ಹಳೆ ನೋಟುಗಳನ್ನು ಜಮೆ ಮಾಡಲು ಮತ್ತಷ್ಟು ಕಾಲಾವಕಾಶ ನೀಡಲು ಕೇಂದ್ರ ಚಿಂತನೆ..?

ಈ ಸುದ್ದಿಯನ್ನು ಶೇರ್ ಮಾಡಿ

Old-Note-Deposit

ನವದೆಹಲಿ, ಡಿ.27- ಹಳೆ ನೋಟುಗಳನ್ನು ಬ್ಯಾಂಕ್‍ಗಳಿಗೆ ಜಮೆ ಮಾಡಲು ಮತ್ತಷ್ಟು ಕಾಲಾವಕಾಶ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಡಿ.30ರ ವರೆಗೆ ಇದ್ದ ಗಡುವನ್ನು ವಿಸ್ತರಿಸಲು ಕೇಂದ್ರ ಸರ್ಕಾರ ನಿರ್ಧರಿಸುವ ಸಾಧ್ಯತೆಯಿದ್ದು, ತಮ್ಮ ಹಳೆ ನೋಟುಗಳನ್ನು ಜನ ಜಮೆ ಮಾಡಲು ಮತ್ತಷ್ಟು ಸಮಯಾವಕಾಶ ಸಿಗುವ ಸಾಧ್ಯತೆ ಇದೆ.
500, 1000ರೂ. ಮುಖಬೆಲೆಯ ನೋಟುಗಳನ್ನು ನಿಷೇಧ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿತ್ತು. ಅದರಂತೆ ಡಿ.30ರೊಳಗೆ ಎಲ್ಲರೂ ಹಳೆ ನೋಟುಗಳನ್ನು ಬ್ಯಾಂಕ್‍ಗೆ ಜಮಾ ಮಾಡಬೇಕಿತ್ತು. ಈಗ ಆ ಗಡುವನ್ನು ವಿಸ್ತರಿಸಲಾಗುವುದು ಎಂದು ತಿಳಿದುಬಂದಿದ್ದು, ಈ ರೀತಿ ಗಡುವು ವಿಸ್ತರಿಸಿದರೆ ಹಳೆ ನೋಟುಗಳನ್ನು ಜಮೆ ಮಾಡಲು ಜನಸಾಮಾನ್ಯರಿಗೆ ಮತ್ತಷ್ಟು ಅವಕಾಶ ಸಿಕ್ಕಿದಂತಾಗುತ್ತದೆ.

ನೋಟು ನಿಷೇಧದಿಂದ ಜನ ಹಿಂಡಿದ ಹಿಪ್ಪೆಯಂತಾಗಿದ್ದಾರೆ. ಕೇಂದ್ರ ಸರ್ಕಾರ ಹಾಗೂ ಆರ್‍ಬಿಐನ ದಿನಕ್ಕೊಂದು ನೀತಿ-ನಿಯಮಾವಳಿಗಳಿಂದ ರೋಸಿ ಹೋಗಿದ್ದಾರೆ. ಬ್ಯಾಂಕ್‍ಗಳಿಂದ ಹಣ ವಿತ್‍ಡ್ರಾ ಮಾಡಲು ಸಾಧ್ಯವಾಗುತ್ತಿಲ್ಲ. ಬ್ಯಾಂಕ್‍ಗಳಿಗೆ ಹಣ ಜಮಾವಣೆ ಮಾಡಲು ಕೂಡ ಸಾಧ್ಯವಾಗುತ್ತಿಲ್ಲ. ದಿನಕ್ಕೊಂದು ನಿಯಮಾವಳಿಗಳನ್ನು ರೂಪಿಸಲಾಗುತ್ತಿದೆ.  30ರ ಬಳಿಕ ಹಳೆ ನೋಟು ಇದ್ದರೆ ಭಾರೀ ದಂಡ ವಿಧಿಸಲಾಗುತ್ತದೆ. ಈ ಬಗ್ಗೆ ಸುಗ್ರೀವಾಜ್ಞೆ ಜಾರಿಗೆ ತರಲಾಗುತ್ತದೆ ಎಂಬ ಮಾತುಗಳು ಕೇಳಿಬಂದಿದ್ದವು. ಈ ನಡುವೆ ಹಳೆ ನೊಟು ಜಮಾವಣೆ ಮಾಡುವ ಗಡುವು ವಿಸ್ತರಿಸಲಾಗುವುದು ಎಂಬ ನಿರ್ಧಾರದ ಮಾತು ಕೇಳಿ ಬಂದಿದ್ದು, ಈ ರೀತಿಯಾದರೆ ಮತ್ತಷ್ಟು ಗೊಂದಲ ಉಂಟಾಗುವ ಸಾಧ್ಯತೆ ಇದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin