ನೋ ಪಾರ್ಕಿಂಗ್‍ ನಲ್ಲಿ ವಾಹನ ನಿಲ್ಲಿಸಿದರೆ 1000 ರೂ. ಜುಲ್ಮಾನೆ, ಮಾಹಿತಿ ನೀಡಿದವರಿಗೆ 200 ರೂ. ಬಹುಮಾನ..!

ಈ ಸುದ್ದಿಯನ್ನು ಶೇರ್ ಮಾಡಿ

No-Parking-01

ನಾಗ್ಪುರ, ಡಿ.27-ಪಾರ್ಕಿಂಗ್‍ಗೆ ಸ್ಥಳಾವಕಾಶ ಇರುವ ಕುರಿತು ಪ್ರಮಾಣ ಪತ್ರ ನೀಡಿದರೆ ಮಾತ್ರ ಕಾರು ನೋಂದಣಿಗೆ ಅನುಮತಿ ನೀಡುವ ನೀತಿ ಜಾರಿಗೆ ಗಂಭೀರ ಚಿಂತನೆ ನಡೆಸುತ್ತಿರುವ ಕೇಂದ್ರ ಸರ್ಕಾರ, ಈಗ ನೋ ಪಾರ್ಕಿಂಗ್ ಜಾಗದಲ್ಲಿ ವಾಹನ ನಿಲ್ಲಿಸುವವರ ಮೇಲೆ ಗದಾಪ್ರಹಾರಕ್ಕೆ ಮುಂದಾಗಿದೆ  ವಾಹನ ನಿಲುಗಡೆ ಪ್ರದೇಶವಲ್ಲದ ಕಡೆ ವಾಹನ ನಿಲ್ಲಿಸಿದವರಿಗೆ ಈಗ ವಿಧಿಸಲಾಗುತ್ತಿರುವ 200 ರೂ.ಗಳ ದಂಡವನ್ನು 5 ಪಟ್ಟು (1,000 ರೂ.ಗಳು) ಹೆಚ್ಚಿಸಲು ನಿರ್ಧರಿಸಿದೆ. ಅಲ್ಲದೇ ನೋ ಪಾರ್ಕಿಂಗ್ ಸ್ಥಳದಲ್ಲಿ ವಾಹನ ನಿಲ್ಲಿಸಿರುವ ಬಗ್ಗೆ ಮಾಹಿತಿ ನೀಡಿದವರಿಗೆ 200 ರೂ.ಗಳ ಬಹುಮಾನ ನೀಡುವ ನೀತಿಯನ್ನೂ ಜಾರಿಗೊಳಿಸಲಿದೆ. ಈ ವಿಷಯವನ್ನು ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿಗಳ ಖಾತೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.

ನಾಗ್ಪುರ ಸ್ಮಾರ್ಟ್ ಸಿಟಿ ಯೋಜನೆ ಕುರಿತು ಜನಪ್ರತಿನಿಧಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಕಾರ್ಯಾಗಾರದಲ್ಲಿ ಅವರು ಈ ಹೊಸ ನೀತಿಯನ್ನು ಪ್ರಕಟಿಸಿದ್ದಾರೆ. ಅಕ್ರಮ ವಾಹನಗಳಿಂದ ರಸ್ತೆಗಳನ್ನು ಮುಕ್ತಗೊಳಿಸಲು ಬಲವಾದ ನೀತಿಯೊಂದರ ಅಗತ್ಯವಿದೆ. ಈ ನೀತಿ ವಾಸ್ತವ ರೂಪಕ್ಕೆ ಬಂದರೆ, ಇಂತಹ ಅನಧಿಕೃತ ಪಾರ್ಕಿಂಗ್‍ಗಳಿಗೆ ಕಡಿವಾಣ ಹಾಕಬಹುದು ಎಂದು ತಿಳಿಸಿದರು.
ನೋ ಪಾರ್ಕಿಂಗ್ ಜಾಗದಲ್ಲಿ ವಾಹನ ನಿಂತಿರುವ ಫೋಟೊ ತೆಗೆದು ಅದನ್ನು ಸಂಚಾರಿ ಜಾಲೀಸರು ಅಥವಾ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ನೀಡಿದರೆ 200 ರೂ.ಗಳ ಬಹುಮಾನ ನೀಡಲಾಗುವುದು. ಈ ನೀತಿ ಸದ್ಯದಲ್ಲೇ ಜಾರಿಗೆ ಬರಲಿದೆ ಎಂದು ಅವರು ಹೇಳಿದರು.

ಕಳೆದ ವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ನಗರಾಭಿವೃದ್ದಿ ಸಚಿವ ಎಂ. ವೆಂಕಯ್ಯ ನಾಯ್ಡು, ರಸ್ತೆಗಳಲ್ಲಿ ವಾಹನ ನಿಲುಗಡೆ ಮಾಡುವುದನ್ನು ತಪ್ಪಿಸಲು ಕಾರು ನಿಲುಗಡೆಗೆ ಸ್ಥಳಾವಕಾಶ ಹೊಂದಿರುವ ಪ್ರಮಾಣಪತ್ರ ನೀಡಿದರೆ ಮಾತ್ರ ಕಾರು ನೋಂದಣಿಗೆ ಅವಕಾಶ ನೀಡಲಾಗುವುದು. ಈ ಸಂಬಂಧ ಹೊಸ ನೀತಿಯನ್ನು ಗಡ್ಕರಿ ಜೊತೆ ಚರ್ಚಿಸಿ ಜಾರಿಗೊಳಿಸಲಾಗುವುದು ಎಂದು ತಿಳಿಸಿದ್ದರು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin