ತೊಗರಿ ಖರೀದಿ ಕೇಂದ್ರ ಆರಂಭ

ಈ ಸುದ್ದಿಯನ್ನು ಶೇರ್ ಮಾಡಿ

15

ಮುದ್ದೇಬಿಹಾಳ,ಡಿ.23- ತಾಲ್ಲೂಕಿನ ತಾಳಿಕೋಟೆ ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಜಿಲ್ಲೆಯಲ್ಲಿಯೇ ಪ್ರತಿಷ್ಠಿತ ಸಮಿತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದೀಗ ಸಮಿತಿಯ ಟೆಂಡರ್ ಹಾಲ್‍ನಲ್ಲಿ ಕೇಂದ್ರ ಸರ್ಕಾರವು ತೊಗರಿ ಖರೀದಿ ಕೇಂದ್ರ ಪ್ರಾರಂಭಿಸಿದೆ.  ಮುಖ್ಯ ಮಾರುಕಟ್ಟೆ ತಾಳಿಕೋಟೆಯಾಗಿದ್ದರೂ ಉಪ ಮಾರುಕಟ್ಟೆಗಳಾದ ಮುದ್ದೇಬಿಹಾಳ, ನಾಲತವಾಡದಲ್ಲಿಯೂ ಸಹ ಬುಧವಾರರಂದು ಖರೀದಿ ಕೇಂದ್ರ ಪ್ರಾರಂಭಸಲಾಗಿದೆ. ಬುಧವಾರರಂದು ಇಲೆಕ್ಟ್ರಾನಿಕ್ ತೂಕದ ಯಂತ್ರ ಇಲ್ಲದ ಕಾರಣದಿಂದ ನಿನ್ನೆ ತೊಗರಿ ಖರೀದಿಗೆ ಮುಂದಾಗಿದ್ದು ಕೇಂದ್ರ ಸರ್ಕಾರದ ಬೆಂಬಲ ಬೆಲೆ 5050 ರೂಗೆ ಒಂದು ಕ್ವಿಂಟಲ್‍ನಂತೆ ಖರೀದಿಸಲಾಗುತ್ತಿದೆ.

ಕೇಂದ್ರ ಸರ್ಕಾರ ಘೋಷಿಸಿದ ಬೆಂಬಲ ಬೆಲೆಗಿಂತಲೂ ಮಾರುಕಟ್ಟೆ ಯಲ್ಲಿ ಹೆಚ್ಚಿನ ದರಕ್ಕೆ ಹಿಂದೆ ಮಾರಾಟವಾಗುತ್ತಿತ್ತು. ಆದರೆ ಮಾರುಕಟ್ಟೆಯಲ್ಲಿ ಇತ್ತೀಚಿಗೆ ತೊಗರಿ ದರ ಕುಸಿತ ಕಂಡಿದ್ದರಿಂದ ರೈತಾಪಿ ಜನತೆ ಖರೀದಿ ಕೇಂದ್ರದತ್ತ ಮುಖ ಮಾಡಿದ್ದಾರೆ.ಖರೀದಿ ಕೇಂದ್ರ ಪ್ರಾರಂಭಗೊಂಡು ಒಂದೇ ದಿನದಲ್ಲಿ ನೂರಾರು ರೈತರು ಭೇಟಿ ಕೊಟ್ಟಿದ್ದಲ್ಲದೇ ತೊಗರಿ ಶಾಂಪಲ್‍ಗಳನ್ನು ತೋರಿಸಿ ತೆರಳಿ ದ್ದಾರಲ್ಲದೇ ಉತ್ತಮದ ದರ ದೊರೆಯುತ್ತದೆ ಎಂಬ ಅನಿಸಿಕೆ ಮಾತು ಗಳೊಂದಿಗೆ ತಮ್ಮ ತಮ್ಮ ತೊಗರಿಯನ್ನು ಸರ್ಕಾರದ ಬೆಂಬಲ ಬೆಲೆಯ ಖರೀದಿ ಕೇಂದ್ರದಲ್ಲಿ ಮಾರಾಟ ಮಾಡುತ್ತಿದ್ದಾರೆ.ಗುರುವಾರರಂದು 50 ಕ್ವಿಂಟಲ್‍ಕ್ಕೂ ಹೆಚ್ಚಿಗೆ ತೊಗರಿಯನ್ನು ಖರೀದಿಸ ಲಾಗಿದ್ದು ರೈತರು ತರುವ ಮಾಲಿಗೆ ಯಾವುದೇ ಸೂಟ್ ಇರುವದಿಲ್ಲಾ ಮತ್ತು ಹಮಾಲಿಯನ್ನೂ ಸಹ ವಿಧಿಸುವದಿಲ್ಲಾ ನೇರವಾಗಿ ಮಾಲನ್ನು ಖರೀದಿ ಕೇಂದ್ರಕ್ಕೆ ತಂದ ನಂತರ ಎಲ್ಲವನ್ನು ಖರೀದಿ ಕೇಂದ್ರದಿಂದಲೇ ಭರಿಸಲಾಗುತ್ತದೆ. ರೈತರು ತಂದ ಮಾಲು ಖರೀದಿಯಾದ 48 ಘಂಟೆಯೊಳಗೆ ಅವರಿಗೆ ಹಣ ಪಾವತಿಯಾಗಲಿದೆ.

ರೈತರು ಹೆಚ್ಚಿನ ಮಾಹಿತಿಗಾಗಿ ಮೋ.ನಂ. 9481045003, 9731084152, 7411799935 ಗೆ ಸಂಪರ್ಕಿಸಬಹುದೆಂದು ಖರೀದಿ ಕೇಂದ್ರದ ಉಸ್ತುವಾರಿ ಲೋಕೇಶ ಅವರು ತಿಳಿಸಿದ್ದಾರೆ.  ತೊಗರಿ ಮಾಲಿನಲ್ಲಿ ಅತೀ ಹೆಚ್ಚು ಕಸ ಕಡ್ಡಿ ಹೆಚ್ಚಿಗೆ ಬ್ಯಾಳಿಯಾ ಗಿದ್ದರೆ ಅಂತಹ ಮಾಲನ್ನು ಖರೀದಿ ಸುವದಿಲ್ಲ. ರೈತರು ಎಲ್ಲವನ್ನು ಸ್ವಚ್ಚಗೊಳಿಸಿ ಕೊಂಡು ತಂದ ಮಾಲನ್ನು ಬೆಂಬಲ ಬೆಲೆಯ ದರದಲ್ಲಿ ಖರೀದಿಸಲಾಗುತ್ತದೆ. ಇದರಲ್ಲಿ ಸೂಟ್ ಮತ್ತು ಹಮಾಲಿ, ಬೊಗಸೆ ಯಾವುದನ್ನು ತೆಗೆದುಕೊಳ್ಳು ವದಿಲ್ಲಾ. ನೇರವಾಗಿ ರೈತರು ತಂದ ಮಾಲನ್ನು ಕ್ವಿಂಟಲ್ ರೀತಿಯಲ್ಲಿ ತೂಕ ಮಾಡಿ ಖರೀದಿಸಲಾಗುತ್ತದೆ. ಮಾರಾಟಕ್ಕೆ ತರುವ ರೈತರು ಫಹಣಿ ಉತ್ತಾರೆ, ಆದಾರ ಕಾರ್ಡ, ಬ್ಯಾಂಕ್ ಪಾಸ್ ಬುಕ್ ತರುವದು ಕಡ್ಡಾ ಯವಾಗಿದೆ.
-ಲೋಕೇಶ, ಖರೀದಿ ಕೇಂದ್ರ ಉಸ್ತುವಾರಿ

 

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin