ನೋಟ್ ಬ್ಯಾನ್ ಎಫೆಕ್ಟ್ : ಶಿರಡಿ ಸಾಯಿಬಾಬಾ ದೇಗುಲಕ್ಕೆ ಹರಿದುಬಂತು 31.73 ಕೋಟಿ ರೂ.ಕಾಣಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Saibaba01

ಶಿರಡಿ, ಡಿ.30-ಕೇಂದ್ರ ಸರ್ಕಾರ ನೋಟು ರದ್ದುಗೊಳಿಸಿದ ನಂತರ ಕಳೆದ 50 ದಿನಗಳ ಅವಧಿಯಲ್ಲಿ ಮಹಾರಾಷ್ಟ್ರದ ವಿಶ್ವವಿಖ್ಯಾತ ಶಿರಡಿ ಸಾಯಿಬಾಬಾ ಮಂದಿರಕ್ಕೆ ಸಾಯಿ ಭಕ್ತರಿಂದ 31.73 ಕೋಟಿ ರೂ.ಗಳ ದಾಖಲೆ ಪ್ರಮಾಣದ ವಂತಿಗೆ ಮತ್ತು ಕಾಣಿಕೆಗಳು ಸಂದಾಯವಾಗಿವೆ. ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್‍ಗೆ 4.53 ಕೋಟಿ ರೂ.ಗಳ ಹಳೇ ನೋಟುಗಳು ಮತ್ತು 3.80 ಕೋಟಿ ರೂ.ಗಳ ಹೊಸ ನೋಟುಗಳೂ ಸೇರಿದಂತೆ ವಿವಿಧ ರೂಪದಲ್ಲಿ 31.73 ಕೋಟಿ ರೂ. ದೇಣಿಗೆಗಳು ಸಂಗ್ರಹವಾಗಿವೆ ಎಂದು ಟ್ರಸ್ಟಿಗಳಲ್ಲಿ ಒಬ್ಬರಾದ ಸಚಿನ್ ತಂಬೆ ಹೇಳಿದ್ದಾರೆ.
ಕಳೆದ 50 ದಿನಗಳಲ್ಲಿ ವಿವಿಧ ಡೊನೇಷನ್ ಕೌಂಟರ್‍ಗಳಲ್ಲಿ ಕ್ರೆಡಿಟ್/ಡೆಬಿಟ್ ಕಾರ್ಡ್‍ಗಳ ಮೂಲಕ 2.62 ಕೋಟಿ ರೂ.ಗಳೂ ಸೇರಿದಂತೆ ಕಾಣಿಕೆ ಹುಂಡಿಗಳಲ್ಲಿ 18.96 ಕೋಟಿ ರೂ.ಗಳು, ಬ್ಯಾಂಕ್ ಡಿಮ್ಯಾಂಡ್ ಡ್ರಾಫ್ಟ್‍ಗಳ ಮೂಲಕ 3.96 ಕೋಟಿ ರೂ.ಗಳು, ಆನ್‍ಲೈನ್ ಡೊನೇಷನ್ ರೂಪದಲ್ಲಿ 1.46 ಕೋಟಿ ರೂ.ಗಳು ಹಾಗೂ ಮನಿ ಆರ್ಡರ್‍ಗಳ ಮುಖೇನ 35 ಲಕ್ಷ ರೂ.ಗಳು ಸಂಗ್ರಹವಾಗಿವೆ ಎಂದು ಅವರು ತಿಳಿಸಿದ್ದಾರೆ.

ನಗದು ದೇಣಿಗೆ, ವಂತಿಗೆ ಮತ್ತು ಕಾಣಿಕೆಗಳಲ್ಲದೇ, ಟ್ರಸ್ಟ್‍ಗೆ 73 ಲಕ್ಷ ರೂ. ಮೌಲ್ಯದ 2.90 ಕೆಜಿ ಚಿನ್ನ ಹಾಗೂ 18 ಲಕ್ಷ ರೂ. ಬೆಲೆಬಾಳುವ 56 ಕೆಜಿ ಬೆಳ್ಳಿ ಆಭರಣಗಳೂ ಭಕ್ತರಿಂದ ಸಂದಾಯವಾಗಿವೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin