ಗುಜರಾತಿನಲ್ಲಿ ಗಾಯಕಿ ಮೇಲೆ ರಾಶಿ ರಾಶಿ ನೋಟಿನ ಸುರಿಮಳೆ..!

ಈ ಸುದ್ದಿಯನ್ನು ಶೇರ್ ಮಾಡಿ

ಗುಜರಾತ್,ಡಿ.26-ಕೇಂದ್ರ ಸರ್ಕಾರವು ಅಧಿಕ ಮೌಲ್ಯದ ನೋಟುಗಳನ್ನು ರದ್ದು ಮಾಡಿದ ಬಳಿಕ ಜನಸಾಮಾನ್ಯರು ದಿನನಿತ್ಯದ ಖರ್ಚುವೆಚ್ಚದ ಹಣಕ್ಕಾಗಿ ಬ್ಯಾಂಕ್ ಹಾಗೂ ಎಟಿಎಂಗಳಲ್ಲಿ ನಿಂತು ಹೈರಾಣರಾಗಿದ್ದಾರೆ. ಆದರೆ ಗುಜರಾತಿನ ನವಸಾರಿಯಲ್ಲಿ ಗಾಯಕಿ ಮೇಲೆ ಪ್ರೇಕ್ಷಕರು 10ರಿಂದ 2000 ರೂ. ಮುಖಬೆಲೆಯ ಹೊಸ ನೋಟುಗಳನ್ನು ಸುರಿಯುತ್ತಿರುವುದು ಕಂಡುಬಂದಿದೆ. ಭಜನಾಸಂಧ್ಯಾ ಕಾರ್ಯಕ್ರಮದಲ್ಲಿ ಗಾಯಕಿ ಮೇಲೆ ರಾಸಿ ರಾಸಿ ನೋಟು ಸುರಿದು ಪ್ರೇಕ್ಷಕರು ಸಂಭ್ರಮಿಸಿರುವುದು ಚರ್ಚೆಗೆ ಗ್ರಾಸವಾಗಿದೆ. ಬ್ಯಾಂಕ್‍ನಲ್ಲಿ ಕೆಲಸಕಾರ್ಯಗಳನ್ನು ಬಿಟ್ಟು ಸರತಿ ಸಾಲಿನಲ್ಲಿ ನಿಂತು ಹಣಕ್ಕಾಗಿ ಜನಸಾಮಾನ್ಯರು ಪರದಾಟ ಒಂದು ಕಡೆಯಾದರೆ, ಪ್ರಧಾನಿ ಮೋದಿ ಮುಖ್ಯಮಂತ್ರಿಯಾಗಿದ್ದ ಗುಜರಾತ್‍ನಲ್ಲೇ ಇಂಥದೊಂದು ಪ್ರಸಂಗ ನಡೆದಿರುವುದು ವಿಪರ್ಯಾಸ.

ನೋಟ್ ಬ್ಯಾನ್ ಮಾಡಿರುವ ಹಿನ್ನೆಲೆಯಲ್ಲಿ ಹಣಕ್ಕಾಗಿ ತೊಂದರೆ ಉಂಟಾಗಿರುವ ಪರಿಸ್ಥಿತಿಯಲ್ಲಿ ಈ ಪ್ರೇಕ್ಷಕರಿಗೆ ಇಷ್ಟೊಂದು ಹಣ ಎಲ್ಲಿಂದ ಬಂತು ಎಂಬುದರ ಬಗ್ಗೆ ತನಿಖೆಯಾಗಬೇಕಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin