‘ತಾಕತ್ತಿದ್ದರೆ ನನ್ನನ್ನು ಬಂಧಿಸಿ’ : ಕೇಂದ್ರಕ್ಕೆ ಸವಾಲೆಸೆದ ದೀದಿ

ಈ ಸುದ್ದಿಯನ್ನು ಶೇರ್ ಮಾಡಿ

DIDI-Mamata

ಕೊಲ್ಕತ್ತಾ,ಡಿ.22-ನೋಟ್‍ಬ್ಯಾನ್ ಹಿನ್ನೆಲೆಯಲ್ಲಿ ಕೇಂದ್ರದ ವಿರುದ್ಧ ಸಮರ ಸಾರಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ತಮ್ಮನ್ನು ಬಂಧಿಸುವಂತೆ ಕೇಂದ್ರ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ. ರಾಜ್ಯದ ಅಧಿಕಾರಿಗಳ ಮೇಲೆ ದಾಳಿ ನಡೆಸಿ ಬಂಧಿಸುವ ಬದಲು ತನ್ನನ್ನು ಬಂಧಿಸುವಂತೆ ಮಮತಾ ಹೇಳಿದ್ದಾರೆ. ನೀವು ಬೇರೆ ಯಾರನ್ನೂ ಮುಟ್ಟಬೇಡಿ. ತಾಕತ್ತಿದ್ದರೆ ನನ್ನನ್ನು ಬಂಧಿಸಿ. ನೋಟ್‍ಬ್ಯಾನ್ ವಿರುದ್ಧ ನಮ್ಮ ದನಿಯನ್ನು ಯಾವುದರಿಂದಲೂ ತಗ್ಗಿಸಲು ಸಾಧ್ಯವಿಲ್ಲ. ನೋಟ್‍ಬ್ಯಾನ್ ಪ್ರಕ್ರಿಯೆ ದೊಡ್ಡ ಹಗರಣವಾಗಿದ್ದು, ಈ ಡೀಲ್ ಏನೂ ಎಂಬುದು ನಮಗೆ ಗೊತ್ತಾಗಬೇಕು. ಇದನ್ನೇ ನಾನು ಸಾವಿರ ಬಾರಿ ಹೇಳುತ್ತೇನೆ ಎಂದು ಸಾರ್ವಜನಿಕ ಸಮಾವೇಶಲ್ಲಿ ಅವರು ಕೇಂದ್ರದ ವಿರುದ್ಧ ಕೆಂಡ ಕಾರಿದರು.

ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಕೇಂದ್ರ ಸರ್ಕಾರ ರಾಜ್ಯದ ಅಧಿಕಾರಿಗಳನ್ನು ಟಾರ್ಗೆಟï ಮಾಡುತ್ತಿದೆ. ನೀವು ನಮ್ಮ ಯಾವುದೇ ಅಧಿಕಾರಿಯನ್ನು ಮುಟ್ಟಲು ಪ್ರಯತ್ನಿಸಿದರೂ ಇಲ್ಲಿಂದ ಸುರಕ್ಷಿತವಾಗಿ ಹೋಗಲು ಸಾಧ್ಯವಿಲ್ಲ. ನೀವು ಹೊಂದಿರುವಂತೆ ರಾಜ್ಯ ಸರ್ಕಾರವೂ ತನ್ನ ಕೈಯೊಳಗೆ ಕಾನೂನು ಹೊಂದಿದೆ. ನಾವು ಈ ಯುದ್ಧವನ್ನು ಗೆಲ್ಲಲಿದ್ದು, ಜನ ನಮ್ಮ ಜೊತೆ ಇದ್ದಾರೆ. ಅಗತ್ಯವಿದ್ದಲ್ಲಿ ನಾನು ಜೀವಂತವಾಗಿರುವವರೆಗೂ ಏಕಾಂಗಿಯಾಗಿ ಹೋರಾಡಲು ಸಿದ್ಧ ಎಂದು ಹೇಳಿದರು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin