ಸೋಮವಾರ (26-12-2016) : ಪಂಚಾಂಗ ಮತ್ತು ರಾಶಿಭವಿಷ್ಯ

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  : ಮೂಢರು ಅನಿತ್ಯವಾದ ಐಶ್ವರ್ಯವನ್ನು ಪಡೆದರೂ ಸಂತೋಷಿಸುತ್ತಾರೆ. ಕಷ್ಟಗಳಿಗೆ ಸಿಲುಕಿದಾಗ ದುಃಖಿಸುತ್ತಾರೆ. ಆದರೆ ವಿವೇಕದಿಂದ ನಡೆಯುವ ಮನುಷ್ಯರಿಗೆ ಐಶ್ವರ್ಯವೂ ಲೆಕ್ಕಕ್ಕಿಲ್ಲ. ವಿಪತ್ತುಗಳೂ ಲೆಕ್ಕಕ್ಕಿಲ್ಲ.

Rashi

ಪಂಚಾಂಗ : ಭಾನುವಾರ , 25.12.2016

ಸೂರ್ಯ ಉದಯ ಬೆ.06.39 / ಸೂರ್ಯ ಅಸ್ತ ಸಂ.06.01
ಚಂದ್ರ ಅಸ್ತ ಮ.03.53 / ಚಂದ್ರ ಉದಯ ರಾ.04.49
ದುರ್ಮುಖಿ ಸಂವತ್ಸರ / ದಕ್ಷಿಣಾಯಣ / ಹಿಮಂತ ಋತು / ಮಾರ್ಗಶಿರ ಮಾಸ / ಕೃಷ್ಣ ಪಕ್ಷ
ತಿಥಿ: ತ್ರಯೋದಶಿ (ದಿನಪೂರ್ತಿ) / ನಕ್ಷತ್ರ: ಅನೂರಾಧ (ನಾ.ಬೆ.06.27)
ಯೋಗ: ಧೃತಿ (ಬೆ.08.57) / ಕರಣ: ಗರಜೆ (ರಾ.07.20) / ಮಳೆ ನಕ್ಷತ್ರ: ಮೂಲ
ಮಾಸ: ಧನಸ್ಸು ತೇದಿ: 12

ರಾಶಿ ಭವಿಷ್ಯ :

ಮೇಷ : ಉದ್ಯೋಗದಲ್ಲಿ ಪ್ರತಿಷ್ಠಿತ ಜನರ ಸಹಕಾರ ಸಿಗಲಿದೆ, ತಾಳ್ಮೆ, ಸಮಾಧಾನದಿಂದಿರುವುದು ಒಳ್ಳೆಯದು
ವೃಷಭ : ವ್ಯಾಪಾರ-ವ್ಯವಹಾರಗಳಲ್ಲಿ ಸಮಾಧಾನವಿರುವುದಿಲ್ಲ
ಮಿಥುನ: ಪ್ರೇಮಿಗಳ ಪ್ರೇಮ ಸಲ್ಲಾಪ ಕಂಕಣಬಲಕ್ಕೆ ಪೂರಕವಾಗಲಿದೆ, ಆರೋಗ್ಯದಲ್ಲಿ ಸಮಸ್ಯೆ ಉಂಟಾಗಲಿದೆ
ಕಟಕ: ಸಾಂಸಾರಿಕ ಸ್ಥಿತಿ ಸಮಾ ಧಾನ ತರಲಾರದು, ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಿರುತ್ತದೆ
ಸಿಂಹ: ಅವಿವಾಹಿತರಿಗೆ ಯೋಗ್ಯ ಸಂಬಂಧ ಬರಲಿದೆ, ಕೌಟುಂಬಿಕ ವಾದಿ ನೆಮ್ಮದಿ ಇರುತ್ತದೆ
ಕನ್ಯಾ: ಬರಬೇಕಾದ ಹಣ ಸ್ಥಗಿತ ಗೊಳ್ಳಲಿದೆ, ಹಿತಶತ್ರುಗಳಿಂದ ಕಿರಿಕಿರಿ
ತುಲಾ: ವ್ಯಾಪಾರ-ವ್ಯವಹಾರ ಗಳಲ್ಲಿನ ಹೂಡಿಕೆ ನಷ್ಟಕ್ಕೆ ಕಾರಣ
ವೃಶ್ಚಿಕ : ನಿರುದ್ಯೋಗಿಗಳು ಉದ್ಯೋಗಕ್ಕಾಗಿ ದೂರ ಸಂಚಾರ ಮಾಡಬೇಕಾಗುತ್ತದೆ
ಧನುಸ್ಸು: ಧಾರ್ಮಿಕ ಕಾರ್ಯ ಮಾಡುವವರಿಗೆ ಅಪವಾದ ಭೀತಿ, ಅನಿರೀಕ್ಷಿತ ಶುಭಸುದ್ದಿ ಕೇಳುವಿರಿ
ಮಕರ: ದಾಂಪತ್ಯದಲ್ಲಿ ಸಂತಸದ ವಾತಾವರಣ
ಕುಂಭ: ಸಾಂಸಾರಿಕವಾಗಿ ಹೆಚ್ಚಿನ ಜವಾಬ್ದಾರಿ ಇರುತ್ತದೆ
ಮೀನ: ಕೆಲಸ-ಕಾರ್ಯಗಳಲ್ಲಿ ಅಭಿವೃದ್ಧಿ ಸಾಧಿಸುವಿರಿ

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin