ಮಾರ್ಚ್ 31ರ ನಂತರ ಹಳೆ ನೋಟುಗಳನ್ನಿಟ್ಟುಕೊಂಡರೆ ದಂಡವಷ್ಟೆ, ಜೈಲು ಶಿಕ್ಷೆಯಿಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

Old-Note-Deposit

ನವದೆಹಲಿ. ಡಿ.29 : ಮಾರ್ಚ್ 31ರ ನಂತರವೂ ನಿಷೇಧಿತ 500 ಮತ್ತು 1000 ರೂಪಾಯಿ ನೋಟುಗಳನ್ನು ಇಟ್ಟುಕೊಂಡವರಿಗೆ ಜೈಲು ಶಿಕ್ಷೆ ವಿಧಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಮಾರ್ಚ್ 31ರ ನಂತರ 10ಕ್ಕಿಂತ ಹೆಚ್ಚು ನಿಷೇಧಿತ ನೋಟುಗಳನ್ನು ಇಟ್ಟುಕೊಂಡರೆ ದಂಡದ ಜೊತೆ 4 ವರ್ಷ ಜೈಲು ಶಿಕ್ಷೆಯಾಗಲಿದೆ ಎನ್ನಲಾಗಿತ್ತು. ಆದರೆ ಹಳೆ ನೋಟುಗಳನ್ನಿಟ್ಟುಕೊಂಡಲ್ಲಿ ಭಾರಿ ದಂಡ ತೆರಬೇಕಾಗುತ್ತದೆ. ಆದರೆ ಯಾವುದೇ ಜೈಲು ಶಿಕ್ಷೆ ಇರುವುದಿಲ್ಲ,
ಕೇಂದ್ರ ಸರ್ಕಾರ ಹೊರಡಿಸಿದ್ದ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಒಪ್ಪಿಗೆ ಸೂಚಿಸಿದ್ದಾರೆ.

ಡಿ.31ರಿಂದ ಸುಗ್ರೀವಾಜ್ಞೆ ಅನುಷ್ಠಾನಗೊಳ್ಳಲಿದೆ. ಅದರಲ್ಲಿ ಪ್ರಸ್ತಾವಿತ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸುವುದನ್ನು ಕೈಬಿಡಲಾಗಿದೆ. ಜೈಲು ಶಿಕ್ಷೆಗೆ ಒಪ್ಪಿಗೆ ಸಿಗದ ಹಿನ್ನೆಲೆಯಲ್ಲಿ ಈ ಬದಲಾವಣೆ ಮಾಡಲಾಗಿದೆ. ಹಳೆಯ ನೋಟುಗಳು ಇದ್ದರೆ ಕನಿಷ್ಠ 10 ಸಾವಿರ ದಂಡ ಅಥವಾ ನಗದು ಹೊಂದಿರುವ ಐದು ಪಟ್ಟು ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ.

ಹಳೆ ನೋಟು ಇಟ್ಟುಕೊಂಡವರೆಲ್ಲ ಮಾರ್ಚ್ 31ರೊಳಗೆ ಅದನ್ನು ಡೆಪಾಸಿಟ್ ಮಾಡುವಂತೆ ಸರ್ಕಾರ ಸೂಚಿಸಿದೆ. ಡಿಸೆಂಬರ್ 31ರ ನಂತರ ನಿಷೇಧಿತ ನೋಟುಗಳನ್ನು ಆರ್ ಬಿ ಐನಲ್ಲಿ ಠೇವಣಿ ಇಡಬಹುದಾಗಿದೆ. ಇನ್ನು ನೋಟು ನಿಷೇಧದಿಂದ ಹಣಕಾಸಿನ ವಹಿವಾಟಿನಲ್ಲಿ ಸಾಕಷ್ಟು ಪಾರದರ್ಶಕತೆ ಬಂದಿದೆ, ಇದರಿಂದ ಭಾರತದ ಹಣಕಾಸು ವ್ಯವಸ್ಥೆ ಮೇಲೆ ಸಕಾರಾತ್ಮಕ ಪರಿಣಾಮ ಉಂಟಾಗಲಿದೆ ಎಂದು ಆರ್ ಬಿ ಐ ಗವರ್ನರ್ ಉರ್ಜಿತ್ ಪಟೇಲ್ ಅಭಿಪ್ರಾಯಪಟ್ಟಿದ್ದಾರೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin