ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (21-12-2016)

ಈ ಸುದ್ದಿಯನ್ನು ಶೇರ್ ಮಾಡಿ

Rashi

ನಿತ್ಯ ನೀತಿ  : ಪೂರ್ವ ಜನ್ಮಗಳ ಪುಣ್ಯ ಯಾವ ಮನುಷ್ಯನಿಗೆ ವಿಫುಲವಾಗಿದೆಯೋ ಅವನಿಗೆ ಘೋರವಾದ ಕಾಡೇ ಮುಖ್ಯ ಪಟ್ಟಣವಾಗುತ್ತದೆ. ಎಲ್ಲ ಜನರೂ ಅವನ ಬಗ್ಗೆ ಸೌಜನ್ಯ ತಾಳುತ್ತಾರೆ. ಭೂಮಿಯೆಲ್ಲವೂ ಒಳ್ಳೆಯ ನಿಧಿ-ರತ್ನಗಳಿಂದ ತುಂಬಿ ಹೋಗುತ್ತದೆ.  – ನೀತಿಶತಕ

Rashi x1

ಪಂಚಾಂಗ : ಬುಧವಾರ, 21.12.2016

ಸೂರ್ಯ ಉದಯ ಬೆ.06.37 / ಸೂರ್ಯ ಅಸ್ತ ಸಂ.05.59
ಚಂದ್ರ ಅಸ್ತ ಮ.12.31 / ಚಂದ್ರ ಉದಯ ರಾ.12.53
ದುರ್ಮುಖಿ ಸಂವತ್ಸರ / ದಕ್ಷಿಣಾಯಣ / ಹಿಮಂತ ಋತು / ಮಾರ್ಗಶಿರ ಮಾಸ / ಕೃಷ್ಣ ಪಕ್ಷ / ತಿಥಿ: ಅಷ್ಟಮಿ  (ರಾ.08.18)
ನಕ್ಷತ್ರ: ಉತ್ತರಫಲ್ಗುಣಿ (ಸಾ.04.11) / ಯೋಗ: ಸೌಭಾಗ್ಯ  (ರಾ.05.45) / ಕರಣ: ಬಾಲವ-ಕೌಲವ  (ಬೆ.07.26-ರಾ.08.18)
ಮಳೆ ನಕ್ಷತ್ರ: ಮೂಲ / ಮಾಸ: ಧನಸ್ಸು /ತೇದಿ: 07

ರಾಶಿ ಭವಿಷ್ಯ :

ಮೇಷ : ಇತರರ ಮೇಲೆ ಅಧಿಕಾರ ಚಲಾಯಿಸುವುದ ರಿಂದ ಸ್ನೇಹಿತರ ವಿರೋಧ ಕಟ್ಟಿಕೊಳ್ಳುವ ಸಾಧ್ಯತೆ ಇದೆ
ವೃಷಭ : ಮನೆಯಲ್ಲಿ ಆಗಾಗ ಕಲಹ ಕಂಡುಬರುವುವು
ಮಿಥುನ: ಇದ್ದಕ್ಕಿದ್ದ ಹಾಗೆ ಕೋಪಾವೇಶಕ್ಕೆ ಒಳಗಾಗುವಿರಿ, ಸತ್ಯಕ್ಕೆ ಹೆಚ್ಚು ಮಹತ್ವ ಕೊಡುವಿರಿ
ಕಟಕ: ತಮ್ಮ ಸಾಮಥ್ರ್ಯ ಪ್ರದರ್ಶಿ ಸಲು ಪುಸ್ತಕ ಬರೆಯುವಿರಿ
ಸಿಂಹ: ಬಡವರಿಗೆ ಸಹಾಯ ಮಾಡಿ ಅವರನ್ನು ಮುಂದಕ್ಕೆ ತರಲು ಹೆಚ್ಚು ಪ್ರಯತ್ನಿಸುವಿರಿ
ಕನ್ಯಾ: ಕಷ್ಟಗಳನ್ನು ಸಹಿಸಿಕೊಳ್ಳುವಿರಿ, ಸಾಧಾರಣ ಜೀವನ ಬಯಸುವಿರಿ
ತುಲಾ: ಸಾಂಸಾರಿಕವಾಗಿ ಹೊಂದಾ ಣಿಕೆ ಇರಲಿ, ವೃತ್ತಿರಂಗದಲ್ಲಿ ಹಂತ ಹಂತವಾಗಿ ಅಭಿವೃದ್ಧಿ ಹೊಂದುವಿರಿ
ವೃಶ್ಚಿಕ : ಸಾಮಾಜಿಕ ಕೆಲಸ- ಕಾರ್ಯ ಗಳಲ್ಲಿ ಮುನ್ನಡೆ ಸಾಧಿಸುವಿರಿ, ಪ್ರಯತ್ನಬಲ ಮುಖ್ಯ
ಧನುಸ್ಸು: ಯಾವುದೇ ವಿಚಾರದಲ್ಲಿ ಯೋಚಿಸಿ ಮುಂದು ವರಿಯಬೇಕು, ವಾಹನ ಖರೀದಿಗೆ ಅನುಕೂಲ
ಮಕರ: ವಿದ್ಯಾರ್ಥಿಗಳ ಉತ್ಸಾಹ, ಅಭ್ಯಾಸ ಬಲ ಕುಗ್ಗಲಿದೆ
ಕುಂಭ: ಮಾನಸಿಕ ವಿಶ್ರಾಂತಿ ಪಡೆಯುವ ಅಗತ್ಯವಿದೆ
ಮೀನ: ಅವಿವಾಹಿತರು ಅದೃಷ್ಟ ಭಾಗ್ಯ ಹೊಂದಲಿದ್ದಾರೆ

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin