ಟ್ರಂಪ್ ಮಗಳನ್ನು ಕಿಚಾಯಿಸಿದ ಪ್ರಯಾಣಿಕನನ್ನು ವಿಮಾನದಿಂದಲೇ ಹೊರದಬ್ಬಿದರು..!

ಈ ಸುದ್ದಿಯನ್ನು ಶೇರ್ ಮಾಡಿ

Trump-Passenger

ನ್ಯೂಯಾರ್ಕ್. ಡಿ.23-ಅಮೆರಿಕ ಅಧ್ಯಕ್ಷರಾಗಿ ಚುನಾಯಿತರಾಗಿರುವ ಡೋನಾಲ್ಡ್ ಟ್ರಂಪ್ ಪುತ್ರಿ ಇವಾಂಕ ಟ್ರಂಪ್‍ಗೆ ಕಿಚಾಯಿಸಿದ ಆರೋಪದ ಮೇಲೆ ಪ್ರಯಾಣಿಕನೊಬ್ಬನನ್ನು ವಿಮಾನದಿಂದ ಹೊರದಬ್ಬಿದ ಘಟನೆ ಇಲ್ಲಿನ ವಿಮಾನನಿಲ್ದಾಣದಲ್ಲಿ ನಡೆದಿದೆ. ನ್ಯೂಯಾರ್ಕ್‍ನ ಜಾನ್ ಎಫ್ ಕೆನಡಿ ಇಂಟರ್‍ನ್ಯಾಷನಲ್ ಏರ್‍ಪೋರ್ಟ್‍ನಿಂದ ತೆರಳಬೇಕಿದ ಜೆಟ್‍ಬ್ಲೂ ವಿಮಾನದಲ್ಲಿದ್ದ ಇವಾಂಕಾ ಟ್ರಂಪ್‍ನನ್ನು ನೋಡಿದ ವ್ಯಕ್ತಿಯೊಬ್ಬ ಓ ಮೈ ಗಾಡ್, ದಿಸ್ ಇಸ್ ನೈಟ್‍ಮೇರ್ (ಓ ದೇವರೇ, ಇದು ನಿಜಕ್ಕೂ ದುಸ್ವಪ್ನ) ಎಂದು ಉದ್ಗಾರಿಸಿದ್ದ. ಇದಾದ ನಂತರ ಆ ಪ್ರಯಾಣಿಕನನ್ನು ವಿಮಾನದಿಂದ ಹೊರದಬ್ಬಲಾಯಿತು ಎಂದು ಜೆಟ್‍ಬ್ಲೂ ವಿಮಾನ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.

ವಿಮಾನದಿಂದ ಹೊರಕ್ಕೆ ಕಳುಹಿಸಲಾದ ವ್ಯಕ್ತಿಯ ಹೆಸರನ್ನು ಅಧಿಕಾರಿಗಳು ಬಹಿರಂಗಗೊಳಿಸಿಲ್ಲ. ಅಲ್ಲದೇ ಹೆಚ್ಚಿನ ವಿವರ ನೀಡಲು ನಿರಾಕರಿಸಿದ್ದಾರೆ. ಆದಾಗ್ಯೂ, ಗಂಭೀರವಾಗಿ ಪರಿಶೀಲಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin