‘ಕೆಟ್ಟ ಮಕ್ಕಳಂತೆ ವರ್ತಿಸಬೇಡಿ’ : ಚೀನಾದ ಉದ್ದಟನದ ಸಲಹೆಗೆ ಭಾರತ ತಿರುಗೇಟು

ಈ ಸುದ್ದಿಯನ್ನು ಶೇರ್ ಮಾಡಿ

India-Vs-China--01

ನವದೆಹಲಿ, ಡಿ.24-ಬ್ಲಾಕ್‍ಮೇಲ್ ಮಾಡುವ ರೀತಿಯಲ್ಲಿ ಟಿಬೆಟ್ ಪರಮೋಚ್ಚ ಧರ್ಮಗುರು ದಲೈ ಲಾಮಾ ಅವರ ವಿಷಯವನ್ನು ಭಾರತ ಪದೇ ಪದೇ ಪ್ರಸ್ತಾಪಿಸಬಾರದು, ಕೆಟ್ಟ ಮಕ್ಕಳಂತೆ ಹಠಮಾರಿ ಧೋರಣೆಯನ್ನು ನಿಲ್ಲಿಸಬೇಕು ಎಂದು ಚೀನಾ ಸರ್ಕಾರಿ ಮಾಧ್ಯಮದ ಉದ್ದಟತನದ ಸಲಹೆ ಭಾರತವನ್ನು ಕೆರಳಿಸಿದೆ. ಒನ್ ಚೈನಾ ನೀತಿಯನ್ನು ಪ್ರಶ್ನಿಸಿದ ಅಮೆರಿಕ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಚೀನಾ ಮತ್ತಗಾಗಿಸಿದ್ದು, ಇದರಿಂದ ಭಾರತ ಪಾಠ ಕಲಿಯಬೇಕು ಎಂದು ಚೀನಾ ಬುದ್ಧಿವಾದ ಹೇಳಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಭಾರತೀಯ ವಿದೇಶಾಂಗ ಇಲಾಖೆ ಉನ್ನತಾಧಿಕಾರಿಗಳು ನಾವು ಚೀನಾದಿಂದ ಪಾಠ ಕಲಿಯುವ ಅಗತ್ಯವಿಲ್ಲ. ಸೂಕ್ತ ಸಮಯದಲ್ಲಿ ಚೀನಾಗೆ ಪ್ರತ್ಯುತ್ತರ ನೀಡುವುದಾಗಿ ತಿರುಗೇಟು ನೀಡಿದ್ದಾರೆ.

ಚೀನಾದ ಅಹಂ ವರ್ತನೆ :

ಭಾರತ ಕೆಲವೊಮ್ಮೆ ಕೆಟ್ಟ ಮಕ್ಕಳಂತೆ ವರ್ತಿಸುತ್ತದೆ. ವಿಶ್ವದ ಅತಿ ದೊಡ್ಡ ಪ್ರಜಾಸತ್ತೆಯ ಕಿರೀಟವನ್ನು ಭಾರತ ಹೊತ್ತುಕೊಂಡಿದೆ. ಆದರೆ ಅದರ ದೂರದೃಷ್ಟಿ ಬಹಳ ಸಂಕುಚಿತವಾಗಿದೆ ಎಂದು ಚೀನಾ ಸಕಾರಿ ಒಡೆತನದ ಗ್ಲೋಬಲ್ ಟ್ರೈಮ್ಸ್ ತನ್ನ ಲೇಖನದಲ್ಲಿ ತಿಳಿಸಿತ್ತು. ತೈವಾನ್ ವಿಷಯದಲ್ಲಿ ಚೀನಾ ಇತ್ತೀಚೆಗೆ ಟ್ರಂಪ್ ಜೊತೆ ನಡೆಸಿರುವ ಮಾತುಕತೆಗಳಿಂದ ಭಾರತ ಕೆಲವೊಂದು ಪಾಠಗಳನ್ನು ಕಲಿಯಬೇಕಿದೆ ಎಂದು ಅದು ಹೇಳಿದೆ. ಟ್ರಂಪ್ ಅಧ್ಯಕ್ಷರಾಗಿ ಚುನಾಯಿತರಾದ ಸಂದರ್ಭದಲ್ಲಿ ತೈವಾನ್ ಅಧ್ಯಕ್ಷರೊಂದಿಗೆ ಮಾತನಾಡಿ ಏಕ ಚೀನಾ ನೀತಿಯನ್ನು ಪ್ರಶ್ನಿಸಿದ್ದರು. ಇದರಿಂದ ಚೀನಾ ಟ್ರಂಪ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತ್ತು. ಆದರೆ ನಂತರ ಚೀನಾ ಟ್ರಂಪ್ ಜೊತೆ ನಡೆಸಿದ ಮಾತುಕತೆ ಫಲವಾಗಿ ಟ್ರಂಪ್ ಮೆತ್ತಗಾಗಿದ್ದರು.

ದಲೈ ಲಾಮಾ ವಿವಾದ :

ಟಿಬೆಟ್ ಧರ್ಮಗುರು ಮಂಗೋಲಿಯಾಗೆ ಭೇಟಿ ನೀಡುವ ವಿಚಾರದಲ್ಲಿ ಕೂಡ ಚೀನಾ ತನ್ನ ಆಕ್ರೋಶ ವ್ಯಕ್ತಪಡಿಸಿತ್ತು. ಚೀನಾದ ಕ್ರಮಗಳಿಗೆ ಪ್ರತಿಯಾಗಿ ಭಾರತದಲ್ಲಿನ ಮಂಗೋಲಿಯನ್ ರಾಯಭಾಗಿ ಅವರು ಭಾರತದ ನೆರವನ್ನು ಕೋರಿದ್ದರು. ಆದರೆ ಚೀನಾದ ಕುತಂತ್ರ ರಾಜತಾಂತ್ರಿಕ ನಡೆ ಪರಿಣಾಮವಾಗಿ ಮಂಗೋಲಿಯಾ ಸರ್ಕಾರ ತಾನು ಇನ್ನು ಮುಂದೆ ಎಂದಿಗೂ ದಲೈ ಲಾಮಾರನ್ನು ತನ್ನ ದೇಶಕ್ಕೆ ಆಹ್ವಾನಿಸುವುದಿಲ್ಲ ಎಂದು ಸ್ಪಷ್ಟಪಡಿಸಿತ್ತು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin