ಆರ್‍ಟಿಐ ಕಾರ್ಯಕರ್ತನ ಕಗ್ಗೊಲೆ : ಕಾವೇರಿ ನದಿಯಲ್ಲಿ ಶವ ಪತ್ತೆ

ಈ ಸುದ್ದಿಯನ್ನು ಶೇರ್ ಮಾಡಿ

murder

ಶ್ರೀರಂಗಪಟ್ಟಣ, ಡಿ.31- ಆರ್‍ಟಿಐ ಕಾರ್ಯಕರ್ತನನ್ನು ಬರ್ಬರವಾಗಿ ಕೊಲೆ ಮಾಡಿ ಶವವನ್ನು ಕಂಬಳಿಯಲ್ಲಿ ಸುತ್ತಿ ಕಾವೇರಿ ನದಿಗೆ ಎಸೆದಿರುವ ದುರ್ಘಟನೆ ಬೆಳಕಿಗೆ ಬಂದಿದೆ.ಕೊಲೆಯಾದವನನ್ನು ಮೈಸೂರಿನ ರಾಜರಾಜೇಶ್ವರಿ ನಗರ ನಿವಾಸಿ ಆರ್‍ಟಿಐ ಕಾರ್ಯಕರ್ತ ಶ್ರೀನಿವಾಸ್ ಎಂದು ತಿಳಿದು ಬಂದಿದೆ.ಕಳೆದ ನಾಲ್ಕು ದಿನಗಳ ಹಿಂದೆಯಷ್ಟೇ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿದ್ದ ಅಕ್ರಮಗಳ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ದಾಖಲೆಗಳನ್ನು ಬಿಡುಗಡೆ ಮಾಡಿದ್ದ ಇವರು ದಿಢೀರನೆ ನಾಪತ್ತೆಯಾಗಿದ್ದರು.ಇವರ ಕುಟುಂಬ ಸದಸ್ಯರು ಆತಂಕಗೊಂಡು ಕುವೆಂಪು ನಗರ ಪೊಲೀಸರಿಗೆ ದೂರು ನೀಡಿದ್ದರು.

ನಿನ್ನೆ ಸಂಜೆ ಶ್ರೀರಂಗಪಟ್ಟಣದ ನಿಮಿಷಾಂಬ ದೇಗುಲದ ಕಾವೇರಿ ನದಿ ಸೇತುವೆ ಬಳಿಯ ಬಂಡೆಯೊಂದರ ಬಳಿ ಶವ ಪತ್ತೆಯಾಗಿತ್ತು.
ಪೊಲೀಸರು ಸ್ಥಳಕ್ಕೆ ಬಂದು ಶವವನ್ನು ಮೇಲೆತ್ತಿ ಪರಿಶೀಲಿಸಿ ತನಿಖೆ ಕೈಗೊಂಡಾಗ ಇಂದು ಬೆಳಗ್ಗೆ ಗುರುತು ಪತ್ತೆ ಹಚ್ಚಲಾಗಿದೆ. ದಾಖಲೆ ಬಿಡುಗಡೆಯ ವೈಷಮ್ಯದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿರುವುದು ದೃಢ ಪಟ್ಟಿದೆ. ಕಳೆದ ಎರಡು ದಿನಗಳ ಹಿಂದೆಯೇ ಶ್ರೀನಿವಾಸ್ ಅವರನ್ನು ಅಪಹರಿಸಿ ಕೊಂದಿರಬಹುದು. ನಂತರ ವಾಹನವೊಂದರಲ್ಲಿ ಬಿಸಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin