ಸುಮಾತ್ರ ಸುನಾಮಿ ಘೋರ ದುರಂತ ನಡೆದು ಇಂದಿಗೆ 12 ವರ್ಷ

ಈ ಸುದ್ದಿಯನ್ನು ಶೇರ್ ಮಾಡಿ

2004-tsunami

ಚೆನ್ನೈ, ಡಿ. 26- ಏಷ್ಯಾದ ಅನೇಕ ರಾಷ್ಟ್ರಗಳಿಗೆ ಡಿಸೆಂಬರ್ 26, 2004 ಅತ್ಯಂತ ಕರಾಳ ದಿನ. ಇಂಡೋನೆಷ್ಯಾದ ಸುಮಾತ್ರ ದ್ವೀಪದ ಸಾಗರಗರ್ಭದಲ್ಲಿ ಸಂಭವಿಸಿದ ಭೀಕರ ಭೂಕಂಪ ಮತ್ತು ನಂತರ ಅಪ್ಪಳಿಸಿದ ವಿನಾಶಕಾರಿ ಸುನಾಮಿಗೆ ಭಾರತ ಸೇರಿದಂತೆ ವಿವಿಧ ದೇಶಗಳಲ್ಲಿ 3,00,000ಕ್ಕೂ ಅಧಿಕ ಮಂದಿ ಬಲಿಯಾದರು. ಘೋರ ಪ್ರಕೃತಿ ದುರಂತಗಳಲ್ಲೇ ಅತ್ಯಂತ ಭೀಕರ ಎಂದು ಪರಿಗಣಿಸಲಾಗಿದೆ.   ಹಿಂದು ಮಹಾಸಾಗರದಲ್ಲಿ ಇಂದಿಗೆ ಸರಿಯಾಗಿ 12 ವರ್ಷಗಳ ಹಿಂದೆ ಭಾರೀ ಭೂಕಂಪ ಮತ್ತು ಸುನಾಮಿ ಅಪ್ಪಳಿಸಿದ ದುರ್ದಿನ. ಕ್ರಿಸ್‍ಮಸ್ ಸಂಭ್ರಮದಲ್ಲಿ ಮುಳಗಿದ್ದ ಹಾಗೂ ಹೊಸ ವರ್ಷ ಸ್ವಾಗತಿಸಲು ಅಣಿಯಾಗುತ್ತಿದ್ದ ದ್ವೀಪರಾಷ್ಟ್ರಗಳಾದ ಶ್ರೀಲಂಕಾ, ಇಂಡೋನೆಷ್ಯಾ, ಥೈಲೆಂಡ್, ಮಲೇಷ್ಯಾ, ಮಾಲ್ಡೀವ್ಸ್ ಮತ್ತು ಭಾರತ ಸೇರಿದಂತೆ 14 ದೇಶಗಳ ಕರಾವಳಿ ಮೇಲೆ ಬಂದೆರಗಿದ ಸುನಾಮಿ ಆರ್ಭಟದಲ್ಲಿ ಅಪಾರ ಸಾವು-ನೋವು, ಆಸ್ತಿ-ಪಾಸ್ತಿ ನಷ್ಟ ಸಂಭವಿಸಿತು.

ಕರಾವಳಿ ತೀರಗಳ ಮೇಲೆ 100 ಅಡಿಗಳಿಗೂ ಎತ್ತರದ ದೈತ್ಯಾಕಾರದ ಅಲೆಗಳು ಅಪ್ಪಳಿಸಿ ಅಲ್ಲೋಲ-ಕಲ್ಲೋಲ ಸೃಷ್ಟಿಯಾಯಿತು. ಇದು ಇತಿಹಾಸದ ಅತ್ಯಂತ ಘೋರ ವಿಕೋಪ. ಭೂಗರ್ಭ ಇಲಾಖೆಯಲ್ಲಿ ದಾಖಲಾದ ವಿಶ್ವದ ಮೂರನೇ ಅತ್ಯಂತ ಪ್ರಬಲ ಭೂಕಂಪವೂ ಇದಾಗಿತ್ತು. ಅಧಿಕೃತ ಮೂಲಗಳ ಪ್ರಕಾರ ಸುನಾಮಿ 2 ಲಕ್ಷ 30 ಸಾವಿರ ಜನರನ್ನು ಸುನಾಮಿ ಆಪೋಶನ ತೆಗೆದುಕೊಂಡಿತು. ಆದರೆ, ಈ ದುರಂತದಲ್ಲಿ 3 ಲಕ್ಷಕ್ಕೂ ಹೆಚ್ಚು ಜನ ಸಾವಿಗೀಡಾಗಿ ಲಕ್ಷಾಂತರ ಜನರು ಸಂತ್ರಸ್ತರಾದರು. ಸಹಸ್ರಾರು ಜನರು ಕಣ್ಮರೆಯಾದರು. ಸುನಾಮಿ ಬಗ್ಗೆ ಕಂಡು ಕೇಳರಿಯದಿದ್ದವರು ಭಾರೀ ಅಲೆಗಳ ರಭಸಕ್ಕೆ ತತ್ತರಿಸಿದರು. ಲಕ್ಷಾಂತರ ಜನರ ಬದುಕೂ ನೀರಿನಲ್ಲಿ ಕೊಚ್ಚಿ ಹೋಯಿತು.

ಚೆನ್ನೈ ಮಹಾನಗರಿ ಸೇರಿದಂತೆ ತಮಿಳುನಾಡಿನ ಕರಾವಳಿ ಪ್ರದೇಶಗಳಲ್ಲೇ 11,000ಕ್ಕೂ ಹೆಚ್ಚು ಮಂದಿ ಮೃತಪಟ್ಟು., 5,000 ಜನ ನಾಪತ್ತೆಯಾದರು. ಅಲ್ಲದೇ 3,80,000 ಮಂದಿ ನಿರಾಶ್ರಿತರಾದರು. ಸುನಾಮಿ ರುದ್ರ ನರ್ತನದಿಂದ ಈ ಪ್ರಾಂತ್ಯಗಳಲ್ಲಿ ಸಂಭವಿಸಿದ ನಷ್ಟ 1.2 ಶತಕೋಟಿ ಡಾಲರ್.  ಇಂಡೋನೆಷ್ಯಾದ ಸುಮಾತ್ರ ದ್ವೀಪದಲ್ಲಿದ್ದ ಭೂಕಂಪದ ಕೇಂದ್ರ ಬಿಂದು ರಿಕ್ಟರ್ ಮಾಪಕದಲ್ಲಿ 9.3 ರಷ್ಟಿತ್ತು. ಸುನಾಮಿಯ ರೌದ್ರಾವತಾರದಿಂದ ಸಾಗರ ತೀರ ಪ್ರದೇಶಗಳು ಅಕ್ಷರಶಃ ಜಲಪ್ರಳಯ ಮುಳುಗಡೆಯಾದವರು. ಈ ದೇಶಗಳಿಗೆ ನೆರವು ನೀಡಲು ವಿಶ್ವದಾದ್ಯಂತ 14 ಶತಕೋಟಿ ಡಾಲರ್‍ಗಳ ಮಾನವೀಯ ನೆರವು ನೀಡಲಾಯಿತು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin