ISIS ಸೇರಲು ಹೊರಟಿದ್ದ ಶಂಕಿತ ಉಗ್ರ ಮಂಗಳೂರು ವಿಮಾನ ನಿಲ್ದಾಣದಲ್ಲಿ ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

ISIS-Mangalureu

ಮಂಗಳೂರು,ಡಿ.25-ಜಗತ್ತಿಗೆ ಮಾರಕವಾಗಿರುವ ಇಸ್ಲಾಮಿಕ್ ಸ್ಟೇಟ್(ಐಎಸ್‍ಐಎಸ್) ಸಂಘಟನೆಗೆ ಸೇರಲು ತೆರಳುತ್ತಿದ್ದ ಶಂಕಿತ ಉಗ್ರನೊಬ್ಬನನ್ನು ಇಲ್ಲಿನ ಬಜ್ಪೆ ವಿಮಾನ ನಿಲ್ದಾಣದಲ್ಲಿ ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ವಿಮಾನ ನಿಲ್ದಾಣದಲ್ಲಿ ವಿಮಾನದಲ್ಲಿ ತೆರಳಲು ಕಾಯುತ್ತಿದ್ದ ಈ ವ್ಯಕ್ತಿ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದುದ್ದನ್ನು ಕಂಡ ಇಮೈಗ್ರೇಷನ್ ಅಧಿಕಾರಿಗಳು ಅವನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಅಸಲಿ ಪ್ರಕರಣ ಬಹಿರಂಗವಾಗಿದೆ.  ಮೂಲತಃ ಕೇರಳದ ತಲಶ್ಶೇರಿಯ ನಿವಾಸಿಯಾದ ಮುನಾಫ್ ರೆಹಮಾನ್ ನಲಕತ್(40) ಮಂಗಳೂರಿನಲ್ಲಿ ನೆಲೆಸಿದ್ದು ತರಕಾರಿ ವ್ಯಾಪಾರ ಮಾಡುತ್ತಿದ್ದ. ಕಳೆದ ಒಂದು ವರ್ಷದಿಂದ ವಿದೇಶಗಳಿಗೆ ಪದೇ ಪದೇ ಭೇಟಿ ನೀಡುತ್ತಿದ್ದ ಇವನ ಮೇಲೆ ಪೊಲೀಸರು ನಿಗಾ ಇಟ್ಟಿದ್ದರು. ಅಷ್ಟೇ ಅಲ್ಲದೆ ಅವನಿಗೆ ಲುಕ್‍ಔಟ್ ನೋಟಿಸ್ ಕೂಡ ನೀಡಿದ್ದರು.

ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ ಸಂಘಟನೆಗೆ ಸೇರುವ ಉದ್ದೇಶದಿಂದ ಡಿ.23ರಂದು ಮುನಾಫ್ ಹೊರಟಿದ್ದ. ಮುನಾಫ್ ತನ್ನೊಂದಿಗೆ ಹೆಂಡತಿ ಮಕ್ಕಳನ್ನು ಕರೆದುಕೊಂಡು ತೆರಳುತ್ತಿದ್ದ ಎಂದು ಹೇಳಲಾಗಿದೆ.  ಮುನಾಫ್‍ನನ್ನು ಬಂಧಿಸಿದ ಇಮೈಗ್ರೇಷನ್ ಅಧಿಕಾರಿಗಳು ಪ್ರಾಥಮಿಕ ತನಿಖೆಯ ನಂತರ ಅವನನ್ನು ರಾಷ್ಟ್ರೀಯ ತನಿಖಾ ದಳ(ಎನ್‍ಐಎ)ದ ವಶಕ್ಕೆ ಒಪ್ಪಿಸಿದ್ದಾರೆ.

ರಹಸ್ಯ ಸ್ಥಳದಲ್ಲಿ ವಿಚಾರಣೆ:

ಪೊಲೀಸರಿಂದ ಮುನ್ನಾಫ್ ರೆಹಮಾನ್‍ನನ್ನು ವಶಕ್ಕೆ ಪಡೆದಿರುವ ಎನ್‍ಐಎ ಅಧಿಕಾರಿಗಳು ಶಂಕಿತ ಉಗ್ರ ಎಂದು ಹೇಳಲಾದ ಅವನನ್ನು ಮಂಗಳೂರಿನಲ್ಲಿ ರಹಸ್ಯ ಸ್ಥಳವೊಂದಕ್ಕೆ ಕರೆದೊಯ್ದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಬಂಧಿತನಿಂದ ಕೆಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಂಗಳೂರಿನಲ್ಲಿ ವಾಸ್ತವ್ಯ ಹೂಡಿ ನಾಮಕಾವಸ್ತೆಗೆ ತರಕಾರಿ ಮಾರುವವನಂತೆ ನಟಿಸುತ್ತಿದ್ದ ಮುನಾಫ್ ರೆಹಮಾನ್ ನಲಕತ್ ಬಗ್ಗೆ ಸ್ಥಳೀಯರು ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು.  ಈ ಹಿನ್ನೆಲೆಯಲ್ಲಿ ಪೊಲೀಸರು ಮುನಾಫ್ ಮೇಲೆ ನಿಗಾವಹಿಸಿ ಅವನಿಗೆ ಗೊತ್ತಾಗದಂತೆ ಅವನ ಚಲನವಲನಗಳನ್ನು ಪರಿಶೀಲಿಸುತ್ತಿದ್ದರು. ಮುನಾಫ್ ಆಗಾಗ ವಿದೇಶ ಪ್ರಯಾಣ ಹೋಗುವುದು ಪೊಲೀಸರ ಅನುಮಾನವನ್ನು ಮತ್ತಷ್ಟು ಗಾಢವಾಗಿಸಿತ್ತು.
ಈ ಎಲ್ಲ ಬೆಳವಣಿಗೆಗಳ ನಂತರ ಪೊಲೀಸರು ಮುನಾಫ್‍ಗೆ ಲುಕ್‍ಔಟ್ ನೋಟಿಸ್ ನೀಡಿದ್ದು , ಅವನ ಮೇಲೆ ಒಂದು ಕಣ್ಣಿಟ್ಟಿದ್ದರು. ಇದೇ ವೇಳೆ ಡಿ.23ರಂದು ಮುನಾಫ್ ವಿಮಾನದಲ್ಲಿ ತೆರಳಲು ಬಜ್ಪೆ ವಿಮಾನ ನಿಲ್ದಾಣಕ್ಕೆ ಬಂದಿದ್ದ.

ಇವನನ್ನು ಹಿಂಬಾಲಿಸಿದ ಪೊಲೀಸರು ಅಲ್ಲಿ ಅವನ ಅನುಮಾನಾಸ್ಪದ ನಡೆನುಡಿಗಳನ್ನು ಆಧರಿಸಿ ವಶಕ್ಕೆ ಪಡೆದರು. ತನ್ನ ಅವನನ್ನು ತನಿಖೆಗೆ ಗುರಿಪಡಿಸಿದಾಗ ನಿಜವಾದ ವಿಷಯ ಹೊರಬಂತು ಎಂದು ಪೊಲೀಸರು ತಿಳಿಸಿದ್ದಾರೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin