ತಲೆಯಲ್ಲಿ ತಲೆ ಹೊತ್ತು ಹುಟ್ಟಿದ ವಿಚಿತ್ರ ಶಿಶು..!

ಈ ಸುದ್ದಿಯನ್ನು ಶೇರ್ ಮಾಡಿ

Baby-021

ಹೊಳೆನರಸೀಪುರ,ಡಿ.20- ವೈದ್ಯ ಲೋಕದಲ್ಲಿ ಪ್ರತಿದಿನ ಒಂದಲ್ಲೊಂದು ವಿಸ್ಮಯಗಳು, ಸವಾಲುಗಳು ನಡೆಯುತ್ತಲೇ ಇರುತ್ತವೆ. ಇದಕ್ಕೆ ನಿದರ್ಶನ ವೆಂಬಂತೆ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ವಿಚಿತ್ರವಾದ ಮಗುವಿನ ಜನನವಾಗಿದೆ.  ಕುಮಾರಿ ಎಂಬುವರು ಇಂದು ಸರ್ಕಾರಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದು, ಆ ಮಗುವಿನ ತಲೆಯಲ್ಲಿ ಮತ್ತೊಂದು ತಲೆಯಂತೆ ಗೆಡ್ಡೆಯೊಂದು ಅಂಟಿಕೊಂಡಿದ್ದು, ಬಹಳ ಪ್ರಯಾಸದಿಂದ ಈ ಮಗುವನ್ನು ಹೊರತೆಗೆದಿದ್ದಾರೆ.
ಮಗು ಆರೋಗ್ಯವಾಗಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ಆದರೆ ಕುಮಾರಿ ಮತ್ತು ಮೂರ್ತಿ ದಂಪತಿ ಕಣ್ಣೀರಿಡುತ್ತಾ ತಮಗೆ ವಿಕಾರವಾದ ಮಗು ಜನಿಸಿದೆ ಎಂದು ವ್ಯಥೆ ಪಡುತ್ತಿದ್ದಾರೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin