ತುಮಕೂರು ಪೊಲೀಸರ ಭರ್ಜರಿ ಬೇಟೆ : ಲಕ್ಷಾಂತರ ಮೌಲ್ಯದ ಬ್ರೌನ್‍ಶುಗರ್ ವಶ, ನಾಲ್ವರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

Tumakuru-Police

ತುಮಕೂರು, ಡಿ.30- ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಯುವ ಜನತೆಗೆ ಭಾರೀ ಪ್ರಮಾಣದಲ್ಲಿ ಮಾದಕ ದ್ರವ್ಯಗಳನ್ನು ಪೂರೈಸಲು ಸಜ್ಜಾಗಿದ್ದ ಖದೀಮರ ತಂಡವೊಂದನ್ನು ಬಂಧಿಸುವಲ್ಲಿ ತುಮಕೂರು ಡಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.  ನಗರದಲ್ಲಿ ಕಳೆದ ಹಲವಾರು ವರ್ಷಗಳಿಂದ ಮಾದಕ ವಸ್ತುಗಳ ಮಾರಾಟ ದಂಧೆ ಎಗ್ಗಿಲ್ಲದೆ ನಡೆದಿತ್ತು. ಆದರೆ ನಿನ್ನೆ ಮಧ್ಯರಾತ್ರಿ ದಿಢೀರ್ ಕಾರ್ಯಾಚರಣೆಗಿಳಿದ ಡಿಸಿಬಿ ಪೊಲೀಸರು ಅಡ್ಡೆಯೊಂದರ ಮೇಲೆ ದಿಢೀರ್ ದಾಳಿ ನಡೆಸಿ ನಾಲ್ವರನ್ನು ಬಂಧಿಸಿ ಲಕ್ಷಾಂತರ ಮೌಲ್ಯದ ಬ್ರೌನ್‍ಶುಗರನ್ನುವಶಪಡಿಕೊಂಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ಗುಜರಿ ಅಂಗಡಿಯೊಂದರಲ್ಲಿ ಈ ದಂಧೆ ನಡೆಯುತ್ತಿತ್ತು. ಈ ಬಗ್ಗೆ ಡಿಸಿಬಿ ತಂಡದ ಪೇದೆಯೊಬ್ಬರಿಗೆ ಹಲವು ದಿನಗಳ ಹಿಂದೆ ಗುಮಾನಿ ಬಂದ ಹಿನ್ನೆಲೆಯಲ್ಲಿ ಕಳೆದ ಮಧ್ಯ ರಾತ್ರಿ ಗುಜರಿ ಅಂಗಡಿ ಮೇಲೆ ದಾಳಿ ನಡೆಸಿ ನಾಲ್ವರನ್ನು ಬಂಧಿಸಿ ಲಕ್ಷಾಂತರ ಮೌಲ್ಯದ 777 ಮಾರ್ಕ್‍ನ ಬ್ರೌನ್‍ಶುಗರನ್ನು ವಶಪಡಿಕೊಂಡಿದ್ದಾರೆ.

ಈ ಖದೀಮರ ಗುರಿ ಕಾಲೇಜು ವಿದ್ಯಾರ್ಥಿಗಳು ಮತ್ತು ಯುವಜನತೆ. ಈ ಹಿಂದೆಯೂ ಒಂದೆರಡು ಬಾರಿ ದಾಳಿ ನಡೆದಿತ್ತು. ಆದರೆ ದಂಧೆಕೋರರು ಸಿಕ್ಕಿರಲಿಲ್ಲ. ಕೊಡಗು, ಹಾಸನ, ಬೆಂಗಳೂರು, ತುಮಕೂರಿನ ವ್ಯಕ್ತಿಗಳು ಇದರಲ್ಲಿ ಭಾಗಿಯಾಗಿದ್ದರು. ಈ ದಂಧೆಯ ಹಿಂದೆ ದೊಡ್ಡ ಜಾಲವೇ ಇದ್ದು ಪೊಲೀಸರು ತನಿಖೆಯನ್ನುತೀವ್ರಗೊಳಿಸಿದ್ದಾರೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin