ಶುಚಿತ್ವದಿಂದ ಉತ್ತಮ ಆರೋಗ್ಯ : ಡಾ.ಜಯರಾಂ

ಈ ಸುದ್ದಿಯನ್ನು ಶೇರ್ ಮಾಡಿ

madhugiri

ಮಧುಗಿರಿ, ಡಿ.27- ದುಶ್ಚಟಗಳಿಂದ ದೂರವಿದ್ದು, ಸ್ವಚ್ಚ ಭಾರತ ಯೋಜನೆಯಂತೆ ವಾತಾವರಣವನ್ನು ಸ್ವಚ್ಚವಾಗಿಟ್ಟು ಕೊಂಡರೆ ಆರೋಗ್ಯ ದಿನವೂ ನಿಮ್ಮದಾಗಲಿದೆ ಎಂದು ಡಾ.ಜಯರಾಂ ತಿಳಿಸಿದರು.ತಾಲೂಕಿನ ಐ.ಡಿ.ಹಳ್ಳಿ ಹೋಬಳಿಯ ಹೂವಿನಹಳ್ಳಿ ಗ್ರಾಮದಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮ ದಿನಾಚರಣೆ ಪ್ರಯುಕ್ತ ತಾಲೂಕು ಬಿಜೆಪಿ ಯುವಮೋರ್ಚ ವತಿಯಿಂದ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಅವರು ಮಾತನಾಡಿದರು.

ಯುವಕರು ತಂಬಾಕು, ಗುಟ್ಕಾ , ಮದ್ಯಕ್ಕೆ ದಾಸರಾಗುತ್ತಿದ್ದು, ದೇಶದ ಯುವ ಶಕ್ತಿ ಕುಂದುತ್ತಿದೆ. ಕೇಲವ ಉತ್ತಮ ಆಹಾರವಾದ ಸೊಪ್ಪು, ತರಕಾರಿ, ದ್ವಿದಳ ಧಾನ್ಯ, ಹಾಗೂ ಹಾಲು ಮೊಟ್ಟೆಯ ಸೇವನೆಯಿಂದ ಮಾತ್ರ ಆರೋಗ್ಯ ವೃದ್ದಿಸಿಕೊಳ್ಳಬಹುದು ಎಂದರು.ಗ್ರಾಮೀಣ ಬದುಕಿನಲ್ಲಿರುವ ರೈತಾಪಿ ವರ್ಗ ಹಾಗೂ ಬಡ-ಕೂಲಿ ಮಾಡುವ ಜನತೆ ತೀವ್ರತರವಾದ ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಇದು ನಿಲ್ಲಿಸಬೇಕು ಎಂದರೆ ಇಂತಹ ಉಚಿತ ಆರೋಗ್ಯ ತಪಾಸಣ ಶಿಬಿರಗಳು ಹೆಚ್ಚೆಚ್ಚು ನಡೆಯಬೇಕು ಎಂದು ಅವರು ತಿಳಿಸಿದರು.

ಹೂವಿನಹಳ್ಳಿ ಗ್ರಾಮ ಹಾಗೂ ಸುತ್ತಮುತ್ತಲಿನ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಶಿಬಿರದಲ್ಲಿ ಭಾಗವಹಿಸಿ ಶಿಬಿರದ ಅನುಕೂಲ ಪಡೆದರು. ಎಸ್ಟಿ ಮೋರ್ಚ ರಾಜ್ಯ ಕಾರ್ಯದರ್ಶಿ ನರಸಿಂಹಮೂರ್ತಿ, ಜಿಲ್ಲಾ ಕಾರ್ಯದರ್ಶಿ ಉಪ್ಪಾರಹಳ್ಳಿ ರಾಜು, ತಾಲೂಕು ಪ್ರಧಾನ ಕಾರ್ಯದರ್ಶಿ ಸುನೀಲ್, ಯುವ ಮೋರ್ಚ ಅಧ್ಯಕ್ಷ ಮೋಹನ್ ರಾಜ್, ಕಾರ್ಯದರ್ಶಿ ನಾಗೇಂದ್ರ, ರೈತ ಮೋರ್ಚ ಅಧ್ಯಕ್ಷ ಸುರೇಶ್‍ರೆಡ್ಡಿ, ಕಾರ್ಯಕಾರಣಿ ಸದಸ್ಯರಾದ ಉಮೇಶ್, ರಂಗಪ್ಪ, ಗೋವಿಂದರಾಜು, ಸುರೇಶ್, ರವಿಕೀರ್ತಿ, ದಿಲೀಪ್, ರಾಜು, ವೆಂಕಟೇಶ್, ರಮೇಶ್, ರಾಮು, ಮೂರ್ತಿ, ಹಾಗೂ ನೂರಾರು ಕಾರ್ಯಕರ್ತರು ಶಿಬಿರದಲ್ಲಿ ಭಾಗವಹಿಸಿದ್ದ ಸಾರ್ವಜನಿಕರಿಗೆ ಭಾಗವಹಿಸಿದ್ದರು.

Eesanje News 24/7 ನ್ಯೂಸ್ ಆ್ಯಪ್ –  Click Here to Download

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin