ಕನ್ನಡದ ನಟ, ಕಲಾವಿದ, ವಾಲ್ ಪೈಂಟರ್ ‘ಗುಂಡುಮಣಿ’ ಇನ್ನಿಲ್ಲ
ಬೆಂಗಳೂರು. ಡಿ.26 : ಕನ್ನಡದ ನಟ, ಕಲಾವಿದ, ವಾಲ್ ಪೈಂಟರ್ ‘ಗುಂಡುಮಣಿ’ ಎಂದೇ ಗುರುತಿಸಿಕೊಂಡಿದ್ದ ವೈ.ಎನ್ ಲೊಕೇಶ್ ಇಂದು ನಿಧನರಾಗಿದ್ದಾರೆ. ಹಲವು ಚಿತ್ರಗಳಲ್ಲಿ ಹಾಗೂ ಕಿರುತೆರೆಯಲ್ಲಿ ನಟಿಸಿದ್ದ ಗುಂಡುಮಣಿ ರಸ್ತೆ ಬದಿಯ ಗೋಡೆಗಳ ಮೇಲೆ ಕನ್ನಡ ಸಿನಿಮಾಗಳ ಚಿತ್ರ ಬರೆಯುವ ( ವಾಲ್ ಪೈಂಟರ್) ಕೆಲಸ ಮಾಡುತ್ತಿದ್ದರು. ಇತ್ತೀಚಿಗೆ ಶಿವರಾಜ್ ಕುಮಾರ್ ಅವರ ಶ್ರೀಕಂಠ ಚಲನಚಿತ್ರದ ಪೋಸ್ಟರ್ಗಳನ್ನು ಬೆಂಗಳೂರಿನ ಹಲವು ರಸ್ತೆಗಳಲ್ಲಿ ಬರೆದಿದ್ದರು. ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನು ಮಾಡಿ ಗಮನ ಸೆಳೆದಿದ್ದರು.
ಶಿವಣ್ಣ ಅಭಿನಯದ ಶ್ರೀಕಂಠ ಸಿನಿಮಾದ ಬೋರ್ಡ್ ಬರೆಯಲು ಬಿಜಾಪುರಕ್ಕೆ ತೆರಳಿದ ವೇಳೆ ಹೃದಯಾಘಾತ ಸಂಭವಿಸಿದ್ದು, ಇಂದು ಬೆಳಗ್ಗೆ 10 ಗಂಟೆಗೆ ತೀವ್ರ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಪೊಷಕನಟನಾಗಿ, ಖಳನಟನಾಗಿ ಶಿವರಾಜ್ ಕುಮಾರ್, ಉಪೇಂದ್ರ, ಸುದೀಪ್ ಅವರ ಜೊತೆ ಅಭಿನಯಿಸಿದ್ದಾರೆ. 40 ಕ್ಕು ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರೋ ಲೊಕೇಶ್ ಚಿತ್ರರಂಗದಲ್ಲಿ ‘ಗುಂಡುಮಣಿ’ ಎಂದೇ ಗುರುತಿಸಿಕೊಂಡಿದ್ದರು. ತುಮಕೂರಿನ ಉಪ್ಪಾರಳಿಯಲ್ಲಿಯಲ್ಲಿ ಅವರ ಅಂತ್ಯ ಸಂಸ್ಕಾರ ಮಾಡಲಾಯಿತು.
Eesanje News 24/7 ನ್ಯೂಸ್ ಆ್ಯಪ್ – Click Here to Download