ಶೈಕ್ಷಣಿಕ ವರ್ಷದಿಂದ ಸ್ಮಾರ್ಟ್ ಕ್ಲಾಸ್ ಪ್ರಾರಂಭ

ಈ ಸುದ್ದಿಯನ್ನು ಶೇರ್ ಮಾಡಿ

datta
ಕಡೂರು, ಡಿ.31- ಕಾಲ ಬದಲಾಗಿದೆ ವಿಜ್ಞಾನ ಯುಗದಲ್ಲಿ ಪುರಾಣಗಳನ್ನು ಕಡಿಮೆ ಮಾಡಿ ಯಾಂತ್ರಿಕವಾಗಿ ವಿಜ್ಞಾನಕ್ಕೆ ವಿದ್ಯಾರ್ಥಿಗಳು ಪ್ರಾಮುಖ್ಯತೆ ನೀಡಬೇಕಿದೆ. ತರಗತಿಗಳಲ್ಲಿ ಬೋರ್ಡ್ ಬಳಸದೆ, ಸೀಮೆಸುಣ್ಣದಲ್ಲಿ ಬರೆಯದೆ ಸ್ಮಾರ್ಟ್ ಕ್ಲಾಸ್ ಪ್ರಾರಂಭಿಸಲು ಯೋಚಿಸಲಾಗಿದೆ ಎಂದು ಶಾಸಕ ವೈ.ಎಸ್.ವಿ. ದತ್ತರವರು ತಿಳಿಸಿದರು.ಕಡೂರು ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ವಾರ್ಷಿಕ ಸಮಾರಂಭದಲ್ಲಿ ಮಾತನಾಡಿದ ಅವರು,. ಸಿರ್ಸಿ-ಸಿದ್ಧಾಪುರದಲ್ಲಿ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರ ಹೆಸರಿನಲ್ಲಿ ಶಾಲೆಯೊಂದು ನಡೆಯುತ್ತಿದ್ದು, ಆ ಶಾಲೆಯಲ್ಲಿ ಯಾವುದೇ ಶಿಕ್ಷಕರು ಸೀಮೆಸುಣ್ಣ-ಕಪ್ಪು ಬೋರ್ಡ್‍ನ್ನು ಬಳಸದೆ ಕೇವಲ ಕಂಪ್ಯೂಟರ್ ಮೂಲಕ ಪರದೆಯ ಮೇಲೆ ಪಾಠ ಮಾಡುವ ಪದ್ಧತಿ ಅಳವಡಿಸಿದ್ದಾರೆ.

ಇದರ ಪ್ರೇರಣೆಯಿಂದ ಕಡೂರು ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಸಾಂಕೇತಿಕವಾಗಿ ಎರಡು ಕೊಠಡಿಗಳಿಗೆ ಸ್ಮಾರ್ಟ್ ಕ್ಲಾಸ್ ಮೂಲಕ ಮಾರ್ಚ್ ಒಳಗಡೆ ಪಾಠ ಪ್ರಾರಂಭಿಸಲು ಯೋಚಿಸಲಾಗಿದೆ ಎಂದರು.ಸರ್ಕಾರಿ ಶಾಲೆಗಳು ಯಾವುದೇ ಉನ್ನತ ಮಟ್ಟದ ಖಾಸಗಿ ಶಾಲೆಗಳಿಗಿಂತ ಕಡಿಮೆ ಇಲ್ಲದಂತೆ ಶಿಕ್ಷಣ ನೀಡಲಾಗುತ್ತಿದೆ. ಕಡೂರು ಕ್ಷೇತ್ರದಲ್ಲಿ ಬರವಿದೆ, ಆದರೆ ಒಳ್ಳೆಯತನಕ್ಕೆ ಬರವಿಲ್ಲ. ಕಾಲೇಜಿನ ಕೊಠಡಿ ನಿರ್ಮಾಣಕ್ಕೆ ಲೈಬ್ರೇರಿ, ಸಿಬ್ಬಂದಿ ಕೊಠಡಿ, ವಿದ್ಯಾರ್ಥಿಗಳಿಗೆ ವಿಶ್ರಾಂತಿ ಕೊಠಡಿ ನಿರ್ಮಾಣಕ್ಕೆ 80 ಲಕ್ಷ ರೂ. ಅನುದಾನ ಮಂಜೂರಾಗಿದೆ ಎಂದು ತಿಳಿಸಿದರು.ಶಾಲಾಭಿವೃದ್ಧಿ ಸಮಿತಿಯ ಸದಸ್ಯರಾದ ಕೆ.ಎಸ್. ರಮೇಶ್ ಮಾತನಾಡಿ ವೈಜ್ಞಾನಿಕ ಯುಗದಲ್ಲಿ ಪುಟ್ಟ ಪುಟ್ಟ ಮಕ್ಕಳೂ ಸಹ ಎಲ್ಲಾ ರಂಗದಲ್ಲೂ ಮುಂದುವರೆದಿರುತ್ತಾರೆ.

ಶಿಕ್ಷಣದಲ್ಲಿ ಅಂಕ ಗಳಿಸುವುದು ಮುಖ್ಯವಲ್ಲ. ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸಿದಾಗ ಪರಿಪೂರ್ಣ ವ್ಯಕ್ತಿಯಾಗಲು ಸಾಧ್ಯವಾಗಲಿದೆ ಎಂದರು.ಇದೇ ವೇಳೆ ಎಸ್‍ಎಸ್‍ಎಲ್‍ಸಿ ರಾಜ್ಯ ದ್ವಿತೀಯ ಸ್ಥಾನ ಪಡೆದ ಹಾಗೂ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.ಮಾಜಿ ಪುರಸಭಾ ಅಧ್ಯಕ್ಷ ಭಂಡಾರಿ ಶ್ರೀನಿವಾಸ್, ಜಿಲ್ಲಾ ಮುಖ್ಯೋಪಾಧ್ಯಾಯರ ಸಂಘದ ಜಿಲ್ಲಾ ಅಧ್ಯಕ್ಷ ಟಿ.ಆರ್. ಲಕ್ಕಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಕಂಠೇಶ್ವರ್, ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ಜಯಪ್ಪ, ಉಪಪ್ರಾಂಶುಪಾಲರಾದ ಶೀಲ, ಗುತ್ತಿಗೆದಾರ ಶ್ರೀನಿವಾಸ್ ಹಾಗೂ ಶಾಲಾಭಿವೃದ್ಧಿ ಸಮಿತಿಯ ಸದಸ್ಯರುಗಳು ಭಾಗವಹಿಸಿದ್ದರು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin