ಮುಂಬೈ ಏರ್ ಇಂಡಿಯಾ ಕಟ್ಟಡದಲ್ಲಿ ಅಗ್ನಿ ಆಕಸ್ಮಿಕ

ಈ ಸುದ್ದಿಯನ್ನು ಶೇರ್ ಮಾಡಿ

Air-India-01

ಮುಂಬೈ, ಡಿ.20-ಮುಂಬೈ ಮಹಾನಗರಿಯಲ್ಲಿ ಅಗ್ನಿ ದುರಂತಗಳು ಪುನರಾವರ್ತನೆಯಾಗುತ್ತಿದ್ದು, ದಕ್ಷಿಣ ಭಾಗದ ಗಗನಚುಂಬಿ ಏರ್ ಇಂಡಿಯಾ ಕಟ್ಟಡದ 22ನೇ ಮಹಡಿಯಲ್ಲಿ ಬೆಂಕಿ ಅನಾಹುತ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ.  ಈ ಕಟ್ಟಡದ ಎತ್ತರದ ಮಹಡಿಯಲ್ಲಿ ಬೆಂಕಿ ಸಂಭವಿಸಿದ ಸುದ್ದಿ ತಿಳಿದ ಕೂಡಲೇ ಎಂಟು ವಾಹನಗಳೊಂದಿಗೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ಕೆನ್ನಾಲಿಗಳನ್ನು ನಿಯಂತ್ರಿಸಿದರು. ಅದೃಷ್ಟವಶಾತ್ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ಅಗ್ನಿಶಾಮಕ ದಳದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.  ಈ ಕಟ್ಟಡವು ಬಿ+ಜಿ+22 (ಬೇಸ್‍ಮೆಂಟ್ ಮತ್ತು ನೆಲ ಮಹಡಿ ಮತ್ತು 22 ಅಂತಸುಗಳು) ವಿನ್ಯಾಸ ಹೊಂದಿದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin