ಅಮ್ಮನನ್ನು ನೆನೆದು ಕಣ್ಣೀರಿಟ್ಟ ಚಿನ್ನಮ್ಮ

ಈ ಸುದ್ದಿಯನ್ನು ಶೇರ್ ಮಾಡಿ

Chinnamma-Amma

ಚೆನ್ನೈ, ಡಿ.31- ಜಯಲಲಿತಾ ಪರಮಾಪ್ತೆ ಚಿನ್ನಮ್ಮ ಖ್ಯಾತಿಯ ವಿ.ಕೆ.ಶಶಿಕಲಾ ನಟರಾಜನ್ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿಯಾಗಿ ಇಂದು ವಿಧ್ಯುಕ್ತವಾಗಿ ಅಧಿಕಾರ ಸ್ವೀಕರಿಸಿದರು.
ಚೆನ್ನೈಯ ರಾಯಪೇಟಾದಲ್ಲಿರುವ ಪಕ್ಷದ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಅವರು ಅಣ್ಣಾಡಿಎಂಕೆ ನೂತನ ಮುಖ್ಯಸ್ಥೆಯಾಗಿ ಪದಗ್ರಹಣ ಮಾಡಿದರು. ಮುಖ್ಯಮಂತ್ರಿ ಓ ಪನ್ನೀರ್ ಸೆಲ್ವಂ, ಹಿರಿಯ ಧುರೀನ ಇ. ಮಧುಸೂದನನ್, ಸಂಪುಟ ಸಚಿವರು ಮತ್ತು ಮುಖಂಡರು ಹಾಜರಿದ್ದು ಶಶಿಕಲಾ ಅವರಿಗೆ ಶುಭಕೋರಿದರು.

ಅಧಿಕಾರ ಸ್ವೀಕರಿಸಲು ಅಗಮಿಸಿದ ಶಶಿಕಲಾ ಅವರಿಗೆ ರಸ್ತೆಗಳ ಇಕ್ಕೆಲಗಳಲ್ಲಿ ಜಮಾಯಿಸಿದ್ದ ಅಸಂಖ್ಯಾತ ಕಾರ್ಯಕರ್ತರು ಸ್ವಾಗತಿಸಿದರು. ಕಚೇರಿಗೆ ಆಗಮಿಸುತ್ತಿದ್ದಂತೆ ಅವರು ಪಕ್ಷದ ಸಂಸ್ಥಾಪಕ ಡಾ.ಎಂ.ಜಿ.ರಾಮಚಂದ್ರನ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ನಿನ್ನೆ ರಾತ್ರಿ ಅವರು ಮರೀನಾ ಬೀಚ್‍ನಲ್ಲಿ ಎಂಜಿಆರ್ ಮತ್ತು ಜಯಲಲಿತಾ ಅವರ ಸಮಾಧಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದರು.  ಶ್ರೀವಾರಿ ವೆಂಕಟಾಚಲಪತಿ ಕಲ್ಯಾಣಮಂಟಪಂನಲ್ಲಿ ಗುರುವಾರ ಆಡಳಿತರೂಢ ಎಐಎಡಿಎಂಕೆ ಜನರಲ್ ಕೌನ್ಸಿಲ್ ಸಭೆಯಲ್ಲಿ ಶಶಿಕಲಾ ನಟರಾಜನ್ ಅವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಯನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿತ್ತು.

ಅಮ್ಮನ ನೆನೆದು ಕಣ್ಣೀರಿಟ್ಟ ಚಿನ್ನಮ್ಮ :

ಅಣ್ಣಾ ಡಿಎಂಕೆ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದ ಚಿನ್ನಮ್ಮ ಶಶಿಕಲಾ ನಟರಾಜರ್ ಅವರು ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ, ಅಮ್ಮ ನಮ್ಮೊಂದಿಗಿದ್ದಾರೆ ಅಮ್ಮ ಎಂದರೆ ನನಗೆ ಪ್ರಾಣ ಎಂದು ಭಾವುಕವಾಗಿ ನುಡಿದರು. ಚೆನ್ನೈ ನಲ್ಲಿರುವ ಅಣ್ಣಾ ಡಿಎಂಕೆ ಪಕ್ಷದ ಪ್ರಧಾನ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಮಾತನಾಡುತ್ತಾ, ಅಮ್ಮ ನಮ್ಮ ಬಳಿ ದೈಹಿಕವಾಗಿ ಇಲ್ಲದೇ ಇರುಬಹುದು ಆಧರೆ ಪಕ್ಷವನ್ನು ಅವರು ಇನ್ನೂ ನೂರು ವರ್ಷಗಳ ನಡೆಸಲಿದ್ದಾರೆ. ಅಮ್ಮನಿಗೆ ಪಕ್ಷ ಎಂದರೆ ಜೀವ, ಅಮ್ಮ ಎಂದರೆ ಪ್ರಾಣ ಎಂದು ಹೇಳುತ್ತಾ ಬಾವುಕರಾದರು. ಅಮ್ಮನ ಕನಸುಗಳು ಇನ್ನು ತಮಿಳುನಾಡಿನಲ್ಲಿ ನನಸಾಗಲಿವೆ ಎಂದು ಭಾವುಕರಾಗಿ ನುಡಿದರು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin