ಯಡಿಯೂರಪ್ಪ ಜ್ಯೋತಿಷ್ಯ ಹೇಳಲಾರಂಭಿಸಿದ್ದಾರೆ : ಹೆಚ್ಡಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Yadiyurappa-vs-Kumaraswamy-

ಉತ್ತರ ಕನ್ನಡ, ಡಿ.20- ರಾಜ್ಯದ ಮುಖ್ಯಮಂತ್ರಿ ಯಾರೆಂದು ತೀರ್ಮಾನ ಮಾಡುವುದು ರಾಜ್ಯದ ಜನವೇ ಹೊರತು ಯಡಿಯೂರಪ್ಪ ಅಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಕಾರವಾರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಜ್ಯೋತಿಷಿ ಅಲ್ಲ ಎಂದು ತಿಳಿದುಕೊಂಡಿದ್ದೇನೆ. ಅವರು ಜ್ಯೋತಿಷಿಯಂತೆ ಭವಿಷ್ಯ ಹೇಳುತ್ತಿದ್ದಾರೆ. ಮುಖ್ಯಮಂತ್ರಿ ಯಾರೆಂದು ತೀರ್ಮಾನ ಮಾಡುವುದು ರಾಜ್ಯದ ಜನತೆ ಎಂದು ನೇರವಾಗಿ ಟಾಂಗ್ ಕೊಟ್ಟಿದ್ದಾರೆ. ಮಹದಾಯಿ ಸಮಸ್ಯೆ ಪ್ರಧಾನಿ ನರೇಂದ್ರಮೋದಿಯವರು ಮಧ್ಯಸ್ಥಿಕೆ ವಹಿಸಿ ಮಾತನಾಡಿದರೆ ಕೇವಲ ಮೂರು ನಿಮಿಷಗಳಲ್ಲಿ ಇತ್ಯರ್ಥವಾಗುತ್ತದೆ. ಆದರೆ, ಆ ಕೆಲಸವನ್ನು ಅವರು ಮಾಡುತ್ತಿಲ್ಲ. ರಾಜ್ಯದ ಬಿಜೆಪಿಯ 18 ಸಂಸದರಿಗಿಂತ ಗೋವಾದ ಇಬ್ಬರು ಸಂಸದರು ಅವರಿಗೆ ಮುಖ್ಯ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ರೈತರ ಪರವಾಗಿ ಬದ್ಧತೆ ಇದ್ದರೆ ಸಹಕಾರಿ ಸಂಘದಲ್ಲಿ ರೈತರು ಮಾಡಿರುವ ಸಾಲಮನ್ನಾ ಮಾಡಲಿ ಎಂದು ಹೇಳಿದರು.   ವಿರಾಜಪೇಟೆಯ ದಿಡ್ಡಹಳ್ಳಿಯಲ್ಲಿ ಸೂರಿಲ್ಲದೆ ಬೀದಿ ಪಾಲಾಗಿರುವವರ ಸಹಾಯಕ್ಕೆ ಸರ್ಕಾರ ಮುಂದಾಗದಿದ್ದರೆ ಇನ್ನೆರಡು ದಿನಗಳಲ್ಲಿ ನಾನೇ ಹೋರಾಟಕ್ಕೆ ಇಳಿಯುವೆ. ಈಗಾಗಲೇ ಸರ್ಕಾರದ ಗಮನ ಸೆಳೆಯಲಾಗಿದೆ. ಹುಡುಗಾಟಿಕೆ ಆಡುವುದನ್ನು ಬಿಟ್ಟು ಸಮಸ್ಯೆಗಳಿಗೆ ಸ್ಪಂದಿಸಲಿ ಎಂದು ಹೇಳಿದರು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin