ಸೋಲಿನಿಂದ ತಪ್ಪಿಸಿಕೊಳ್ಳಲು ಆಂಗ್ಲರ ಹರಸಾಹಸ

ಈ ಸುದ್ದಿಯನ್ನು ಶೇರ್ ಮಾಡಿ

Raveendra-Jadeja

ಚೆನ್ನೈ, ಡಿ.20- ಇಲ್ಲಿನ ಚಪೆಕ್‍ನ ಎಂಎನ್ ಚಿದಂಬರಂ ಮೈದಾನದಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಅಂತಿಮ ಟೆಸ್ಟ್ ಪಂದ್ಯವು ಭಾರೀ ಕುತೂಹಲ ಮೂಡಿಸಿದೆ. ಡ್ರಾ ಮಾಡಿಕೊಳ್ಳುವ ಒತ್ತಡದಲ್ಲಿರುವ ಪ್ರವಾಸಿ ಇಂಗ್ಲೆಂಡ್ ತಂಡ 4 ವಿಕೆಟ್ ಕಳೆದುಕೊಂಡು ಒತ್ತಡದಲ್ಲಿದೆ. ಒಂದು ವೇಳೆ ಭಾರತದ ಸ್ಪಿನ್ ವ್ಯೂಹಕ್ಕೆ ಸಿಲುಕಿದರೆ ಸೋಲು ಕಟ್ಟಿಟ್ಟ ಬುತ್ತಿ. ಅರ್ಧದಿನ ಬಾಕಿ ಇದ್ದು, ಫಲಿತಾಂಶ ಏನಾಗಬಹುದು ಎಂಬ ಭಾರೀ ಕುತೂಹಲ ಮೂಡಿಸಿದೆ.  ಇದಕ್ಕೂ ಮುನ್ನ ವಿಕೆಟ್ ನಷ್ಟವಿಲ್ಲದೆ 12 ರನ್‍ನಿಂದ ಅಂತಿಮ ದಿನದಾಟ ಆರಂಭಿಸಿದ ಇಂಗ್ಲೆಂಡ್ ತಂಡ ರಕ್ಷಣಾತ್ಮಕ ಆಟಕ್ಕೆ ಮೊರೆ ಹೋಗಿದೆ. ಸ್ವಲ್ಪ ಅಪಾಯವಾದರೂ ಸೋಲೇ ಗತಿ ಎಂದು ಅರಿತ ನಾಯಕ ಅಲೆಸ್ಟರ್ ಕುಕ್ ಹಾಗೂ ಕಿಟನ್ ಜೆನ್ನಿಕ್ಸ್ ಜೋಡಿ ಮೊದಲ ವಿಕೆಟ್‍ನಲ್ಲಿ ಶತಕದ ಜತೆಯಾಟವಾಡಿದರು. ಈ ಜೋಡಿಗೆ ಜಡೇಜಾ ಶಾಕ್ ನೀಡಿದರು. ಕುಕ್ (49), ತಂಡದ ಮೊತ್ತ 103 ರನ್ ಆಗಿದ್ದಾಗ ಕುಕ್ ಔಟ್ ಆಗಿ ಅರ್ಧಶತಕದಿಂದ ವಂಚಿತರಾದರು.

ಇದಾದ ಬಳಿಕ ಯುವ ಆಟಗಾರ ಜೆನ್ನಿಕ್ಸ್ (54) ಅರ್ಧ ಶತಕ ದಾಖಲಿಸಿ ಜಡೇಜಾ ಬೌಲಿಂಗ್‍ನಲ್ಲೇ ಎಲ್‍ಬಿಡಬ್ಲ್ಯೂ ಬಲೆಗೆ ಬಿದ್ದು ಹೊರ ನಡೆದಿದ್ದಾರೆ. ತಂಡದ ಮೊತ್ತ 126 ರನ್ ಆಗುವಷ್ಟರಲ್ಲೇ ರೂಟ್ ಅವರನ್ನು ವಿಕೆಟ್ ಕಳೆದುಕೊಂಡು ಇಂಗ್ಲೆಂಡ್ ಆಘಾತಕ್ಕೆ ಒಳಗಾಗಿದೆ. ಈ ಸಮಯದಲ್ಲಿ ಭಾರತದ ಬೌಲರ್‍ಗಳ ಸವಾಲು ಎದುರಿಸಿದರೆ ಸೋಲಿನಿಂದ ತಪ್ಪಿಸಿಕೊಳ್ಳಬಹುದು. ಒಂದು ವೇಳೆ ಆಂಗ್ಲರು ಭಾರತದ ಸ್ಪಿನ್ ದಾಳಿಯನ್ನು ಎದುರಿಸದೆ ಹೋದರೆ ಸೋಲು ಎದುರಾಗಬಹುದು.

 

ಅಗ್ರ ಕ್ರಮಾಂಕದ ಮೂವರು ಬ್ಯಾಟ್ಸ್‍ಮನ್‍ಗಳನ್ನು ಜಡೇಜ ಪೆವಿಲಿಯನ್‍ಗೆ ಅಟ್ಟಿದ್ದಾರೆ. ಈ ಟೆಸ್ಟ್ ಪಂದ್ಯ ಕನ್ನಡಿಗರಿಗೆ ವಿಶೇಷವಾಗಿದ್ದು, ಕೆ.ಎಲ್.ರಾಹುಲ್ ಹಾಗೂ ಕರುಣ್ ನಾಯರ್ ಮನಮೋಹಕ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ನೂತನ ದಾಖಲೆಗಳು ನಿರ್ಮಾಣವಾದವು. ನಾಯರ್ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿ ಅಜೇಯ ತ್ರಿಶತಕ ಬಾರಿಸಿದ್ದು ವಿಶೇಷವಾಗಿತ್ತು. ಆದರೆ, ರಾಹುಲ್ ಕೇವಲ 1 ರನ್‍ನಿಂದ ದ್ವಿಶತಕದಿಂದ ವಂಚಿತರಾದರೂ ಅದ್ಭುತ ಆಟವಾಡಿದರು.  ಪತ್ರಿಕೆ ಮುದ್ರಣಕ್ಕೆ ಹೋಗುವ ಸಮಯದಲ್ಲಿ ಆಂಗ್ಲರು 52 ಓವರ್‍ಗಳಲ್ಲಿ 3 ವಿಕೆಟ್ ನಷ್ಟಕ್ಕೆ 129 ರನ್ ಪೇರಿಸಿತ್ತು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin