ಮುಂಬೈನ ಕೊಳಗೇರಿಯೊಂದರಲ್ಲಿ ಅಗ್ನಿ ಆಕಸ್ಮಿಕ, ಅನೇಕ ಗುಡಿಸಲು ಭಸ್ಮ

ಈ ಸುದ್ದಿಯನ್ನು ಶೇರ್ ಮಾಡಿ

MUmbai-Fire-01

ಮುಂಬೈ, ಡಿ.21-ಮುಂಬೈ ಮಹಾನಗರಿಯಲ್ಲಿ ಅಗ್ನಿ ದುರಂತಗಳು ಸಂಭವಿಸುತ್ತಲೇ ಇವೆ. ಮುಂಬೈನ ಕೊಳಗೇರಿಯೊಂದರಲ್ಲಿ ನಿನ್ನೆ ರಾತ್ರಿ ಸಂಭವಿಸಿದ ಬೆಂಕಿ ಅವಘಡದಿಂದಾಗಿ ಕೆಲವರು ಗಾಯಗೊಂಡಿದ್ದಾರೆ. ಈ ದುರ್ಘಟನೆಯಲ್ಲಿ ಅನೇಕ ಗುಡಿಸಲುಗಳು ಭಸ್ಮವಾಗಿವೆ.  ಸುದ್ದಿ ತಿಳಿದ ಕೂಡಲೇ 14 ವಾಹನಗಳೊಂದಿಗೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ತಹಬಂದಿಗೆ ತಂದರು.  ದಕ್ಷಿಣ ಭಾಗದ ಗಗನಚುಂಬಿ ಏರ್ ಇಂಡಿಯಾ ಕಟ್ಟಡದ 22ನೇ ಮಹಡಿಯಲ್ಲಿ ನಿನ್ನೆ ಬೆಂಕಿ ಅನಾಹುತ ಸಂಭವಿಸಿತ್ತು.  ಕಳೆದ ಮೂರು ದಿನಗಳ ಹಿಂದೆ ಮುಂಭೈನ ಪ್ರೇಮ್‍ನಗರ್ ಕೊಳಗೇರಿಯಲ್ಲಿ ಸಂಭವಿಸಿದ ಭಾರೀ ಅಗ್ನಿ ದುರಂತದಲ್ಲಿ ಅನೇಕ ಗುಡಿಸಲುಗಳು ಸುಟ್ಟು ಬೂದಿಯಾಗಿದ್ದವು.  ಈ ಮೂರು ಘಟನೆಗಳಲ್ಲಿ ಅದೃಷ್ಟವಶಾತ್ ಪ್ರಾಣಹಾನಿ ಉಂಟಾಗಿಲ್ಲ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin