ನಾಡಿಗೆ ನುಗ್ಗಿದ ಕಾಡುಕೋಣ : ಬಲೆಗೆ ಬೀಳಿಸಲು ಹರಸಾಹಸ

ಈ ಸುದ್ದಿಯನ್ನು ಶೇರ್ ಮಾಡಿ

1

ರಾಮದುರ್ಗ,ಡಿ.28- ಕಾಡಿನ ಪ್ರಾಣಿಕಾಡಿನಲ್ಲಿದ್ದರೆಚಂದ, ನಾಡಿನಜನ ನಾಡಿನಲ್ಲಿದ್ದರೆ ಚಂದ ಎಂಬ ನಾನುಡಿಯು ಸುಳ್ಳಾಗಲಾರದು. ಸಮೀಪದ ಚಿಂಚಕಂಡಿ ಗ್ರಾಮದಲ್ಲಿ ಕಳೆದ 3-4 ದಿನಗಳಿಂದ ಕಾಡುಕೋಣ ಬಂದುಇಲ್ಲಿನ ಜಮೀನುಗಳಲ್ಲಿ ನುಗ್ಗಿ ರೈತರನ್ನು ನಿದ್ದೆಗೇಡು ಮಾಡಿದೆ.ಅಲ್ಲದೆ ಪಕ್ಕದ ಗ್ರಾಮಗಳಾದ ಘಟಕನೂರ ಹಾಗೂ ಕೊಳಚಿ ಗ್ರಾಮದ ಜಮೀನಿನಲ್ಲಿರುವ ಕಬ್ಬಿನ ಬೆಳೆಯಲ್ಲಿ ಓಡಾಡಿ ಬೆಳೆ ನಾಶ ಮಾಡಿದೆ.ಇದು ಜಮೀನಿನಲ್ಲಿ ಅಡಗಿ ಕುಳಿತಿದ್ದರಿಂದ ರೈತರು ಹಾಗೂ ಸಾರ್ವಜನೀಕರು ಭಯಭೀತರಾಗಿದ್ದಾರೆ.

ಈ ಸುದ್ದಿ ತಿಳಿದ ತಕ್ಷಣ ಅರಣ್ಯಸಿಬ್ಬಂದಿ ಅಲ್ಲಿನ ಜಮೀನುಗಳಿಗೆ ಆಗಮಿಸಿ ಕಾಡುಕೋಣ ಹಿಡಿಯಲು ಬಲೆಹಾಕಿ ಹರಸಾಹಸ ಪಟ್ಟರು. ಆದರೆ, ಯಾವುದೇ ಪ್ರಯೋಜನವಾಗಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.ಮದ್ದಿನ ಚುಚ್ಚುಮದ್ದನ್ನು ನೀಡಲಿಕ್ಕೆ ಪಶು ವೈಧ್ಯರನ್ನು ಕರೆಸಿ  ಗನ್‍ಮೂಲಕ ಚುಚ್ಚುಮದ್ದನ್ನು ಹಾಕಿ ಆ ಕಾಡುಕೋಣವನ್ನು ಹಿಡಿದುಅರಣ್ಯಕ್ಕೆ ಸಾಗಿಸಲಾಗುತ್ತಿದೆ ಎಂದು ಉಪವಲಯಅರಣ್ಯಅಧಿಕಾರಿಯು.ಬಿ.ಹಾದಿಮನಿ ತಿಳಿಸಿದರು.ಚಿಂಚಕಂಡಿಗ್ರಾಮದದುರಗಪ್ಪ ಬೈ.

ಮಾದರಅವರಕಬ್ಬ್ಬಿನಗದ್ದೆಯಲ್ಲಿಕಾಡುಕೋಣತನ್ನಅಟ್ಟಹಾಸಮುಂದುವರಿಸಿ ಬೆಳೆಹಾಳುಮಾಡಿದೆ. ಇದರಿಂದ 4-5 ಟನ್‍ಕಬ್ಬಿನ ಬೆಳೆ ಹಾಳಾಗಿದೆ ಎಂದುದುರಗಪ್ಪಅವರಸೋದರಈರಣ್ಣ ಮಾದರತಮ್ಮ ಅಳಲನ್ನು ಪತ್ರಕರ್ತರ ಮುಂದೆತೋಡಿಕೊಂಡರು.ಇದೇ ಸಂದರ್ಭದಲ್ಲಿಅರಣ್ಯ ಇಲಾಖೆಅಧಿಕಾರಿಗಳಾದ ಆರ್.ಎಸ್.ಹೊಸಮನಿ, ಎಚ್.ಬಿ.ಪಟ್ಟೇದ, ಡಿ.ಆರ್.ದ್ಯಾಮನ್ನಿ, ಬಿ.ಎಮ್. ಕುಂಬಾರ, ಜಿ.ಎಸ್.ಕಲ್ಯಾಣಿ, ಜೆ.ಎಮ್.ತೊರಗಲ್ಲ ಹಾಗೂ ಅರಣ್ಯ ವಿಕ್ಷಕ ಪಿ.ಆರ್.ಮಾಳಿ ರೈತರಾದ ಭರಮಪ್ಪ ಶೇಶಾದ್ರಿ, ರಮೇಶಜಾಲಪ್ಪನವರ ಮತ್ತತಿತರರುಇದ್ದರು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin