ಸಂಸದ ಶ್ರೀರಾಮುಲು ಅವರ ಗನ್‍ಮ್ಯಾನ್‍ ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Sriramul;u

ಬಳ್ಳಾರಿ, ಡಿ.20-ಕರ್ನಾಟಕ ಭೂಸ್ವಾಧೀನ ಪ್ರಾಧಿಕಾರದ ವಿಶೇಷ ಅಧಿಕಾರಿ ಭೀಮಾನಾಯ್ಕ್ ಕಾರು ಚಾಲಕನ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಶ್ರೀರಾಮುಲು ಅವರ ಗನ್‍ಮ್ಯಾನ್‍ನನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಕಪ್ಪು ಹಣವನ್ನು ಬಿಳಿ ಮಾಡಿಕೊಡುವ ದಂಧೆ ಹಿನ್ನೆಲೆಯಲ್ಲಿ ಕಾರು ಚಾಲಕ ರಮೇಶ್ ಡೆತ್‍ನೋಟ್‍ನಲ್ಲಿ ಕೆಲವರ ಹೆಸರನ್ನು ನಮೂದಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದರ ನಡುವೆ ಭೀಮಾನಾಯ್ಕ್ ಅವರನ್ನು ಬಂಧಿಸಲಾಗಿತ್ತು.  ಕುತೂಹಲ ಎಂಬಂತೆ ಈಗ ಶ್ರೀರಾಮುಲು ಅವರ ಗನ್‍ಮ್ಯಾನ್ ಆಗಿದ್ದ ಚನ್ನಬಸಪ್ಪ ಹೊಸಮನಿ ಅವರನ್ನು ಬಂಧಿಸಿ ಸಿಐಡಿ ವಿಚಾರಣೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin