ಮಂತ್ರಾಲಯ ರಾಯರ ಹುಂಡಿಗೆ ಹರಿದು ಬಂತು ಕಪ್ಪು ಹಣ

ಈ ಸುದ್ದಿಯನ್ನು ಶೇರ್ ಮಾಡಿ

Mantralayam-01

ರಾಯಚೂರು, ಡಿ.29- ಮಂತ್ರಾಲಯ ಗುರುರಾಯರ ಹುಂಡಿಗೆ ಭಾರೀ ಪ್ರಮಾಣದ ಕಪ್ಪು ಹಣ ಹರಿದು ಬಂದಿದೆ. ರಾಘವೇಂದ್ರ ಶ್ರೀಗಳ ಮಂತ್ರಾಲಯ ಮಠಕ್ಕೆ ಹಳೆಯ 500, 1000ರೂ. ಮುಖಬೆಲೆಯ ನೋಟುಗಳು ಭಾರೀ ಪ್ರಮಾಣದಲ್ಲಿ ಬಂದು ಬಿದ್ದಿವೆ. ಮಂಜಾಲಮ್ಮನ ಹುಂಡಿಗೆ 15 ಲಕ್ಷಕ್ಕೂ ಹೆಚ್ಚು ಹಣ ಹರಿದುಬಂದಿದೆ. ಬಹುತೇಕ ಭಕ್ತರು 1000 ಮುಖಬೆಲೆಯ ನೋಟುಗಳನ್ನು ಹುಂಡಿಗೆ ಹಾಕಿದ್ದಾರೆ.  ನೋಟು ನಿಷೇಧದ ನಂತರ ಭಕ್ತರು ಡಿಸೆಂಬರ್‍ನಲ್ಲೇ 1 ಕೋಟಿ 12 ಲಕ್ಷ ರೂ.ಗಳನ್ನು ಕಾಣಿಕೆ ಸಲ್ಲಿಸಿದ್ದಾರೆಂದು ಮಠದ ಮೂಲಗಳಿಂದ ತಿಳಿದುಬಂದಿದೆ.
ಇಷ್ಟು ಪ್ರಮಾಣದ ಕಾಣಿಕೆ ಈ ಹಿಂದೆ ಬಂದಿರಲಿಲ್ಲ. ನೋಟು ನಿಷೇಧದ ನಂತರ ಕಾಣಿಕೆ ಹಾಕುವವರ ಪ್ರಮಾಣ ಹೆಚ್ಚಾಗಿದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin