ಹೈದರಾಬಾದ್’ನಲ್ಲಿ ಭಾರಿ ದರೋಡೆ : ಸಿಬಿಐ ಅಧಿಕಾರಿಗಳ ಸೋಗಿನಲ್ಲಿ 45 ಕೆ.ಜಿ ಚಿನ್ನ ಲೂಟಿ..!

ಈ ಸುದ್ದಿಯನ್ನು ಶೇರ್ ಮಾಡಿ

Robbery

ಹೈದರಾಬಾದ್, ಡಿ.28: ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ನಾಲ್ವರು ಅಪರಿಚಿತರು ಹೈದರಾಬಾದ್ ನ ಮುತ್ತೂಟ್ ಫೈನಾನ್ಸ್ ನಲ್ಲಿ 45 ಕೆ.ಜಿ. ಚಿನ್ನವನ್ನು ದೋಚಿದ್ದಾರೆ. ಬೆಳಗ್ಗೆ 9.30ರ ವೇಳೆಗೆ ಕೆಂಪು ಬಣ್ಣದ ಸ್ಕಾರ್ಪಿಯೋದಲ್ಲಿ ರಾಮುಚಂದ್ರಾಪುರಂಅನ ಕಚೇರಿಗೆ ಕೈಯಲ್ಲಿ ಗ್ಯಾನ್ ಹಿಡಿದು ಸಿನಿಮಾ ಸ್ಟೈಲಲ್ಲಿ CBI, RBI ಅಧಿಕಾರಿಗಳಂತೆ ಒಳನುಗ್ಗಿದ ದರೋಡೆಕೋರರು ೧೨ ಕೋಟಿ ರೂ. ಬೆಲೆ ಬಾಳುವ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಪೊಲೀಸರು ನೀಡಿದ ಮಾಹಿತಿ ಪ್ರಕಾರ, ನಾಲ್ವರು ಮುತ್ತೂಟ್ ಫೈನಾನ್ಸ್ ಶಾಖೆ ಪ್ರವೇಶಿಸಿ, ಸಿಬ್ಬಂದಿ ಹತ್ತಿರ ತಾವು ಸಿಬಿಐ ಅಧಿಕಾರಿಗಳು. ದಾಖಲೆಗಳು ಮತ್ತು ಲಾಕರ್ ನಲ್ಲಿರುವ ಚಿನ್ನವನ್ನು ಪರಿಶೀಲಿಸಬೇಕು ಎಂದು ಹೇಳಿಕೊಂಡಿದ್ದಾರೆ. ಆಗ ಅಲ್ಲಿನ ಸಿಬ್ಬಂದಿ, ನಮ್ಮ ಹಿರಿಯ ಅಧಿಕಾರಿಗಳ ಅನುಮತಿ ಇಲ್ಲದೆ ಲಾಕರ್ ತೋರಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ಬಳಿಕ ಗನ್ ತೆಗೆದು ನೌಕರರನ್ನು ಬೆದರಿಸಿ ಲಾಕರ್ ನಲ್ಲಿದ್ದ ಚಿನ್ನವನ್ನೆಲ್ಲ ಲೂಟಿ ಮಾಡಿ ಪರಾರಿಯಾಗಿದ್ದಾರೆ. ಮುತ್ತೂಟ್ ಫೈನಾನ್ಸ್ ನ ಇದೇ ಶಾಖೆಯಲ್ಲಿ ಈ ಹಿಂದೆ ಕೂಡ ಇಂಥದ್ದೇ ಘಟನೆ ನಡೆದಿದ್ದು, ಆ ಪ್ರಕರಣವನ್ನು ಭೇದಿಸುವಲ್ಲಿ ಇದುವರೆಗೂ ಪೊಲೀಸರು ಸಫಲರಾಗಿಲ್ಲ.  ಸಿಸಿಟಿವಿಯ ಹಾರ್ಡ್ ಡಿಸ್ಕ್ ಅನ್ನು ಕೂಡ ಅಪರಿಚಿತ ದುಷ್ಕರ್ಮಿಗಳು ಹೊತ್ತೊಯ್ದು, ಕಾರಿನಲ್ಲಿ ಪರಾರಿಯಾಗಿದ್ದಾರೆ. ಅಪರಾಧಿಗಳ ಪತ್ತೆಗಾಗಿ ಸೈಬರಾಬಾದ್ ಪೊಲೀಸ್ ಕಮಿಷನರ್ ಸಂದೀಪ್ ಶಾಂಡಿಲ್ಯ ಐದು ತಂಡಗಳನ್ನು ರಚಿಸಿದ್ದಾರೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin