ಡಿಸಿಸಿ ಬ್ಯಾಂಕ್‍ಗಳಿಗೆ 6 ದಿನದಲ್ಲಿ 500 ಕೋಟಿ ರೂ. ಠೇವಣಿ..!

ಈ ಸುದ್ದಿಯನ್ನು ಶೇರ್ ಮಾಡಿ

old-notes

ಬೆಂಗಳೂರು,ಡಿ.26- ಹಳೆ ನೋಟು ರದ್ಧತಿ ಬಳಿಕ ಕರ್ನಾಟಕದ ವಿವಿಧೆಡೆ ದಾಳಿ ಮುಂದುವರಿಸಿರುವ ಆದಾಯ ತೆರಿಗೆ(ಐಟಿ) ಮತ್ತು ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳು ಭಾರೀ ಅಕ್ರಮಗಳನ್ನು ಪತ್ತೆ ಮಾಡಿದ್ದಾರೆ. ನಂತರ ನ.9 ಮತ್ತು 14ರ ನಡುವೆ ಕೇವಲ ಆರೇ ದಿನಗಳಲ್ಲಿ ರಾಜ್ಯದ ಜಿಲ್ಲಾ ಕೇಂದ್ರಿತ ಸಹಕಾರ(ಡಿಸಿಸಿ) ಬ್ಯಾಂಕ್‍ಗಳಲ್ಲಿ 500 ಕೋಟಿ ರೂ.ಗಳ ಠೇವಣಿ ಸಂಗ್ರಹ ಕಂಡುಬಂದಿದ್ದು , ಭಾರೀ ಅಕ್ರಮಗಳು ನಡೆದಿರುವುದಕ್ಕೆ ಸಾಕ್ಷಿಯಾಗಿದೆ.   ಬಾಗಲಕೋಟೆ ಡಿಸಿಸಿ ಬ್ಯಾಂಕ್‍ವೊಂದರಲ್ಲಿ 162 ಕೋಟಿ ರೂ.ಗಳ ಠೇವಣಿ ಪತ್ತೆಯಾಗಿದೆ. ಇದು ರಾಜ್ಯದ ಎಲ್ಲ ಡಿಸಿಸಿ ಬ್ಯಾಂಕ್‍ಗಳಲ್ಲಿ ಕಂಡುಬಂದ ಠೇವಣಿಗಿಂತ ಅತ್ಯಧಿಕ ಪ್ರಮಾಣದ್ದಾಗಿದೆ.

ಅಚ್ಚರಿ ಸಂಗತಿ ಎಂದರೆ ಕಾಂಗ್ರೆಸ್ ಮತ್ತು ಬಿಜೆಪಿ ರಾಜಕೀಯ ಧುರೀಣರು ಬಾಗಲಕೋಟೆಯ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಯಲ್ಲಿದ್ದಾರೆ.  ಮಾಜಿ ಸಚಿವ ಅಜಯ್‍ಕುಮಾರ್ ಸರ್. ನಾಯಕ್ ಈ ಬ್ಯಾಂಕ್‍ನ ಅಧ್ಯಕ್ಷರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟದಲ್ಲಿದ್ದ ಮಾಜಿ ಸಚಿವರುಗಳಾದ ಎಸ್.ಆರ್.ಪಾಟೀಲ್, ಎಚ್.ವೈ.ಮೇಟಿ ಮತ್ತು ಬಿಜೆಪಿಯ ನೂತನ ಎಂಎಲ್‍ಸಿ ಹನುಮಂತ ನಾಯಕ್ ನಿರ್ದೇಶಕರಾಗಿದ್ದಾರೆ.

ಬರಪೀಡಿತ ಪ್ರದೇಶವಾದ ಬಾಗಲಕೋಟೆಯ ಡಿಸಿಸಿ ಬ್ಯಾಂಕ್‍ನಲ್ಲಿ ಕೇವಲ ಆರೇ ದಿನಗಳಲ್ಲಿ 162 ಕೋಟಿ ರೂ. ಠೇವಣಿ ಕಂಡುಬಂದಿರುವುದು ಐಟಿ ಅಧಿಕಾರಿಗಳ ಹುಬ್ಬೇರುವಂತೆ ಮಾಡಿದೆ.
ಇದೇ ವೇಳೆ ಬೆಳಗಾವಿ ಸಹಕಾರಿ ಬ್ಯಾಂಕ್‍ನಲ್ಲಿ ಗುರುವಾರ ದಾಖಲೆ ಪತ್ರಗಳನ್ನು ಪರಿಶೀಲಿಸಿದ ಐಟಿ ಅಧಿಕಾರಿಗಳಿಗೆ ಭಾರೀ ಮೊತ್ತದ ಠೇವಣಿಗಳು ಸಹ ಕಂಡುಬಂದಿದೆ.   ಡಿಸಿಸಿ ಬ್ಯಾಂಕ್‍ಗಳಲ್ಲಿ ಕಂಡುಬಂದಿರುವ 500 ರೂ.ಗಳ ಠೇವಣಿಗೆ ಸಂಬಂಧಿಸಿದಂತೆ ಬ್ಯಾಂಕ್‍ನ ಆಡಳಿತ ಮಂಡಳಿ ಮತ್ತು ಅಧಿಕಾರಿಗಳನ್ನು ಐಟಿ ತೀವ್ರ ವಿಚಾರಣೆಗೊಳಪಡಿಸಿದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 
.

Facebook Comments

Sri Raghav

Admin