ಬಹುದಿನಗಳ ಕನಸಾಗಿರುವ ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಮೀಸಲಾತಿ ಶೀಘ್ರದಲ್ಲೇ ಜಾರಿಗೆ

ಈ ಸುದ್ದಿಯನ್ನು ಶೇರ್ ಮಾಡಿ

Reservation-Kannadiga

ಬೆಂಗಳೂರು,ಡಿ.22-ಖಾಸಗಿ ವಲಯದಲ್ಲೂ ಕನ್ನಡಿಗರಿಗೆ ಮೀಸಲಾತಿ ನೀಡಬೇಕೆಂಬ ಬಹುದಿನಗಳ ಕನಸು ಶೀಘ್ರದಲ್ಲೇ ಈಡೇರುವ ಲಕ್ಷಣಗಳು ಗೋಚರಿಸಿವೆ.  ಮಾಹಿತಿ ತಂತ್ರಜ್ಞಾನ(ಐಟಿ) ಹಾಗೂ ಜೈವಿಕ ತಂತ್ರಜ್ಞಾನ(ಬಿಟಿ) ಹೊರತುಪಡಿಸಿ ಉಳಿದ ಎಲ್ಲ ಖಾಸಗಿ ಕ್ಷೇತ್ರಗಳಲ್ಲಿ ಕನ್ನಡಿಗರಿಗೆ ಕಡ್ಡಾಯವಾಗಿ ಶೇ.100ರಷ್ಟು ಮೀಸಲಾತಿ ನೀಡುವ ಕಾಯ್ದೆಗೆ ತಿದ್ದುಪಡಿ ಮಾಡಿದೆ.   ಮುಂದಿನ ಅಧಿವೇಶನದ ವೇಳೆ ಈ ಕಾಯ್ದೆ ಮಂಡನೆಯಾಗಲಿದೆ. ನೂತನ ನಿಯಮದಂತೆ ಮೀಸಲಾತಿಯನ್ನು ಪಾಲನೆ ಮಾಡದವರ ವಿರುದ್ಧ ಸರ್ಕಾರ ನೀಡುವ ಸವಲತ್ತು ಹಾಗೂ ಅನುದಾನವನ್ನು ನಿರ್ದಾಕ್ಷಿಣ್ಯವಾಗಿ ಕಡಿತಗೊಳಿಸಲಾಗುವುದು.

ಕಾರ್ಮಿಕ ಇಲಾಖೆ ಸಿದ್ದಪಡಿಸಿರುವ ನಿಯಮದಂತೆ ಕರ್ನಾಟಕ ಕೈಗಾರಿಕಾ ಉದ್ಯೋಗ ನೀತಿ 1961ರ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ. ಈ ಪ್ರಕಾರ ಐಟಿಬಿಟಿ ಹೊರತುಪಡಿಸಿ ಖಾಯಂ ಹಂಗಾಮಿ, ಗುತ್ತಿಗೆ, ಅಪ್ರೆಂಟಿಸ್ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಕನ್ನಡಿಗರಿಗೆ ಕಡ್ಡಾಯವಾಗಿ ಮೀಸಲಾತಿಯನ್ನು ನೀಡಲೇಬೇಕು.  1946ರ ಕೇಂದ್ರ ಕಾಯ್ದೆ ಪ್ರಕಾರ ಯಾವುದೇ ವಲಯವು ಆಯಾ ರಾಜ್ಯ ಸರ್ಕಾರದಿಂದ ಭೂಮಿ, ನೀರು, ವಿದ್ಯುತ್ ಸೇರಿದಂತೆ ಮತ್ತಿತರ ಸವಲತ್ತುಗಳನ್ನು ಪಡೆದಾಗ ಸ್ಥಳೀಯರಿಗೆ ಉದ್ಯೋಗ ನೀಡಬೇಕೆಂಬ ಅಂಶ ಇದರಲ್ಲಿ ಉಲ್ಲೇಖವಾಗಿದೆ.
ಇದನ್ನೇ ಆಧಾರವಾಗಿಟ್ಟುಕೊಂಡಿರುವ ರಾಜ್ಯ ಸರ್ಕಾರ ಕಾಯ್ದೆಗೆ ತಿದ್ದುಪಡಿ ಮಾಡಿ ಮುಂದಿನ ಅಧಿವೇಶನದಲ್ಲಿ ಇದನ್ನು ಮಂಡಿಸಿ ಜಾರಿ ಮಾಡಲಿದೆ ಎಂದು ತಿಳಿದುಬಂದಿದೆ.

ಇದಲ್ಲದೆ 1995ರ ಕಾಯ್ದೆ ಪ್ರಕಾರ ಖಾಸಗಿ ವಲಯವು ವಿಕಲಚೇತರಿಗೆ ಶೇ.5ರಷ್ಟು ಮೀಸಲಾತಿಯನ್ನು ನೀಡಬೇಕು. ಯಾವುದೇ ಒಬ್ಬ ವ್ಯಕ್ತಿ ಕರ್ನಾಟಕದಲ್ಲಿ 15 ವರ್ಷ ಇಲ್ಲಿಯೇ ವಾಸವಿದ್ದು , ಆತನಿಗೆ ಸ್ಥಳೀಯ ಭಾಷೆ ಬರೆಯಲು, ಓದಲು ಹಾಗೂ ಸಂವಹನ ನಡೆಸುವಷ್ಟು ಭಾಷಾ ಸಾಮಥ್ರ್ಯ ಹೊಂದಿದ್ದರೆ ಉದ್ಯೋಗ ನೀಡಬೇಕೆಂಬ ಅಂಶವು ಇದರಲ್ಲಿದೆ.  ಮಹಿಷಿ ವರದಿ ಜಾರಿ: ಈ ಹಿಂದೆ ಖಾಸಗಿ ವಲಯದಲ್ಲೂ ಕನ್ನಡಿಗರಿಗೆ ಉದ್ಯೋಗ ನೀಡಲು ವರದಿಯಲಿ ಶಿಫಾರಸ್ಸು ಮಾಡಿದ್ದರು. ಇದು ಅನೇಕ ಕಾರಣಗಳಿಂದ ನೆನೆಗುದಿಗೆ ಬಿದ್ದಿತ್ತು. ಈಗ ದೃಢ ನಿರ್ಧಾರ ತೆಗೆದುಕೊಂಡಿರುವ ಸರ್ಕಾರ ಮೀಸಲಾತಿ ಜಾರಿ ಮಾಡುವ ಮೂಲಕ ಖಾಸಗಿ ವಲಯದ ಪಾರುಪತ್ಯಕ್ಕೆ ಕಡಿವಾಣ ಹಾಕಲು ಮುಂದಾಗಿದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin