ಗ್ರೇಟ್ ಸನ್ : ಮರಣಶಯ್ಯೆಯಲ್ಲಿದ್ದ ತಂದೆ ಕೊನೆ ಆಸೆ ಈಡೇರಿಸಲು ಆಸ್ಪತ್ರೆಯಲ್ಲೇ ಮದುವೆಯಾದ ಮಗ..!

ಈ ಸುದ್ದಿಯನ್ನು ಶೇರ್ ಮಾಡಿ

Marriage-Father

ಪುಣೆ,ಡಿ.22-ಐ.ಸಿ.ಯು. ವಾರ್ಡ್  ನಲ್ಲಿ ರೋಗಿಗಳ ಬಗ್ಗೆ ತೀವ್ರ ನಿಗಾ ವಹಿಸಲಾಗುತ್ತದೆ. ಪಿನ್‍ಡ್ರಾಪ್ ಸೈಲೆಂಟ್ ಇರುತ್ತದೆ. ಇದಕ್ಕೆ ವ್ಯತಿರಿಕ್ತವಾದ ಹಾಗೂ ಮನ ಕಲಕುವ ಘಟನೆಯೊಂದು ಪುಣೆಯಲ್ಲಿ ನಡೆದಿದೆ. ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದ, ತಂದೆಯ ಕೊನೆಯ ಆಸೆಯನ್ನು ಈಡೇರಿಸುವ ಸಲುವಾಗಿ, ಐ.ಸಿ.ಯು. ನಲ್ಲೇ ಮಗ ಮದುವೆಯಾಗಿದ್ದಾನೆ. ಪುಣೆಯ ದೀನನಾಥ್ ಮಂಗೇಶ್ಕರ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಇಂತಹ ಅಪರೂಪದ ಪ್ರಕರಣ ನಡೆದಿದೆ. ಉದ್ಯಮಿ ಡ್ಯಾನಿಶ್ ಎನ್. ದೇವ್‍ಅವರ ತಂದೆ ನಂದಕುಮಾರ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಅವರಿಗೆ ಐ.ಸಿ.ಯು.ನಲ್ಲಿ ಚಿಕಿತ್ಸೆ ನೀಡುತ್ತಿದ್ದು, ದಿನ ಕಳೆದಂತೆ ನಂದಕುಮಾರ್ ಆರೋಗ್ಯ ಕ್ಷೀಣಿಸತೊಡಗಿದೆ. ಅವರ ಆಸೆಯಂತೆ ಅವರ ಕಣ್ಣೆದುರಿನಲ್ಲೇ ಮದುವೆ ಮಾಡಿಕೊಳ್ಳಲು ಡ್ಯಾನಿಶ್ ನಿರ್ಧರಿಸಿ ಕುಟುಂಬದವರು ಮತ್ತು ಆಸ್ಪತ್ರೆಯ ವೈದ್ಯರೊಂದಿಗೆ ಚರ್ಚಿಸಿದಾಗ, ಎಲ್ಲರೂ ಒಪ್ಪಿಕೊಂಡಿದ್ದಾರೆ. ಅಪ್ಪನ ಕೊನೆಯ ಆಸೆಯಂತೆ ಐ.ಸಿ.ಯು.ನಲ್ಲೇ ಡ್ಯಾನಿಶ್ ಶಾಸ್ತ್ರೋಕ್ತವಾಗಿ ಮದುವೆಯಾಗಿದ್ದು, ಇದಾದ ಕೆಲ ಸಮಯದಲ್ಲೇ ನಂದಕುಮಾರï ಮೃತಪಟ್ಟಿದ್ದಾರೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin