ಪುಣೆಯಲ್ಲಿ ಟೆಕ್ಕಿ ಕೊಲೆ ಪ್ರಕರಣ : ಬೆಂಗಳೂರು ಮೂಲದ ಯುವಕನ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

Antara-Das

ಪುಣೆ, ಡಿ.30- ಇಲ್ಲಿನ ಮಹಿಳಾ ಸಾಫ್ಟ್ವೇರ್ ಎಂಜಿನಿಯರ್ ಕೊಲೆ ಪ್ರಕರಣದಲ್ಲಿ ಬೆಂಗಳೂರು ಮೂಲದ ಯುವಕನನ್ನು ಬಂಧಿಸಲಾಗಿದೆ. ಸಾಫ್ಟ್ವೇರ್ ಎಂಜಿನಿಯರ್ ಆಗಿರುವ ಸಂತೋಷ್‍ಕುಮಾರ್ (25) ಬಂಧಿತ ವ್ಯಕ್ತಿ. ಟೆಕಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಶ್ನಿಸಲು ಈತನನ್ನು ವಶಕ್ಕೆ ಪಡೆಯಲಾಗಿತ್ತು. ಆ ನಂತರ ಸಂತೋಷ್‍ನನ್ನು ಅನುಮಾನದ ಮೇಲೆ ಬಂಧಿಸಲಾಗಿದೆ.   ಕೊಲೆಯಾದ ದಿನ ತಾನು ಬೆಂಗಳೂರಿನಲ್ಲಿ ಇದ್ದುದಾಗಿ ಪೊಲೀಸರ ಬಳಿ ವಾದಿಸಿದ್ದ. ಆಂತರಾ ದಾಸ್ (21) ಅವರನ್ನು ಪುಣೆಯ ತಲ್ವಾಡೆಯಲ್ಲಿರುವ ಕನ್ಬಯ್ ಚೌಕ್ ಬಳಿ ಕಳೆದ ಶುಕ್ರವಾರ ಆಕೆ ಕಾರ್ಯನಿರ್ವಹಿಸುವ ಕೇಪ್‍ಜೆಮ್ ಇನಿ ಸಂಸ್ಥೆಯ ಹತ್ತಿರದಲ್ಲೇ ಹರಿತವಾದ ಆಯುಧಗಳಿಂದ ಕೊಲ್ಲಲಾಗಿತ್ತು. ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಆಕೆ ಮೃತಪಟ್ಟಿದ್ದರು ಎಂದು ಘೋಷಿಸಲಾಗಿತ್ತು.

ಆಕೆಯ ಪೋಷಕರು ಒಬ್ಬ ಯುವಕ ಆಕೆಗೆ ಕಾಟ ಕೊಡುತ್ತಿದ್ದ ಎಂದು ದೂರಿದ್ದರು. ಈ ದೂರಿನ ಮೇರೆಗೆ ಬೆಂಗಳೂರಿನಲ್ಲಿ ಯುವಕನನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ ಅಂತರಾದಾಸ್‍ನನ್ನು ತಾನು ಕೊಲೆಗೈದಿದ್ದಾಗಿ ಆತ ಒಪ್ಪಿಕೊಂಡಿದ್ದಾನೆ. ತನ್ನನ್ನು ಪ್ರೀತಿಸುವಂತೆ ಅಂತಾರಾದಾಸ್‍ಳ ಹಿಂದೆ ಬಿದ್ದಿದ್ದ ಸಂತೋಷ್‍ನನ್ನು ಆಕೆ ನಿಂದಿಸಿ ಅಪಮಾನ ಮಾಡಿದ್ದಳೆನ್ನಲಾಗಿದೆ. ಪ್ರೇಮ ವೈಫಲ್ಯ ಮತ್ತು ವೈಷಮ್ಯದಿಂದಾಗಿ ಈ ಹತ್ಯೆ ನಡೆದಿರುವುದು ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜಕುಮಾರ್ ಶಿಂಧೆ ತಿಳಿಸಿದ್ಧಾರೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin