ಹಳಿ ತಪ್ಪಿದ ಅಜ್ಮೀರ್-ಸಿಲ್‍ದ್ಹಾ ಎಕ್ಸ್ಪ್ರೆಸ್ ರೈಲಿನ 15 ಬೋಗಿಗಳು : ಇಬ್ಬರ ಸಾವು, 50 ಮಂದಿಗೆ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

Derail-01

ಕಾನ್ಪುರ, ಡಿ.28-ಅಜ್ಮೀರ್-ಸಿಲ್‍ದ್ಹಾ ಎಕ್ಸ್‍ಪ್ರೆಸ್ ರೈಲಿನ 15 ಬೋಗಿಗಳು ಹಳಿ ತಪ್ಪಿ ಇಬ್ಬರು ಮೃತಪಟ್ಟು, 50ಕ್ಕೂ ಹೆಚ್ದು ಪ್ರಯಾಣಿಕರು ಗಾಯಗೊಂಡಿರುವ ದುರ್ಘಟನೆ ಇಂದು ಮುಂಜಾನೆ ಕಾನ್ಪುರ್ ದೆಹಟ್ ಜಿಲ್ಲೆಯ ರೂರಾ ಬಳಿ ಸಂಭವಿಸಿದೆ. ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗಬಹುದೆಂಬ ಆತಂಕ ವ್ಯಕ್ತವಾಗಿದೆ.
ಕಾನ್ಪುರದಿಂದ 70 ಕಿ.ಮೀ. ದೂರದಲ್ಲಿರುವ ರೂರಾ ರೈಲ್ವೆ ನಿಲ್ದಾಣದ ಬಳಿ ಬೆಳಗ್ಗೆ 5.45ರ ಸುಮಾರಿನಲ್ಲಿ ಬತ್ತಿಹೋದ ಕಾಲುವೆಯೊಂದರ ಮೇಲಿನ ಸೇತುವೆಯನ್ನು ದಾಟಿದ ನಂತರ ಎಕ್ಸ್‍ಪ್ರೆಸ್‍ನ 15 ಬೋಗಿಗಳು ಹಳಿ ತಪ್ಪಿದವು ಎಂದು ರೈಲ್ವೆ ಸಾರ್ವಜನಿಕ ಸಂಪರ್ಕಾಧಿಕಾರಿ ಅಮಿತ್ ಮಾಲ್ವಿಯಾ ತಿಳಿಸಿದ್ದಾರೆ.

Derail-02

ಅಜ್ಮೀರ್-ಸಿಲ್‍ದ್ಹಾ ಎಕ್ಸ್‍ಪ್ರೆಸ್-12987 ರೈಲಿನ 13 ಸ್ಲೀಪರ್ ಮತ್ತು 2 ಸಾಮಾನ್ಯ ಬೋಗಿಗಳು ಉರುಳಿ ಬಿದ್ದು ಇಬ್ಬರು ಮೃತಪಟ್ಟು, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ಧಾರೆ ಎಂದು ಪೊಲೀಸ್ ಮಹಾ ನಿರೀಕ್ಷಕ (ಕಾನ್ಪುರ ವಲಯ) ಝಾಕಿ ಅಹಮದ್ ಹೇಳಿದ್ದಾರೆ.  ರೈಲು ಹಳಿ ತಪ್ಪಿದ ಸುದ್ದಿ ತಿಳಿದ ತಕ್ಷಣ ಕಾನ್ಪುರ ಮತ್ತು ತುಂಡ್ಲಾದಿಂದ 14 ಆಂಬ್ಯುಲೆನ್ಸ್ ವಾಹನಗಳು ಮತ್ತು ಪರಿಹಾರ ತಂಡಗಳನ್ನು ಸ್ಥಳಕ್ಕೆ ರವಾನಿಸಲಾಗಿದೆ. ತುರ್ತುಪರಿಹಾರ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಗಾಯಾಳುಗಳನ್ನು ಹತ್ತಿರ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

Derail-03

ರೈಲು ಹಳಿ ತಪ್ಪಿರುವುದರಿಂದ ಈ ಮಾರ್ಗದ ಇತರ ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ ಎಂದು ರೈಲ್ವೆ ವಕ್ತಾರ ಅನಿಲ್ ಸಕ್ಸೆನಾ ತಿಳಿಸಿದ್ದಾರೆ.

Derail-04

ರೈಲ್ವೆ ಸಹಾಯವಾಣಿ :

ಕಾನ್ಪುರ-0512=232305, 2323016, 2323018 ಹಾಗೂ ಅಲಹಾಬಾದ್-0532-2408149, 2408128.

ತನಿಖೆಗೆ ಆದೇಶ :

ದುರಂತದ ಬಗ್ಗೆ ತನಿಖೆ ನಡೆಸಲು ಆದೇಶಿಸಲಾಗಿದೆ ಎಂದು ರೈಲ್ವೆ ಸಚಿವ ಸುರೇಶ್ ಪ್ರಭು ಆದೇಶಿಸಿದ್ದಾರೆ.
ಪರಿಹಾರ ಮೊತ್ತ ದುಪ್ಪಟ್ಟು : ರೈಲು ಅಪಘಾತದಲ್ಲಿ ಮೃತಪಟ್ಟ ದುರ್ದೈವಿಗಳ ಕುಟುಂಬಕ್ಕೆ ನೀಡಲಾಗುವ ಪರಿಹಾರದ ಮೊತ್ತವನ್ನು ಈಗಿರುವ 4 ಲಕ್ಷ ರೂ.ಗಳಿಂದ 8 ಲಕ್ಷ ರೂ.ಗಳಿಗೆ ಏರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಜನವರಿಯಿಂದ ಈ ಪರಿಷ್ಕøತ ನಿಯಮ ಜಾರಿಗೆ ಬರಲಿದೆ.

ಮುಖ್ಯಾಂಶಗಳು:
5.45ರ ವೇಳೆಗೆ ದುರಂತ
ಅಜ್ಮೇರ್-ಸಿಲ್‍ದ್ಹಾ ಎಕ್ಸ್‍ಪ್ರೆಸ್ ರೈಲು
ಹಳಿ ತಪ್ಪಿದ 15 ಬೋಗಿಗಳು
2 ಎಸಿ, 13 ಸ್ಲೀಪರ್ ಬೋಗಿ
ರೂರಾ ರೈಲ್ವೆ ನಿಲ್ದಾಣದ ಬಳಿ ಘಟನೆ
ಸಹಾಯವಾಣಿ : ಕಾನ್ಪುರ-0512=232305, 2323016, 2323018
ಅಲಹಾಬಾದ್-0532-2408149, 2408128
ಭರದಿಂದ ಸಾಗಿದ ರಕ್ಷಣಾ ಕಾರ್ಯಾಚರಣೆ
ತನಿಖೆಗೆ ರೈಲ್ವೆ ಸಚಿವ ಸುರೇಶ್‍ಪ್ರಭು ಆದೇಶ

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin