ದೆಹಲಿಯಲ್ಲಿ ಪಂಚತಾರಾ ಹೋಟೆಲ್‍ನಲ್ಲಿ ಅಮೆರಿಕ ಮಹಿಳೆ ಮೇಲೆ ಗ್ಯಾಂಗ್‍ರೇಪ್

ಈ ಸುದ್ದಿಯನ್ನು ಶೇರ್ ಮಾಡಿ

Gang-Rape-Delhi

ನವದೆಹಲಿ, ಡಿ.26-ಅಮೆರಿಕದ ಮಹಿಳೆಯೊಬ್ಬಳ ಮೇಲೆ ಇಲ್ಲಿನ ಕನ್ನೌಟ್ ಪ್ಲೇಸ್‍ನ ಪಂಚತಾರಾ ಹೋಟೆಲ್‍ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಸಂಬಂಧ ಪ್ರವಾಸಿ ಮಾರ್ಗದರ್ಶಿ ಸೇರಿದಂತೆ ನಾಲ್ವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಟೂರಿಸ್ಟ್ ಗೈಡ್ ಅನಿರುದ್ಧ ಸಿಂಗ್, ಹೊಟೇಲ್ ನೌಕರ ವಿವೇಕ್, ವಾಹನ ಚಾಲಕ ಓಂ ಪ್ರಕಾಶ್ ಮತ್ತು ಕ್ಲೀನರ್ ಮಕ್ಸೂದ್ ಖಾನ್ ಬಂಧಿತ ಆರೋಪಿಗಳು ಎಂದು ದೆಹಲಿ ಪೊಲೀಸ್ ವಕ್ತಾರ ದೀಪೇಂದ್ರ ಪಾಠಕ್ ಹೇಳಿದ್ದಾರೆ. ಈ ಗ್ಯಾಂಗ್‍ರೇಪ್ ಪ್ರಕರಣದಲ್ಲಿ ಷಾಮೀಲಾಗಿರುವ ಇತರ ಆರೋಪಿಗಳನ್ನು ಶೀಘ್ರ ಬಂಧಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಘಟನೆ ವಿವರ : ಅಮೆರಿಕದ 25 ವರ್ಷದ ಮಹಿಳೆ ಮೇಲೆ ಐವರ ಗುಂಪೊಂದು ಸಾಮೂಹಿಕ ಅತ್ಯಾಚಾರ ಎಸಗಿರುವ ಪ್ರಕರಣ ಕನ್ನೌ ಪ್ಲೇಸ್‍ನ ಪಂಚತಾರಾ ಹೋಟೆಲ್‍ನಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿತ್ತು.  ಗ್ಯಾಂಗ್‍ರೇಪ್‍ಗೆ ಒಳಗಾದ ಮಹಿಳೆಯು ಅಕ್ಡೋಬರ್‍ನಲ್ಲಿ ಈ-ಮೇಲ್ ಮೂಲಕ ನೀಡಿರುವ ದೂರನ್ನು ಪೊಲೀಸರು ಸ್ವೀಕರಿಸಿದ್ದರು. ಎಫ್‍ಐಆರ್ ದಾಖಲಾದ ನಂತರ ತನ್ನ ಹೇಳಿಕೆಯನ್ನು ನೀಡಲು ಆಕೆ ದೆಹಲಿಗೆ ಹಿಂದಿರುಗಿದ ನಂತರ ಆರೋಪಿಗಳ ಸೆರೆ ಕಾರ್ಯ ಚುರುಕುಗೊಂಡಿತು..

ಘಟನೆಯನ್ನು ಪೂರ್ಣವಾಗಿ ವಿವರಿಸಿ ಆಕೆ ದೆಹಲಿ ಪೊಲೀಸ್ ಕಮಿಷನರ್ ಅವರ ಅಧಿಕೃತ ಈ-ಮೇಲ್‍ಗೆ ದೂರು ದಾಖಲಿಸಿದ್ದು. ಕಳೆದ ಮಾರ್ಚ್ 2016ರಂದು ಕಾರ್ಯನಿಮಿತ್ತ ನಾನು ಪ್ರವಾಸಿ ವೀಸಾದ ಮೇಲೆ ದೆಹಲಿಗೆ ಆಗಮಿಸಿ ಕನ್ನೌಟ್ ಪ್ಲೇಸ್ ಬಳಿ ಪಂಚಾತಾರ ಹೋಟೆಲ್‍ನಲ್ಲಿ ವಾಸ್ತವ್ಯ ಹೂಡಿದ್ದೆ. ಹೋಟೆಲ್ ಸಿಬ್ಬಂದಿಯ ಸಲಹೆ ಮೇರೆಗೆ ಪ್ರವಾಸಿ ಮಾರ್ಗದರ್ಶಿಯನ್ನು ನೇಮಿಸಿಕೊಂಡೆ. ಆತ ನಗರದ ಪ್ರೇಕ್ಷಣೀಯ ಸ್ಥಳಗಳಲ್ಲಿ ನನ್ನನ್ನು ಸುತ್ತಾಡಿಸಿದ ಎಂದು ಅವರು ದೂರಿನಲ್ಲಿ ವಿವರಿಸಿದ್ದರು.

ಮರುದಿನ ನಾನು ಹೋಟೆಲ್ ಕೊಠಡಿಯಲ್ಲಿದ್ದಾಗ, ಮಾರ್ಗವೊಂದರ ನಕ್ಷೆ ಬಗ್ಗೆ ಚರ್ಚಿಸಬೇಕೆಂದು ಹೇಳಿಕೊಂಡು ಗೈಡ್ ಮತ್ತು ಆತನ ಸ್ನೇಹಿತರು ಕೊಠಡಿಗೆ ಬಂದರು. ಅವರೆಲ್ಲರೂ ಮದ್ಯಪಾನ ಮಾಡಿದರು. ನಂತರ ಗೈಡ್ ನನ್ನ ಮೇಲೆ ಅತ್ಯಾಚಾರ ಎಸಗಿದ. ಬಳಿಕ ಆತನ ಗೆಳೆಯರು ಗ್ಯಾಂಗ್‍ರೇಪ್ ಮಾಡಿದರು ಎಂದು ಆರೋಪಿಸಿದ್ದರು.  ಈ ಘಟನೆ ನಂತರ ಭಯಭೀತಳಾದ ನಾನು ಅಮೆರಿಕಾಗೆ ತೆರಳಿದೆ. ನನ್ನ ಕುಟುಂಬಕ್ಕೆ ಈ ವಿಷಯ ತಿಳಿಸಲಿಲ್ಲ. ಹತಾಶಳಾದ ನಾನು ವಕೀಲೆಯಾದ ನನ್ನ ಗೆಳತಿಯನ್ನು ಸಂಪರ್ಕಿಸಿದೆ. ಆಕೆ ಭಾರತದ ಎನ್‍ಜಿಒ ಸಹಾಯ ಕೋರಿದಳು. ನಂತರ ಸಲಹೆ ಮೇರೆಗೆ ದೂರು ನೀಡುತ್ತಿದ್ದೇನೆ ಎಂದು ತಿಳಿಸಿದ್ದಾಳೆ.

ಪ್ರಕರಣದ ಸಂಬಂಧ ದೆಹಲಿ ಪೊಲೀಸರು ಅಮೆರಿಕ ರಾಜತಾಂತ್ರಿಕ ಕಚೇರಿಯನ್ನು ಸಂಪರ್ಕಿಸಿ ತನಿಖೆಯನ್ನು ಚುರುಕುಗೊಳಿಸಿದ್ದರು.  ರಾಜಧಾನಿ ನವದೆಹಲಿ ದೇಶದ ಗ್ಯಾಂಗ್‍ರೇಪ್ ಕ್ಯಾಪಿಟಲ್ ಆಗುತ್ತಿದೆಯೇ? ಇತ್ತೀಚೆಗೆ ಇಲ್ಲಿ ಮರುಕಳಿಸುತ್ತಿರುವ ವಿಕೃತಕಾಮ ದೌರ್ಜನ್ಯ ಪ್ರಕರಣಗಳನ್ನು ಮತ್ತು ಸಾಮೂಹಿಕ ಅತ್ಯಾಚಾರ ಪ್ರಕರಣಗಳನ್ನು ನೋಡಿದರೆ ಇದು ನಿಜವೆನಿಸುತ್ತದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin