ಭಾರತ ಮೂಲದ ಶಂಕರ್ ಬಾಲಸುಬ್ರಮಣಿಯನ್‍ಗೆ ನೈಟ್‍ಹುಡ್ ಗೌರವ

ಈ ಸುದ್ದಿಯನ್ನು ಶೇರ್ ಮಾಡಿ

Shankar

ಇಂಗ್ಲೆಂಡ್, ಡಿ.31-ಭಾರತ ಮೂಲದ ಬ್ರಿಟಿಷ್ ರಸಾಯನಶಾಸ್ತ್ರ ಪ್ರೊಫೆಸರ್ ಶಂಕರ್ ಬಾಲಸುಬ್ರಮಣಿಯನ್ ವಿಜ್ಞಾನ ಮತ್ತು ಔಷಧ ಕ್ಷೇತ್ರಕ್ಕೆ ಸಲ್ಲಿಸಿರುವ ಗಣನೀಯ ಕೊಡುಗೆಯನ್ನು ಪರಿಗಣಿಸಿ ಬ್ರಿಟನ್ ಮಹಾರಾಣಿ ಎರಡನೇ ಎಲಿಜಬೆತ್ ಹೊಸ ವರ್ಷದ ಗೌರವಾರ್ಥ ಪ್ರತಿಷ್ಠಿತ ನೈಟ್‍ಹುಡ್ ಗೌರವ ಪ್ರದಾನ ಮಾಡಿದ್ದಾರೆ.   ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ರಸಾಯನಶಾಸ್ತ್ರ ಪ್ರೊಫೆಸರ್ ಆಗಿರುವ 50 ವರ್ಷದ ಬಾಲಸುಬ್ರಮಣಿಯನ್, ಹೊಸ ಪೀಳಿಗೆಯ ಡಿಎನ್‍ಎ ಸೃಷ್ಟಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಜೀವವಿಜ್ಞಾನ ಮತ್ತು ಔಷಧ ಕ್ಷೇತ್ರದಲ್ಲಿ ಇದು ಅತ್ಯಂತ ಮಹತ್ವಪೂರ್ಣ ಪರಿವರ್ತನಾ ಸಂಶೋಧನೆ ಎಂದು ಬಣ್ಣಿಸಲಾಗಿದೆ.

ಈ ಕ್ಷೇತಕ್ಕೆ ಇವರು ಸಲ್ಲಿಸಿದ ಕೊಡುಗೆಯನ್ನು ಗಮನಿಸಿ ಇಂಗ್ಲೆಂಡ್ ರಾಜಮನೆತನದಿಂದ ಪ್ರೊ. ಬಾಲಸುಬ್ರಮಣಿಯನ್ ಅವರಿಗೆ ನೈಟ್‍ಹುಡ್ ಪುರಸ್ಕಾರ ನೀಡಿ ಗೌರವಿಸಲಾಗಿದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin