹೌಸ್ ಹರಾಜು ಹಾಕುವಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‍ಬಿಐ) ಮೂರನೇ ಬಾರಿಯೂ ವಿಫಲವಾಗಿದೆ. ದರದಲ್ಲಿ ಗಣನೀಯ ಇಳಿಕೆ ಮಾಡಿದರೂ ಈ ಸ್ವತ್ತು ಖರೀದಿಸಲು ಯಾವ ಉದ್ಯಮಿಯೂ ಮುಂದೆ ಬರುತ್ತಿಲ್ಲ. ಮಲ್ಯ ನೀಡಬೇಕಿರುವ ಸಾಲದ ಮೊತ್ತಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ಮುಂಬೈನ ಫ್ಲಾಶ್ ವಿಲ್ಲೆ ಪ್ರದೇಶದಲ್ಲಿರುವ 17,000 ಚದರ ಅಡಿ ವಿಸ್ತೀರ್ಣದ ಕಿಂಗ್‍ಫಿಶರ್ ಹೌಸ್ ಭವ್ಯ ಬಂಗಲೆಯನ್ನು ಹರಾಜು ಹಾಕಲು ಎಸ್‍ಬಿಐ ಕಳೆದ ಮಾರ್ಚ್‍ನಿಂದಲೂ ಯತ್ನಿಸುತ್ತಲೇ ಇದೆ. ಅದೇ ತಿಂಗಳು ನಡೆದ ಮೊದಲ ಹರಾಜಿನಲ್ಲಿ ಕಿಂಗ್‍ಫಿಶರ್ ಹೌಸ್ ಹರಾಜು ಮೊತ್ತವನ್ನು 150 ಕೋಟಿ ರೂ.ಗಳಿಗೆ ನಿಗದಿಗೊಳಿಸಲಾಗಿತ್ತು. ಆದರೆ ಈ ಸ್ವತ್ತು ಮಾರಾಟವಾಗಲಿಲ್ಲ.

ನಂತರ ಎರಡನೇ ಹರಾಜಿನಲ್ಲಿ ಮೌಲ್ಯವನ್ನು 130 ಕೋಟಿ ರೂ.ಗಳಿಗೆ ಇಳಿಸಲಾಯಿತು. ಆಗಲೂ ಹರಾಜು ವಿಫಲವಾಯಿತು. ನಿನ್ನೆ ಮತ್ತೆ ಎಸ್‍ಬಿಐ ಮೂರನೇ ಬಾರಿಗೆ ಕಿಂಗ್‍ಫಿಶರ್ ಹೌಸ್ ಮೊತ್ತವನ್ನು 115 ಕೋಟಿ ರೂ.ಗಳಿಗೆ ಇಳಿಸಿತು. ಆದರೆ ಯಾವೊಬ್ಬ ಉದ್ಯಮಿಯೂ ಹರಾಜು ಪ್ರಕ್ರಿಯೆಯತ್ತ ತಲೆ ಹಾಕಲಿಲ್ಲ. ಹೀಗಾಗಿ ಮೂರನೇ ಆಕ್ಷನ್ ಕೂಡ ವಿಫಲಗೊಂಡಿದೆ. ದೇಶದ ವಿವಿಧ ಬ್ಯಾಂಕುಗಳಿಂದ 9,000 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಸಾಲ ಎತ್ತುವಳಿಗಳನ್ನು ಮಾಡಿ ತೀರಿಸಲಾಗಿದೆ ರಾತ್ರೋರಾತ್ರಿ ಇಂಗ್ಲೆಂಡ್‍ಗೆ ವಿಜಯ್ ಮಲ್ಯ ಹಾರಿದ್ದರು. ನ್ಯಾಯಾಲಯ ಅವರನ್ನು ಉದ್ದೇಶಪೂರ್ವಕ ಸುಸ್ತಿದಾರ ಎಂದು ಘೋಷಿಸಿತು. ನಂತರ ಅವರ ವಿವಿಧ ಆಸ್ತಿಪ್ರಾಸಿಗಳು ಮತ್ತು ಅಪಾರ ಪ್ರಮಾಣದ ಷೇರುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin