ಬಿಜೆಪಿ ಸೇರಿದ ಸರಬ್ಜಿತ್ ಸಿಂಗ್ ಸೋದರಿ

ಈ ಸುದ್ದಿಯನ್ನು ಶೇರ್ ಮಾಡಿ

Sarabjith-Singh-01

ಚಂಡೀಘಡ, ಡಿ.26 : 2013ರಲ್ಲಿ ಪಾಕಿಸ್ತಾನ ಜೈಲಿನಲ್ಲಿ ಮೃತಪಟ್ಟ ಸರಬ್ಜಿತ್ ಸಿಂಗ್ ಸಹೋದರಿ ದಲ್ಬೀರ್ ಕೌರ್ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಪಂಜಾಬ್ ನಲ್ಲಿ ಕಿಸಾನ್ ಮೋರ್ಚಾ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಿಜೆಪಿ ಶಾಸಕ ಮತ್ತು ಸಚಿವ ಸುರ್ಜಿತ್ ಜ್ಯಾನಿ ಅವರ ಸಮ್ಮುಖದಲ್ಲಿ ದಲ್ಬೀರ್ ಕೌರ್ ಕಮಲಪಡೆ ಸೇರಿದ್ದಾರೆ.  ಪಾಕಿಸ್ತಾನ ಜೈಲಿನಲ್ಲಿದ್ದ ತಮ್ಮ ಸಹೋದರನನ್ನು ಭಾರತಕ್ಕೆ ಕರೆತರಲು 2005 ರಿಂದಲೂ ಪ್ರಯತ್ನ ಮಾಡುತ್ತಿದ್ದ ದಲ್ಬೀರ್, ಆಗಿನಿಂದ್ಲೇ ಬಿಜೆಪಿ ಜೊತೆಗೆ ಗುರುತಿಸಿಕೊಂಡಿದ್ರು.

ದಲ್ಬೀರ್ ಸಹೋದರ ಸರಬ್ಜಿತ್ ಸಿಂಗ್ ಅವರ ಮೇಲೆ ಭಯೋತ್ಪಾದನೆ ಹಾಗೂ ಗೂಢಚಾರಿಕೆ ಆರೋಪ ಹೊರಿಸಿದ್ದ ಪಾಕಿಸ್ತಾನ ಕೋರ್ಟ್, ಅವರಿಗೆ 1991ರಲ್ಲಿ ಮರಣ ದಂಡನೆ ವಿಧಿಸಿತ್ತು. 2008 ರಲ್ಲಿ ಮರಣದಂಡನೆಗೆ ತಡೆ ನೀಡಲಾಗಿತ್ತು. ಆದ್ರೆ 2013ರಲ್ಲಿ ಪಾಕಿಸ್ತಾನ ಜೈಲಿನಲ್ಲಿ ಸಹಖೈದಿ ನಡೆಸಿದ ಹಲ್ಲೆಯಲ್ಲಿ ಸರಬ್ಜಿತ್ ಸಿಂಗ್ ಮೃತಪಟ್ಟಿದ್ದರು. ಸರಬ್ಜಿತ್ ಸಿಂಗ್ ಕಥೆಯನ್ನಾಧರಿಸಿ ಬಾಲಿವುಡ್ ನಲ್ಲಿ ಸಿನಿಮಾ ಕೂಡ ಬಂದಿತ್ತು. ಇದರಲ್ಲಿ ಸರಬ್ಜಿತ್ ಸಹೋದರಿಯಾಗಿ ಐಶ್ವರ್ಯ ರಾಯ್ ಅಭಿನಯಿಸಿದ್ದರೆ, ಸರಬ್ಜಿತ್ ಪಾತ್ರದಲ್ಲಿ ರಣದೀಪ್ ಹೂಡಾ ನಟಿಸಿದ್ದರು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin