ಪಂಜಾಬ್ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ : ಕೇಜ್ರಿವಾಲ್

ಈ ಸುದ್ದಿಯನ್ನು ಶೇರ್ ಮಾಡಿ

Arvind-Kejriwal-0001

ಅಮೃತಸರ,ಡಿ.30- ಪಂಜಾಬ್  ಮುಖ್ಯಮಂತ್ರಿ ಅಭ್ಯರ್ಥಿ ಹುದ್ದೆಗೆ ಸಂಬಂಸಿದ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಿರುವ ದಿಲ್ಲಿ ಮುಖ್ಯಮಂತ್ರಿ ಮತ್ತು ಆಮ್
ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್  ಅವರು, ಮುಂಬರುವ ಪಂಜಾಬ್    ವಿಧಾನಸಭಾ ಚುನಾವಣೆಯಲ್ಲಿ ತಾವು ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕೇಜ್ರಿವಾಲ್ ತಾಕತ್ತಿದ್ದರೆ ತಮ್ಮ ವಿರುದ್ಧ ಸ್ಪರ್ಧಿಸಲಿ ಎಂದು   ಟ್ವಿಟರ್  ಮೂಲಕ ಪಂಥಾಹ್ವಾನ ನೀಡಿರುವ   ಪಂಜಾಬ್  ಕಾಂಗ್ರೆಸ್   ಅಧ್ಯಕ್ಷ ಅಮರೀಂದರ್  ಸಿಂಗ್   ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಸಿರುವ ಕೇಜ್ರಿವಾಲ್  ತಾವು ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ.   ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಇದರಿಂದ ನಿಮ್ಮ ಸವಾಲು ಸ್ವೀಕರಿಸುವುದಿಲ್ಲ. ಪಂಜಾಬ್  ರಾಜ್ಯವನ್ನು    ಮಾದಕ ವಸ್ತುಗಳಲ್ಲಿ ಮುಳುಗಿಸಿದ ಬಾದಲ್‍ಗಳು ಹಾಗೂ ಮಜೀತಿಯಾಗಳ ವಿರುದ್ಧ ನಮ್ಮ ಹೋರಾಟ.

ನೀವು ನಮ್ಮೊಂದಿಗೆ ಹೋರಾಡುತ್ತಿದ್ದೀರಿ;

ಅವರ ವಿರುದ್ಧ ಅಲ್ಲ ಎಂದು ಟ್ವಿಟ್ಟರ್ ಮೂಲಕ ಎದಿರೇಟು ನೀಡಿದ್ದಾರೆ.  ಪಂಜಾ ಸ್ರ್ಪಸುವುದಿಲ್ಲ ಎಂದು ಕೇಜ್ರಿವಾಲ್  ಸ್ಪಷ್ಟಪಡಿಸಿರುವುದು ಇದೇ ಮೊದಲು. ಇದು ಸುದೀರ್ಘವಾಗಿ ಯೋಚಿಸಿಯೇ  ಮಾಡಿದ ಟ್ವೀಟ್ ಆಗಿದ್ದು, ಚುನಾವಣೆಗೆ ಸ್ರ್ಪಸದ ಹಿನ್ನೆಲೆಯಲ್ಲಿ ಕೇಜ್ರಿವಾಲ್  ಅವರು ಪಂಜಾಬ್ ಮುಖ್ಯಮಂತ್ರಿ ರೇಸ್‍ನಲ್ಲೂ ಇರುವುದಿಲ್ಲ ಎಂದು ತಜ್ಞರು ವಿಶ್ಲೇಷಿಸಿದ್ದಾರೆ. ಅದಾಗ್ಯೂ ಆಪ್ ಪಕ್ಷದ ಪಂಜಾಬ್ ಚುನಾವಣಾ ಪ್ರಚಾರ ಕೇಜ್ರಿವಾಲ್  ಕೇಂದ್ರಿತವಾಗಿದೆ. ಕೇಜ್ರಿವಾಲ್  ತಿಂಗಳಿಗೆ 10-15 ದಿನಗಳನ್ನು ಪಂಜಾಬ್‍ನಲ್ಲಿ ಕಳೆಯುತ್ತಿದ್ದಾರೆ. ಕೇಜ್ರಿವಾಲ್ ಜತೆ ಇಡೀ ಪಂಜಾಬ್ ಇದೆ ಎಂಬ ಘೋಷಣೆಗಳ ಮೂಲಕ ಪ್ರಚಾರ ಕೈಗೊಂಡಿದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin