ತಮಿಳುನಾಡಿನಲ್ಲೀಗ ‘ಚಿನ್ನಮ’ನ ದರ್ಬಾರ್ : ಎಐಎಡಿಎಂಕೆ ಚುಕ್ಕಾಣಿ ಶಶಿಕಲಾ ಕೈಗೆ

ಈ ಸುದ್ದಿಯನ್ನು ಶೇರ್ ಮಾಡಿ

Sasikala-Natarajan

ಚೆನ್ನೈ, ಡಿ.29-ತಮಿಳುನಾಡಿನ ಅಮ್ಮ ಜಯಲಲಿತಾ ಅವರ ಪರಮಾಪ್ತೆ ಚಿನ್ನಮ್ಮ ಖ್ಯಾತಿಯ ಶಶಿಕಲಾ ನಟರಾಜನ್ ಅವರನ್ನು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲು ಪಕ್ಷವು ಒಕ್ಕೊರಲ ನಿರ್ಣಯ ಕೈಗೊಂಡಿದೆ. ಇದೊಂದಿಗೆ ಜಯಲಲಿತಾರ ಅಧಿಕೃತ ಉತ್ತರಾಧಿಕಾರಿಯಾಗಲು ತಮ್ಮ ಒಂದೊಂದೇ ಹಿಡಿತವನ್ನು ಭದ್ರಗೊಳಿಸಿಲು ಶಶಿಕಲಾ ಅವರಿಗೆ ಹಾದಿ ಸುಗಮವಾದಂತಾಗಿದೆ.   ಚೆನ್ನೈನ ಶ್ರೀವಾರಿ ವೆಂಕಟಾಚಲಪತಿ ಕಲ್ಯಾಣಮಂಟಪಂನಲ್ಲಿ ಇಂದು ನಡೆದ ಆಡಳಿತರೂಢ ಎಐಎಡಿಎಂಕೆ ಜನರಲ್ ಕೌನ್ಸಿಲ್ ಸಭೆ ನಡೆಯಿತು. ಸಭೆ ಆರಂಭವಾಗುತ್ತಿದ್ದಂತೆ ಪುರುಚ್ಚಿ ತಲೈವಿ ಜಯಲಲಿತಾರಿಗೆ ಸಭೆಯಲ್ಲಿ ಶ್ರದ್ದಾಂಜಲಿ ಸಲ್ಲಿಸುವ ನಿರ್ಣಯ ಅಂಗೀಕರಿಸಿ ಅವರ ಗೌರವಾರ್ಥ ಮೌನ ಆಚರಿಸಲಾಯಿತು. ನಂತರ ನಡೆದ ಕಲಾಪದಲ್ಲಿ ಶಶಿಕಲಾ ನಟರಾಜನ್ ಅವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಯನ್ನಾಗಿ ಆಯ್ಕೆಗೊಳಿಸುವ ಗೊತ್ತುವಳಿಯನ್ನು ಅಂಗೀಕರಿಸಲಾಯಿತು.

ಶಶಿಕಲಾ ಗೈರು ಹಾಜರಾಗಿದ್ದ ಸಭೆಯಲ್ಲಿ ಪಕ್ಷದ ಕೋಶಾಧ್ಯಕ್ಷರೂ ಆಗಿರುವ ಮುಖ್ಯಮಂತ್ರಿ ಓ.ಪನ್ನೀರ್‍ಸೆಲ್ವಂ ಮತ್ತು ಪಕ್ಷದ ಹಿರಿಯ ನಾಯಕ ಇ. ಮಧುಸೂದನನ್ ಸೇರದಂತೆ ಹಿರಿಯ ಸಚಿವರು, ಪಕ್ಷದ ಮುಖಂಡರು ಹಾಜರಿದ್ದರು.  ಶಶಿಕಲಾ ನಟರಾಜನ್ ಅವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡುವ ನಿರ್ಣಯವನ್ನು ಸಭೆಯಲ್ಲಿ ಮಂಡಿಸಲಾಯಿತು. ಈ ಗೊತ್ತುವಳಿಗೆ ಸಭೆ ಸರ್ವಸಮ್ಮತ ಬೆಂಬಲ ಸೂಚಿಸಿತು.  ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪನ್ನೀರ್ ಸೆಲ್ವಂ ಜಯಲಲಿತಾರನ್ನು ನೆನೆದು ಎರಡು ಬಾರಿ ಕಣ್ಣೀರಿಟ್ಟರು. ಇಂದು ಹಂತದಲ್ಲಿ ಅಳು ತಡೆಯಲಾದರೆ ಭಾಷಣವನ್ನು ಕೆಲವು ನಿಮಿಷಗಳ ಕಾಲ ನಿಲ್ಲಿಸಿದರು. ನಂತರ ದು:ಖತಪ್ತರಾಗಿಯೇ ಅವರು ಮಾತು ಮುಂದುವರಿಸಿದರು.

ಈ ಸಭೆಯಲ್ಲಿ ಒಟ್ಟು 14 ಮಹತ್ವದ ನಿರ್ಣಯಗಳನ್ನು ಅಂಗೀಕರಿಸಲಾಯಿತು. ಜಯಲಲಿತಾ ನಿಧನರಾದ ದಿನವನ್ನು ರಾಷ್ಟ್ರೀಯ ರೈತ ದಿನವನ್ನಾಗಿ ಘೋಷಿಸಬೇಕು. ಜಯಾ ಅವರಿಗೆ ಮ್ಯಾಗ್ಸಸ್ಸೆ ಪ್ರಶಸ್ತಿ ನೀಡಬೇಕು. ಪುರುಚ್ಚಿ ತಲೈವಿ ಅವರಿಗೆ ಭಾರತ ರತ್ನ ಮತ್ತು ನೊಬೆಲ್ ಶಾಂತಿ ಪ್ರಶಸ್ತಿ ನೀಡಬೇಕು ಎಂಬಿತ್ಯಾದಿ ನಿರ್ಣಯಗಳು ಇದರಲ್ಲಿವೆ.  ಜಯಲಲಿತಾ ನಿಧನಾನಂತರ ಪಕ್ಷದ ನಾಯಕತ್ವ ವಹಿಸಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದ ಶಶಿಕಲಾ ನಟರಾಜನ್ ಮತ್ತು ಉಚ್ಚಾಟಿತ ಸಂಸದೆ ಶಶಿಕಲಾ ಪುಷ್ಟಾ ನಡುವಣ ಜಟಾಪಟಿ ತೀವ್ರಗೊಂಡಿದ್ದು, ನಿನ್ನೆ ಪುಷ್ಪಾ ಅವರ ಪತೆ ಲಿಂಗೇಶ್ವರ ತಿಳಗನ್ ಮೇಲೆ ಹಲ್ಲೆ ನಡೆಸಲಾಗಿತ್ತು. ಈ ಹಂತದಲ್ಲಿ ಪಕ್ಷದ ಎರಡು ಬಣಗಳ ನಡುವೆ ಘರ್ಷಣೆ ನಡೆದು ಕೆಲವು ಗಾಯಗೊಂಡಿದ್ದರು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

 

Facebook Comments

Sri Raghav

Admin