ರಾಜಧಾನಿ, ಶತಾಬ್ದಿ ಸೇರಿ ಕೆಲವು ರೈಲುಗಳ ಪ್ರಯಾಣ ದರ ಶೇ.10ರಷ್ಟು ಕಡಿತ : ಇಂದಿನಿಂದಲೇ ಜಾರಿ

ಈ ಸುದ್ದಿಯನ್ನು ಶೇರ್ ಮಾಡಿ

Indian-Railyawe

ಬೆಂಗಳೂರು,ಡಿ.21- ರಾಜಧಾನಿ, ಶತಾಬ್ದಿ ಸೇರಿದಂತೆ ಕೆಲವು ರೈಲುಗಳ ದರವನ್ನು ಶೇ.10ರಷ್ಟು ಕಡಿತ ಮಾಡಲಾಗಿದ್ದು, ಈ ದರ ಇಂದಿನಿಂದ ಜಾರಿಯಾಗಲಿದೆ ಎಂದು ನೈರುತ್ಯ ರೈಲ್ವೆ ವಲಯದ ವ್ಯವಸ್ಥಾಪಕರಾದ ಸಂಜೀವ್ ಅಗರವಾಲ್ ತಿಳಿಸಿದ್ದಾರೆ.   ದೇಶಾದ್ಯಂತ ಜಾರಿಯಾಗಿರುವ ನೋಟು ರದ್ದತಿಯಿಂದಾಗಿ ರೈಲ್ವೆ ಇಲಾಖೆ ಆದಾಯದಲ್ಲಿ ಶೇ.20ರಷ್ಟು ಕಡಿಮೆಯಾಗಿದೆ ಈ ಹಿನ್ನೆಲೆಯಲ್ಲಿ ಹೆಚ್ಚಿನ ಪ್ರಯಾಣಿಕರನ್ನು ಸೆಳೆಯಲು ಪ್ರಯಾಣ ದರದಲ್ಲಿ ಶೇ.10ರಷ್ಟನ್ನು ಕಡಿತ ಮಾಡಲು ನಿರ್ಧರಿಸಿ ಜಾರಿಗೆ ತರಲಾಗುತ್ತಿದೆ.   ನವೆಂಬರ್ 8ರ ನೋಟು ರದ್ದತಿ ನಂತರ ಮೂರರಿಂದ 4 ಲಕ್ಷ ಪ್ರತಿದಿನ ನಷ್ಟವುಂಟಾಗುತ್ತಿದ್ದು , ಹೆಚ್ಚಿನ ನಷ್ಟ ತಪ್ಪಿಸಲು ಶತಾಬ್ದಿ ರಾಜಧಾನಿ ರೈಲುಗಳಿಗೆ ಚೆನ್ನೈನಿಂದ ಮೈಸೂರಿಗೆ ಇದ್ದ 440 ರೂ. ಟಿಕೆಟ್ ದರದಲ್ಲಿ ಶೇ.10ರಷ್ಟನ್ನು ಕಡಿಮೆ ಮಾಡಲಾಗಿದೆ ಎಂದು ವಿವರಿಸಿದರು.

ತತ್ಕಾಲ್ ಕೋಟಾವನ್ನು ಮೊದಲು ಇದ್ದ ಸಂಖ್ಯೆಗಿಂತ ಕಡಿಮೆ ಮಾಡ ಲಾಗಿದ್ದು, ಇದರಿಂದ ಬುಕಿಂಗ್ ಮಾಡಿ ದವರು ಹಾಗೂ ಇತರೆ ಸಾಮಾನ್ಯ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಮಾಹಿತಿ ನೀಡಿದರು.  ಹಳೆ ಕೋಚ್‍ಗಳನ್ನು ಬದಲಾಯಿಸಿ ಮೇಘ ಕೋಚ್‍ಗಳನ್ನು ಅಳವಡಿಸಲು ನೈರುತ್ಯ ರೈಲ್ವೆಗೆ 3500 ಕೋಟಿ ರೂ. ಅಗತ್ಯವಿದೆ. ರಾಜ್ಯ ಸರ್ಕಾರ ತನ್ನ ಪಾಲಿನ 350 ಕೋಟಿ ರೂ. ನೀಡಿದರೆ ಹೊಸ ರೈಲುಗಳನ್ನು ಬಿಡಲಿದ್ದೇವೆ.  ಪ್ರಸ್ತುತ ಇರುವ ರೈಲುಗಳಲ್ಲಿ 1500 ಮಂದಿ ಒಂದು ಬಾರಿಗೆ ಪ್ರಯಾಣ ಬೆಳೆಸಲು ಸಾಧ್ಯವಿದ್ದು , ಹೊಸ ಕೋಚ್‍ಗಳ ಅಳವಡಿಕೆಯಿಂದ 2500 ಮಂದಿ ಪ್ರಯಾಣಿಸಬಹುದಾಗಿದೆ. ಯಲಹಂಕ-ದೇವನಹಳ್ಳಿ ನಡುವೆ ರೈಲ್ವೆ ಸಂಪರ್ಕವಿದ್ದು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಪ್ರಸ್ತಾವನೆ ಇಲ್ಲ ಎಂದು ತಿಳಿಸಿದರು.

ಸಬ್‍ಅರ್ಬನ್ ರೈಲುಗಳು ಈಗಾ ಗಲೇ ಜಾರಿಯಲ್ಲಿವೆ. ರಾಮನಗರ- ಬೆಂಗಳೂರು, ಬೈಯಪ್ಪನಹಳ್ಳಿ- ಬಂಗಾರಪೇಟೆ ಸೇರಿದಂತೆ 8 ರೈಲುಗಳು ಪ್ರಸ್ತುತ ಚಾಲ್ತಿಯಲ್ಲಿದ್ದು ಇದನ್ನು 10ಕ್ಕೆ ಏರಿಸುವ ಚಿಂತನೆ ಇದೆ ಎಂದು ಹೇಳಿದರು. ರೈಲ್ವೆಯಲ್ಲಿ ಟಿಕೆಟ್ ರಹಿತ ಪ್ರಯಾಣ ಹಾಗೂ ಸರಕು ಸಾಗಣೆಯಿಂದಾಗಿ ಆದಾಯ ದಲ್ಲಿ ಉಂಟಾಗಿದ್ದ ನ್ಯೂನ್ಯತೆ ತಪ್ಪಿಸಲು 2.50 ಲಕ್ಷ ಪ್ರಕರಣ ಗಳನ್ನು ಪತ್ತೆ ಹಚ್ಚಿ 12 ಕೋಟಿ ಆದಾಯ ಹೆಚ್ಚಿಸ ಲಾಗಿದೆ. ಗುವಹಟಿಗೆ ಸಂಪೂರ್ಣ ಹವಾನಿಯಂತ್ರಿತ ರೈಲು ಆರಂಭಿಸ ಲಾಗುವುದು ಎಂದು ವಿವರಿಸಿದರು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin