ಸಚಿವರೊಬ್ಬರಿಗೆ ನೋಟು ಬದಲಿಸಿಕೊಟ್ಟ ಆರೋಪ : ಆರ್‍ಬಿಐ ಮಹಿಳಾ ಅಧಿಕಾರಿ ದಿಢೀರ್ ವರ್ಗ

ಈ ಸುದ್ದಿಯನ್ನು ಶೇರ್ ಮಾಡಿ

RBI-01

ಬೆಂಗಳೂರು,ಡಿ.22-ಪ್ರಭಾವಿ ಸಚಿವರೊಬ್ಬರಿಗೆ ಅಕ್ರಮವಾಗಿ ನೋಟು ಬದಲಾವಣೆ ಮಾಡಿದ್ದ ಆರೋಪಕ್ಕೆ ಸಿಲುಕಿದ್ದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ(ಆರ್‍ಬಿಐ) ಮಹಿಳಾ ಅಧಿಕಾರಿಯನ್ನು ದಿಢೀರನೆ ವರ್ಗಾವಣೆ ಮಾಡಲಾಗಿದೆ.   ರಾಜ್ಯದ ಹಿರಿಯ ಐಪಿಎಸ್ ಅಧಿಕಾರಿಯೊಬ್ಬರ ಪತ್ನಿಯಾಗಿರುವ ಇವರು ಬೆಂಗಳೂರಿನ ಆರ್‍ಬಿಐ ಕಚೇರಿಯ ನೋಟು ವಿತರಣಾ ವಿಭಾಗದಲ್ಲಿ ಡಿಜಿಎಂ ಹುದ್ದೆಯಲ್ಲಿದ್ದರು.  ಇದೀಗ ನಿನ್ನೆಯಷ್ಟೇ ಈ ಮಹಿಳಾ ಅಧಿಕಾರಿ ಮೇಲೆ ಆರ್‍ಬಿಐ ನೋಟು ತಡೆ ವಿಭಾಗಕ್ಕೆ ಇದ್ದಕ್ಕಿದ್ದಂತೆ ವರ್ಗಾವಣೆ ಮಾಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಕೇಂದ್ರ ಸೇವೆಯಲ್ಲಿರುವ ಹಿರಿಯ ಐಎಎಸ್ ಅಧಿಕಾರಿಯ ಸಹೋದರಿಯಾಗಿರುವ ಈ ಅಧಿಕಾರಿಣಿ ಸಾಕಷ್ಟು ಪ್ರಭಾವ ಬೆಳೆಸಿಕೊಂಡಿದ್ದರು. ತಮಗಿರುವ ರಾಜಕೀಯ ಸಂಪರ್ಕಗಳನ್ನೇ ಬಳಸಿಕೊಂಡು ವರ್ಗಾವಣೆ ಮಾಡಿಸಿಕೊಂಡಿರಬಹುದೆಂಬ ಅನುಮಾನವು ವ್ಯಕ್ತವಾಗಿದೆ.  ಈ ಹಿಂದೆ ರಾಜ್ಯದ ಗೃಹ ಇಲಾಖೆಯಲ್ಲಿ ಅತ್ಯಂತ ಪ್ರಭಾವಿ ಪ್ರಮುಖ ಖಾತೆಯಲ್ಲಿರುವ ಇವರ ಸಹೋದರ ಸೋದರಿಯನ್ನು ಸಿಬಿಐ, ಐಟಿ ಇಲ್ಲವೆ ಇಡಿ ಅಧಿಕಾರಿಗಳು ವಶಕ್ಕೆ ತೆಗೆದುಕೊಳ್ಳಬಹುದೆಂಬ ಭೀತಿ ಹಿನ್ನೆಲೆಯಲ್ಲಿ ವರ್ಗಾವಣೆ ಮಾಡಿಸಿರಬಹುದೆಂಬ ಗುಮಾನಿ ಕೇಳಿಬಂದಿದೆ.
ಕಳೆದ ವಾರವಷ್ಟೇ ಈ ಅಧಿಕಾರಿಣಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪ್ರಧಾನಿ ನರೇಂದ್ರ ಮೋದಿಗೆ ಆನ್‍ಲೈನ್ ಮೂಲಕ ದೂರು ನೀಡಲಾಗಿತ್ತು. ಅಲ್ಲದೆ ಸಾಮಾಜಿಕ ತಾಣಗಳಲ್ಲೂ ವ್ಯಾಪಕ ಟೀಕೆ ಕೇಳಿಬಂದಿತು.

ಮೂಲತಃ ಉತ್ತರ ಭಾರತದವರಾದ ಇವರ ಪತಿ ಹಾಗೂ ಸಹೋದರ ಕೇಂದ್ರದಲ್ಲಿರುವ ಸಂಪರ್ಕ ಬಳಸಿಕೊಂಡು ವರ್ಗಾವಣೆ ಮಾಡಿದ್ದಾರೆ ಎನ್ನಲಾಗಿದೆ.  ಪ್ರಧಾನಿ ನರೇಂದ್ರ ಮೋದಿ ನ.8ರಂದು 500 ಹಾಗೂ 1000 ರೂ. ಮುಖಬೆಲೆಯ ನೋಟುಗಳ ಚಲಾವಣೆಗೆ ನಿಷೇಧ ಹೇರಿದ್ದರು. ಇದಾದ ನಂತರ ಬೆಂಗಳೂರು ಮೂಲದ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪರಮಾಪ್ತರು ಹಾಗಿರುವ ಪ್ರಭಾವಿ ಸಚಿವರೊಬ್ಬರು 5-6 ಕೋಟಿ ಹಣ ಬದಲಾಯಿಸಲು ಈ ಅಧಿಕಾರಿಣಿ ನೆರವು ನೀಡಿದ್ದರು ಎಂಬ ಆರೋಪವಿದೆ.  ಈಗಾಗಲೇ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ, ಇಡಿ ಹಾಗೂ ಐಟಿ ಅಧಿಕಾರಿಗಳು ಕೊಳ್ಳೆಗಾಲ ಎಸ್‍ಬಿಎಂನ ಅಧಿಕಾರಿ ಸದಾನಂದ ನಾಯಕ ಹಾಗೂ ಬೆಂಗಳೂರು ಆರ್‍ಬಿಐ ಶಾ

ಖೆಯ ಅಧಿಕಾರಿಗಳಾದ ಮೈಕೇಲ್ ಮತ್ತು ಕೆವಿನ್ ಎಂಬುವರನ್ನು ಬಂಧಿಸಿದ್ದಾರೆ.  ಇನ್ನೇನು ಮಹಿಳಾ ಅಧಿಕಾರಿಣಿಯೂ ಖೆಡ್ಡಾಕ್ಕೆ ಬೀಳಲಿದ್ದಾರೆ ಎಂಬ ಗುಸುಗುಸು ಹಬ್ಬಿದ ಬೆನ್ನಲ್ಲೇ ವರ್ಗಾವಣೆಯಾಗಿರುವುದು ಸಂಶಯಗಳನ್ನು ಹುಟ್ಟು ಹಾಕಿದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin