ಚೀನಾ : ಕಮ್ಯೂನಿಸ್ಟ್ ಪಕ್ಷದ ಕಚೇರಿ ಮೇಲೆ ಬಾಂಬ್ ದಾಳಿ : ಪೊಲೀಸರ ಗುಂಡೇಟಿಗೆ 4 ಉಗ್ರರು ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

China-01

ಬೀಜಿಂಗ್, ಡಿ.29-ಆಡಳಿತಾರೂಢ ಕಮ್ಯೂನಿಸ್ಟ್ ಪಾರ್ಟಿ ಆಫ್ ಚೀನಾದ ಕಚೇರಿ ಮೇಲೆ ದಾಳಿ ನಡೆಸಿದ ನಾಲ್ವರು ಉಗ್ರರನ್ನು ಪೊಲೀಸರು ಗುಂಡಿಟ್ಟು ಕೊಂದಿರುವ ಘಟನೆ ಕ್ಸಿನ್‍ಜಿಯಾಂಗ್ ಪ್ರಾಂತ್ಯದಲ್ಲಿ ನಡೆದಿದೆ.   ಕಾರಾಕಾಕ್ಸ್ ಕೌಂಟಿಯಲ್ಲಿನ ಸ್ಥಳೀಯ ಕಮ್ಯೂನಿಸ್ಟ್ ಪಕ್ಷದ ಕಚೇರಿ ಕಟ್ಟಡಕ್ಕೆ ಕಾರನ್ನು ಅಪ್ಪಳಿಸಿದ ಉಗ್ರರು ನಂತರ ಬಾಂಬ್ ಸ್ಫೋಟಿಸಿದರು. ಈ ದಾಳಿಯಲ್ಲಿ ಒಬ್ಬ ಮೃತಪಟ್ಟು, ಇತರ ಮೂವರು ಗಾಯಗೊಂಡರು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಗುಂಡು ಹಾರಿಸಿ ನಾಲ್ವರು ಉಗ್ರರನ್ನು ಹೊಡೆದುರುಳಿಸಿದರು ಎಂದು ಕ್ಸಿನ್‍ಜಿಯಾಂಗ್ ಸರ್ಕಾರಿ ಸುದ್ದಿ ಜಾಲತಾಣ ಹೇಳಿದೆ.

ಚೀನಾದ ವಿವಿಧೆಡೆ ಇತ್ತೀಚೆಗೆ ಉಗ್ರಗಾಮಿಗಳ ಉಪಟಳ ಹೆಚ್ಚಾಗಿದ್ದು, ಸರ್ಕಾರಿ ಕೇಂದ್ರಗಳನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸುತ್ತಿರುವುದು ಆಡಳಿತರೂಢ ಕಮ್ಯುನಿಷ್ಟ್ ಪಕ್ಷ ಮತ್ತು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin