ಭಾರತೀಯ ರೈಲ್ವೆ ಸೇವೆಗಳ ಹೊರಗುತ್ತಿಗೆ ಚಿಂತನೆ

ಈ ಸುದ್ದಿಯನ್ನು ಶೇರ್ ಮಾಡಿ

Indi-Railway-01

ನವದೆಹಲಿ, ಡಿ.20-ಭಾರತೀಯ ರೈಲ್ವೆಯಲ್ಲಿ ಶುಶ್ರೂಷೆ ಸೇವೆಗಳಂತಹ ಕಾರ್ಯಗಳನ್ನು ಹೊರಗುತ್ತಿಗೆಗೆ ನೀಡುವ ಬಗ್ಗೆ ಗಂಭೀರ ಚಿಂತನೆ ನಡೆಸಲಾಗುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ. ಪ್ರಥಮ ಸಂಯೋಜಿತ ಸಾಮಾನ್ಯ ಮತ್ತು ರೈಲ್ವೆ ಬಜೆಟ್ ಮಂಡನೆಗೆ ಕೆಲವು ವಾರಗಳು ಬಾಕಿ ಇರುವಾಗಲೇ ಈ ಬಗ್ಗೆ ವಿತ್ತ ಸಚಿವರು ಹೇಳಿಕೆ ನೀಡಿದ್ದು, ರೈಲ್ವೆ ಇಲಾಖೆಯ ಆಂತರಿಕ ನಿರ್ವಹಣಾ ವ್ಯವಸ್ಥೆಯನ್ನು ಸದೃಢಗೊಳಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ರೈಲುಗಳಲ್ಲಿ ನೀಡಲಾಗುವ ಸೇವೆಗಳನ್ನು ಹೊರಗುತ್ತಿಗೆಗೆ ನೀಡಲು ಉದ್ದೇಶಿಸಲಾಗಿದೆ ಎಂದು ಹೇಳಿದರು.

ದೆಹಲಿಯಲ್ಲಿ ಸಿಐಐ ಏರ್ಪಡಿಸಿದ್ದ ರೈಲ್ವೆಗಳಲ್ಲಿ ಸುಧಾರಣೆ ಕುರಿತ ಸಮಾವೇಶದಲ್ಲಿ ಮಾತನಾಡಿದ ಅವರು, ಹೆದ್ದಾರಿಗಳಲ್ಲಿ ಹೈಟೆಕ್ ಬಸ್‍ಗಳು ಮತ್ತು ವಿಮಾನ ಯಾನಗಳಂತಹ ಇತರ ಕ್ಷೇತ್ರಗಳಲ್ಲಿ ಉತ್ತಮ ಸೇವೆ ಲಭಿಸುತ್ತಿದ್ದು, ರೈಲ್ವೆ ಇಲಾಖೆಗೆ ಸವಾಲು ಎದುರಾಗಿದೆ. ಈ ದೃಷ್ಟಿಯಿಂದ ರೈಲ್ವೆಯ ನಿರ್ವಹಣಾ ವ್ಯವಸ್ಥೆಯ ಸಾಮಥ್ರ್ಯವನ್ನು ಸುಧಾರಿಸುವ ಅಗತ್ಯವಿದೆ ಎಂದು ಅವರು ಹೇಳಿದರು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin