ಕೇಂದ್ರ ಸರ್ಕಾರವೇ ಅತ್ಯಂತ ಭ್ರಷ್ಟ ಸರ್ಕಾರ : ಸಿದ್ದರಾಮಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

siddu

ಬೆಂಗಳೂರು, ಡಿ.28-ಕೇಂದ್ರದ ನರೇಂದ್ರ ಮೋದಿ ಸರ್ಕಾರವೇ ಅತ್ಯಂತ ಭ್ರಷ್ಟ ಸರ್ಕಾರ ವಾಗಿದ್ದು ಭ್ರಷ್ಟಾಚಾರ ಪರವಾಗಿ ಬಿಜೆಪಿ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.  ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರ ತಡೆಯಲು ,ಕಪ್ಪು ಹಣ ನಿಯಂತ್ರಣಕ್ಕೆ ನೋಟ್ ಬ್ಯಾನ್ ಮಾಡ ಲಾಗಿದೆ ಎಂದು ಹೇಳಿಕೊಳ್ಳಲಾಗುತ್ತಿದೆ.   ಆದರೆ ಸಹರಾ ಗ್ರೂಪ್‍ನಿಂದ ಮೋದಿಯವರಿಗೆ ಹಣ ಹೋಗಿರುವ ಬಗ್ಗೆ ದಾಖಲಾತಿಗಳಿವೆ. ಇದನ್ನು ರಾಹುಲ್‍ಗಾಂಯವರು ಬಹಿರಂಗಪಡಿಸಿದ್ದಾರೆ. ಇದೂ ಸೇರಿದಂತೆ ಹಲವಾರು ಹಗರಣಗಳಲ್ಲಿ ಮೋದಿ ಭಾಗಿಯಾಗಿದ್ದಾರೆ ಎಂದು ಹರಿಹಾಯ್ದರು.

ಬಿಜೆಪಿ ಅಕಾರಕ್ಕೆ ಬಂದರೆ ಬಚ್ಚಿಟ್ಟ ಕಪ್ಪು ಹಣ ತಂದು ಪ್ರತಿಯೊಬ್ಬರಿಗೂ 15 ಲಕ್ಷ ನೀಡುವುದಾಗಿ ಭರವಸೆ ನೀಡಿದ್ದರು. ಅದ್ಯಾವುದೂ ಈಡೇರಿಲ್ಲ. ಅದು ಯಾವುದೇ ಸಾಧನೆಯನ್ನೂ ಮಾಡಿಲ್ಲ ಎಂದು ಟೀಕಿಸಿದರು.  ನೋಟ್ ಬ್ಯಾನ್‍ನಿಂದಾಗಿ 140 ಜನ ದೇಶಾದ್ಯಂತ ಸಾವನ್ನಪ್ಪಿದ್ದಾರೆ. ಹಣವಿದ್ದವರು ಯಾರೂ ಇದರಲ್ಲಿ ಸತ್ತಿಲ್ಲ. ಆದರೆ ಸಣ್ಣ-ಪುಟ್ಟ ವ್ಯಾಪಾರಿಗಳು ಹಣಕ್ಕಾಗಿ ಸಾಲುಗಟ್ಟಿ ನಿಂತವರು ಸತ್ತಿದ್ದಾರೆ. ಬಿಜೆಪಿ ಬಡವರ ಪರವಾಗಿಲ್ಲ. ಬಂಡವಾಳ ಶಾಹಿಗಳ ಪರವಾಗಿದೆ. ಬಡವರ ಪರ ಮಾತನಾಡುವ ನೈತಿಕತೆಯು ಅವರಿಗಿಲ್ಲ. ನೋಟ್ ಬ್ಯಾನ್‍ನಿಂದಾಗಿ 150 ಕೋಟಿಜನರಿಗೆ ತೊಂದರೆಯಾಗಿದೆ ಎಂದು ಕಿಡಿಕಾರಿದರು.

ಎದೆಯುಬ್ಬಿಸಿ ಹೋಗುತ್ತೇವೆ ಚುನಾವಣೆಗೆ:

ಆದರೆ ಕಾಂಗ್ರೆಸ್ ಭ್ರಷ್ಟಾಚಾರ ಮುಕ್ತ ಸರ್ಕಾರ ನಡೆಸುತ್ತಿದ್ದು, ಕಾಂಗ್ರೆಸ್ ಕಾರ್ಯಕರ್ತರು ಎದೆಯುಬ್ಬಿಸಿ ಮುಂದಿನ ಚುನಾವಣೆಗೆ ಹೋಗುವಂತೆ ನಮ್ಮ ಸರ್ಕಾರ ನಡೆದುಕೊಂಡಿದೆ. ಮುಂದಿನ ಚುನಾವಣೆಯನ್ನು ಗೆದ್ದು ಆಡಳಿತ ನಡೆಸಲಿದ್ದೇವೆ ಎಂದು ವಿಶ್ವಾಸವ್ಯಕ್ತಪಡಿಸಿದರು.  ಬಾಕಿ ಉಳಿದಿರುವ ಅವಯಲ್ಲಿ ನಾಲ್ಕು ತಿಂಗಳು ಬಿಟ್ಟರೂ ಒಂದು ವರ್ಷ ಲೆಕ್ಕಕ್ಕೆ ಸಿಗುತ್ತದೆ. ನಮ್ಮ ಕೆಲಸಗಳು ಗೋಚರಿಸುತ್ತವೆ ಎಂದು ನುಡಿದರು. ಜೆಡಿಎಸ್ -120, ಬಿಜೆಪಿ 150 ಸ್ಥಾನ ಎಂದು ಹಗಲು ಗನಸು ಕಾಣುತ್ತಿವೆ. ಆದರೆ ಕಾಂಗ್ರೆಸ್ ಅಕಾರಕ್ಕೆ ಬರುವುದು ನಿಶ್ಚಿತ. ಬಿಜೆಪಿಗೆ ಅಲ್ಪಸಂಖ್ಯಾತರ ಬಗ್ಗೆ ಕಾಳಜಿ ಇಲ್ಲ. ಈಶ್ವರಪ್ಪ ಅವರಿಗೆ ತಲೆ ಇಲ್ಲ. ಅಲ್ಪಸಂಖ್ಯಾತರಿಲ್ಲದೆ ಹಿಂದ ಮಾಡಲು ಹೊರಟಿದ್ದಾರೆ ಎಂದು ಟೀಕೆ ಮಾಡಿದರು.

132 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಕಾಂಗ್ರೆಸ್ ಪಕ್ಷ 1885ರ ಡಿಸೆಂಬರ್ 28ರಂದು ಜನ್ಮತಾಳಿತು. ಅದೊಂದು ಸುವರ್ಣಾಕ್ಷರಗಳಲ್ಲಿ ಬರೆದಿಡಬಹುದಾದಂತಹ ದಿನ. 1857ರಲ್ಲಿ ನಡೆದ ಸಿಪಾಯಿ ದಂಗೆ ನಂತರ ಬ್ರಿಟಿಷರ ದಬ್ಬಾಳಿಕೆ ಎದುರಿಸಿ ಜನರ ನೆರವಿಗೆ ಧಾವಿಸಿದ ಪಕ್ಷ ನಮ್ಮದು. ಅಕಾರಕ್ಕಾಗಿ ಪಕ್ಷವಲ್ಲ, ಭಾರತೀಯರ ದಬ್ಬಾಳಿಕೆ ಹತ್ತಿಕ್ಕಲು ಸ್ವಾತಂತ್ರ್ಯದ ಹೋರಾಟವಾಗಿ ಮಾರ್ಪಾಡಾಯಿತು. ಸಾಕಷ್ಟು ಮಂದಿ ಹಿರಿಯರು ಪ್ರಾಣ ತ್ಯಾಗ ಮಾಡಿದ್ದಾರೆ ಎಂದು ಸ್ಮರಿಸಿದರು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin