ಏಕಕಾಲಕ್ಕೆ ಲೋಕಸಭೆ, ವಿಧಾನಸಭೆ ಚುನಾವಣೆಗೆ ಆಯೋಗ ಸಜ್ಜು

ಈ ಸುದ್ದಿಯನ್ನು ಶೇರ್ ಮಾಡಿ

Election-Commission

ನವದೆಹಲಿ,ಡಿ.22- ಏಕಕಾಲಕ್ಕೆ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಯನ್ನು ನಡೆಸಲು ಕೇಂದ್ರ ಚುನಾವಣಾ ಆಯೋಗ ಸಿದ್ಧತೆ ಆರಂಭಿಸಿದೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ವಿದ್ಯುನ್ಮಾನ ಮತಯಂತ್ರ(ಇವಿಎಂ)ಗಳನ್ನು ಖರೀದಿಸಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಆಯೋಗಕ್ಕೆ 1,009 ಕೋಟಿ ರೂಪಾಯಿ ಮಂಜೂರು ಮಾಡಿದೆ. ಮೂಲಗಳ ಪ್ರಕಾರ 2019ರಲ್ಲಿ ಒಂದು ವೇಳೆ ಏಕಕಾಲಕ್ಕೆ ಚುನಾವಣೆ ನಡೆದರೆ ಆಗ 14 ಲಕ್ಷ ಇವಿಎಂ ಮೆಷಿನ್ ಗಳು ಬೇಕಾಗುತ್ತವೆ ಎಂದು ಚುನಾವಣಾ ಆಯೋಗ ಹೇಳಿದೆ ಎನ್ನಲಾಗಿದೆ.
ಇವಿಎಂಗಳ ಖರೀದಿಗೆ ಈಗಾಗಲೇ ಹಣಕಾಸು ಇಲಾಖೆ ಸಮ್ಮತಿ ಸೂಚಿಸಿದ್ದು, ಈಗಾಗಲೇ ಮೊದಲ ಕಂತಿನ ಇವಿಎಂಗಳಿಗೆ ಆರ್ಡರ್ ನೀಡಲಾಗಿದೆ. ಅಗತ್ಯ ಬಿದ್ದರೆ ಆಯೋಗ ಪ್ರತಿ ವರ್ಷ ಐದು ಲಕ್ಷ ಇವಿಎಂನಂತೆ ಮೂರು ಕಂತುಗಳಲ್ಲಿ ಚುನಾವಣೆಗೆ ಬೇಕಾಗುವಷ್ಟು ಮತಯಂತ್ರಗಳನ್ನು ಖರೀದಿಸಲಿದೆ.

ಏಕಕಾಲಕ್ಕೆ ಚುನಾವಣೆ ನಡೆಸುವ ಸಂಬಂಧ ಕೇಂದ್ರ ಸರ್ಕಾರದಿಂದ ಆಯೋಗಕ್ಕೆ ಯಾವುದೇ ಸೂಚನೆ ಬಂದಿಲ್ಲವಾದರೂ ಆಯೋಗ ಮಾಡಿಕೊಳ್ಳುತ್ತಿರುವ ಸಿದ್ಧತೆ ಅಂಥದ್ದೊಂದು ಊಹೆಯನ್ನು ಹುಟ್ಟಿಸಿದೆ. ಒಂದು ವೇಳೆ 2019ರ ಲೋಕಸಭಾ ಚುನಾವಣೆಯೊಂದಿಗೆ ಎಲ್ಲಾ ರಾಜ್ಯಗಳ ವಿಧಾನಸಭಾ ಚುನಾವಣೆ ಘೋಷಣೆಯಾದಲ್ಲಿ ಆಗ ಕರ್ನಾಟಕದಲ್ಲಿನ ಕಾಂಗೆಸ್ ಸರ್ಕಾರಕ್ಕೆ ಒಂದು ವರ್ಷ ಹೆಚ್ಚುವರಿ ಅಧಿಕಾರವಧಿ ಸಿಗೋ ಸಾಧ್ಯತೆ ಇದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin