ಮೇಟಿ ರಾಸಲೀಲೆ ಪ್ರಕರಣ : ಡಿಎಆರ್ ಪೊಲೀಸ್ ಕಾನ್ಸ್ಟೆಬಲ್ ಸುಭಾಷ ಮುಗಳಕೋಡ ಅಮಾನತು

ಈ ಸುದ್ದಿಯನ್ನು ಶೇರ್ ಮಾಡಿ

Meti-gun-Man

ಬಾಗಲಕೋಟೆ, ಡಿ.31- ಮಾಜಿ ಸಚಿವ ಮೇಟಿ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯಾಗಿರುವ ಡಿಎಆರ್ ಪೊಲೀಸ್ ಕಾನ್ಸ್‍ಟೇಬಲ್ ಸುಭಾಷ ಮುಗಳಖೋಡನನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಕರ್ತವ್ಯ ಲೋಪ, ದುರ್ನಡತೆ, ಅಶಿಸ್ತು, ನಿರ್ಲಕ್ಷ್ಯ , ಬೇಜವಾಬ್ದಾರಿ ಪ್ರದರ್ಶನ ನೆಪವೊಡ್ಡಿ ಅಮಾನತುಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಸ್.ನಾಗರಾಜ್ ಅಮಾನತು ಆದೇಶ ಹೊರಡಿಸಿದ್ದಾರೆ.

ಪ್ರಕರಣ ಬೆಳಕಿಗೆ ಬರುವ ಬಹಳ ಹಿಂದೆಯೇ ಆಗಸ್ಟ್ 19ರಿಂದ ಸೇವೆಗೆ ಗೈರು ಹಾಜರಾಗಿದ್ದರು. ಅನಾರೋಗ್ಯ ಹಿನ್ನೆಲೆಯಲ್ಲಿ ರಜೆ ಹಾಕಿದ್ದರು ಎಂದು ತಿಳಿದು ಬಂದಿದೆ.ರಾಸಲೀಲೆಯ ಚಿತ್ರೀಕರಣ ಕೂಡ ಇವರೇ ಮಾಡಿದ್ದರು ಎಂದು ಹೇಳಲಾಗಿದ್ದು, ಇದಕ್ಕಾಗಿ ಹಲವು ದಿನಗಳ ಕಾಲ ಈತನಿಗಾಗಿ ಹುಡುಕಾಟ ನಡೆಸಲಾಗಿತ್ತು. ಮತ್ತು ಮೇಟಿ ಅವರು ದೂರಿನ ಮೇರೆಗೆ ಸುಭಾಷನನ್ನೇ ಪ್ರಮುಖ ಆರೋಪಿ ಮಾಡಿ ಈತನ ಮೇಲೆ ಐಪಿಸಿ 143, 341 , 307, 365, 504, 506, 109 ಸೇರಿದಂತೆ ಹಲವು ಸೆಕ್ಷನ್‍ಗಳಡಿ ಪ್ರಕರಣ ದಾಖಲಾಗಿದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin