ಸಿರಿಯಾ ಯುದ್ಧ ಅಪರಾಧಗಳ ತನಿಖೆಗೆ ಸಮಿತಿ ರಚಿಸಿದ ವಿಶ್ವಸಂಸ್ಥೆ

ಈ ಸುದ್ದಿಯನ್ನು ಶೇರ್ ಮಾಡಿ

Un-01

ವಿಶ್ವಸಂಸ್ಥೆ, ಡಿ.22-ಸಮರ ಸಂತ್ರಸ್ತ ಸಿರಿಯಾದಲ್ಲಿ ಯುದ್ದ ಅಪರಾಧ ಪ್ರಕರಣಗಳ ಕುರಿತು ಸಾಕ್ಷ್ಯಾಧಾರ ಸಂಗ್ರಹಿಸಲು ಸಮಿತಿಯೊಂದನ್ನು ರಚಿಸುವುದಕ್ಕೆ ವಿಶ್ವಸಂಸ್ಥೆ ಸಾಮಾನ್ಯ ಅಧಿವೇಶನ ಸಮ್ಮತಿ ಸೂಚಿಸಿದೆ. ಆರು ವರ್ಷಗಳ ಅವಧಿಯಲ್ಲಿ ಅಮಾಯಕರ ಮೇಲೆ ದೌರ್ಜನ್ಯಕ್ಕೆ ಕಾರಣರಾದವರನ್ನು ಶಿಕ್ಷೆಗೆ ಗುರಿಪಡಿಸಲು ಇದು ಮೊದಲ ದಿಟ್ಟ ಹೆಜ್ಜೆಯಾಗಿದೆ.
ಸಿರಿಯಾ ಯುದ್ಧ ಅಪರಾಧ ಪ್ರಕರಣಗಳ ತನಿಖೆಗಾಗಿ ಸಮಿತಿಯನ್ನು ಸ್ಥಾಪಿಸಲು ನಿನ್ನೆ 193 ಸದಸ್ಯ ರಾಷ್ಟ್ರಗಳ ವಿಶ್ವಸಂಸ್ಥೆಯ ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಯಿತು. ಗೊತ್ತುವಳಿ ಪರ 105 ಮತಗಳು ಚಲಾವಣೆಯಾದವು. 15 ಮತಗಳು ನಿರ್ಣಯಕ್ಕೆ ವಿರುದ್ಧವಾಗಿದ್ದವು. ಉಳಿದ ಸದಸ್ಯ ರಾಷ್ಟ್ರಗಳು ಗೈರು ಹಾಜರಾಗಿದ್ದವು.

ಕಳೆದ ಆರು ವರ್ಷಗಳ ಅವಧಿಯಲ್ಲಿ ನಡೆಸಿದ ದೌರ್ಜನ್ಯದಿಂದ 3,10,000 ಮಂದಿ ಹತರಾಗಿದ್ದಾರೆ ಎಂದು ಹಲವಾರು ವರದಿಗಳು ಸಲ್ಲಿಕೆಯಾಗಿದ್ದವು. ಈ ಸಮಿತಿಯು ತನಿಖೆ ಕುರಿತು ವಿಶ್ವಸಂಸ್ಥೆ ಆಯೋಗದೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸಲಿದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin