ತಮಿಳುನಾಡಿನ 3,000 ಬೆಸ್ತರ ಚದುರಿಸಿದ ಶ್ರೀಲಂಕಾ ನೌಕಾಪಡೆ, ಹಲವರಿಗೆ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

Tamil-Fishermen-Srilanka

ರಾಮೇಶ್ವರ, ಡಿ.27-ಭಾರತ ಮತ್ತು ಶ್ರೀಲಂಕಾ ಜಲಗಡಿ ಪ್ರದೇಶದಲ್ಲಿ ತಮಿಳುನಾಡು ಮೀನುಗಾರರು ಮತ್ತು ದ್ವೀಪರಾಷ್ಟ್ರದ ನೌಕಾಪಡೆ ನಡುವೆ ಸಂಘರ್ಷ ಮತ್ತಷ್ಟು ತೀವ್ರಗೊಂಡಿದೆ. ಕಚ್ಚತೀವು ಕರಾವಳಿ ಪ್ರದೇಶದಲ್ಲಿ 100ಕ್ಕೂ ಹೆಚ್ಚು ಯಾಂತ್ರ್ರೀಕೃತ ದೋಣಿಗಳ ಬಲೆಗಳನ್ನು ಕತ್ತರಿಸಿದ ಶ್ರೀಲಂಕಾ ನೌಕಾ ಸಿಬ್ಬಂದಿ ಮೀನುಗಾರಿಕೆಯಲ್ಲಿ ತೊಡಗಿದ್ದ 3,000ಕ್ಕೂ ಹೆಚ್ಚು ಬೆಸ್ತರನ್ನು ಬೆನ್ನಟ್ಟಿ ಚದುರಿಸಿರುವ ಘಟನೆ ನಿನ್ನೆ ನಡೆದಿದೆ. ಈ ಘಟನೆಯಲ್ಲಿ ಅನೇಕ ಮೀನುಗಾರರಿಗೆ ಗಾಯಗಳಾಗಿವೆ.   ಶ್ರೀಲಂಕಾ ಕರಾವಳಿ ರಕ್ಷಣಾ ಪಡೆ ಸಿಬ್ಬಂದಿಯ ದೌರ್ಜನ್ಯದಿಂದಾಗಿ ನೂರಾರು ಬೆಸ್ತರು ಹೆದರಿ ಕಂಗಾಲಾಗಿ ಮೀನು ಹಿಡಿಯದೇ ಬರಿಗೈಯಲ್ಲಿ ಹಿಂದಿರುಗಿದ್ದಾರೆ ಎಂದು ರಾಮೇಶ್ವರಂ ಮೀನುಗಾರರ ಸಂಘದ ಅಧ್ಯಕ್ಷ ಎಸ್.ಎಮಿರೆಟ್ ಆರೋಪಿಸಿದ್ದಾರೆ.

ರಾಮೇಶ್ವರಂ ಮೀನುಗಾರರು ನಿನ್ನೆ 600 ದೋಣಿಗಳಲ್ಲಿ ಕಚ್ಚತೀವು ಬಳಿ ಮೀನುಗಾರಿಕೆಯಲ್ಲಿ ತೊಡಗಿದ್ದರು. ಅಗಿ ಅಲ್ಲಿಗೆ ಧಾವಿಸಿದ ಶ್ರೀಲಂಕಾ ನೌಕಾ ಸಿಬ್ಬಂದಿ 100ಕ್ಕೂ ಹೆಚ್ಚು ದೋಣಿಗಳನ್ನು ಸುತ್ತುವರಿದು ಮೀನುಗಾರಿಕೆ ಬಲೆಗಳನ್ನು ಕತ್ತರಿಸಿದರು ಹಾಗೂ ಅಲ್ಲಿಂದ ಹಿಂದಿಗುವಂತೆ ಬೆದರಿಸಿದರು. ಇದಕ್ಕೆ ಮೀನುಗಾರರು ವಿರೋಧ ವ್ಯಕ್ತಪಡಿಸಿದಾಗ ದೌರ್ಜನ್ಯ-ಹಲ್ಲೆ ನಡೆಸಿದ ಸಿಬ್ಬಂದಿ ಮೀನುಗಾರರನ್ನು ಬೆನ್ನಟ್ಟಿ ಚದುರಿಸಿದರು. ಕರಾವಳಿ ರಕ್ಷಣಾ ಪಡೆ ನಡೆಸಿದ ಹಲ್ಲೆಯಿಂದಾಗಿ ಅನೇಕ ಬೆಸ್ತರು ಗಾಯಗೊಂಡಿದ್ದಾರೆ ಎಂದು ಅವರು ದೂರಿದ್ದಾರೆ.
ಕಳೆದ ಕೆಲವು ದಿನಗಳಿಂದ ರಾಮೇಶ್ವರಂ ಕರಾವಳಿ ಪ್ರದೇಶದಲ್ಲಿ ಶ್ರೀಲಂಕಾ ನೌಕಾಪಡೆ ತಮಿಳುನಾಡು ಬೆಸ್ತರಿಗೆ ಮೀನುಗಾರಿಕೆಗೆ ಅಡ್ಡಿಯುಂಟು ಮಾಡಿ ದೋಣಿಗಳು ಮತ್ತು ಬಲೆಗಳಿಗೆ ಹಾನಿ ಮಾಡುತ್ತಿದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin