ಅಕ್ರಮವಾಗಿ ಹಣ ಸಂಪಾದಿಸಿದ ಸಚಿವರ ಹೆಸರು ಗೊತ್ತಿದ್ದರೆ ಬಿಎಸ್‍ವೈ ಬಹಿರಂಗಗೊಳಿಸಲಿ

ಈ ಸುದ್ದಿಯನ್ನು ಶೇರ್ ಮಾಡಿ

MB-Patil

ವಿಜಯಪುರ, ಡಿ.21- ಅಕ್ರಮ ಹಣ ಸಂಪಾದನೆಯಲ್ಲಿ ಭಾಗಿಯಾಗಿರುವ ಸಚಿವರುಗಳ ಹೆಸರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರಿಗೆ ಗೊತ್ತಿದ್ದರೆ ಬಹಿರಂಗಪಡಿಸಲಿ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಸವಾಲು ಹಾಕಿದರು. ಕೃಷ್ಣಾ ಭಾಗ್ಯ ಜಲನಿಗಮದ ವಿವಿಧ ಯೋಜನೆಗಳ ಕಾಮಗಾರಿ ವೀಕ್ಷಣೆಗೆ ಆಗಮಿಸಿರುವ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಯಡಿಯೂರಪ್ಪನವರು ಅಕ್ರಮ ಹಣ ಸಂಪಾದನೆಯಲ್ಲಿ ಸಚಿವರು ಭಾಗಿಯಾಗಿದ್ದಾರೆ ಎಂದು ಹೇಳಿಕೆ ನೀಡಲು ಅವರೇನು ಸಿಬಿಐ ನಿರ್ದೇಶಕರೇ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.

ಮೂರು ಮಂದಿ ಸಚಿವರು ಹಾಗೂ ಒಬ್ಬರು ವಿಧಾನ ಪರಿಷತ್ ಸದಸ್ಯರ ಬಣ್ಣ ಬಯಲಾಗುತ್ತದೆ ಎಂದು ಹೇಳುತ್ತಿದ್ದಾರೆ. ಅವರಿಗೆ ನಿಜವಾಗಲೂ ಅಕ್ರಮ ಗಳಿಕೆ ಮಾಡಿರುವ ಸಚಿವರ ಹೆಸರು ಗೊತ್ತಿದ್ದರೆ ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು. ನಾನಂತೂ ಯಾವುದೇ ಅಕ್ರಮದಲ್ಲಿ ಭಾಗಿಯಾಗಿಲ್ಲ, ಕಾನೂನಿಗೆ ಹೊರತಾದ ಯಾವ ಕೆಲಸವನ್ನೂ ಮಾಡಿಲ್ಲ, ಅಕ್ರಮದಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸಿಬಿಐ, ಇಡಿ ಹಾಗೂ ಎಸಿಬಿಯಂತಹ ತನಿಖಾ ಸಂಸ್ಥೆಗಳಿವೆ. ಯಡಿಯೂರಪ್ಪನವರು ಸಿಎಂ ಆಗಿದ್ದವರು. ಆಧಾರ ರಹಿತವಾಗಿ ಊಹಾಪೋಹದ ಹೇಳಿಕೆ ನೀಡಬಾರದು ಎಂದರು.

ಪ್ರಧಾನಿ ನರೇಂದ್ರಮೋದಿಯವರ ಹೆಸರಿನಲ್ಲಿ ಆರೋಪ ಕೇಳಿಬಂದಿವೆ ಎಂದ ಅವರು, ಅಕ್ರಮ ಹಣ ಗಳಿಕೆ ಮಾಡಿರುವವರ ಪಟ್ಟಿಯಲ್ಲಿ ನನ್ನ ಹೆಸರು ಇರುವುದಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದರು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin